ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಕ್ರಿಸ್ಮಸ್ ಸೆಲೆಬ್ರೆಷನ್ ಶುರುವಾಗಿದೆ. ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್‍ನಲ್ಲಿ ಕೇಕ್‍ಗಳ ಲೋಕ ಧರೆಗಿಳಿದಿದೆ. ವಿಶೇಷ ಎಂದರೆ ಕೇಕ್‍ನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪ್ರತಿರೂಪದ ಮೂಡಿದೆ.
ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್‍ನಲ್ಲಿ 45ನೇ ವರ್ಷದ ಕೇಕ್ ಶೋ ಆಯೋಜಿಸಿದ್ದು, ತನ್ನ ವಿಶಿಷ್ಟತೆಯ ಮೂಲವೇ ಗಮನ ಸೆಳೆಯುತ್ತಿದೆ. ಜೊತೆಗೆ ರಾಷ್ಟ್ರಭಕ್ತಿಯನ್ನು ಮೆರೆಯುತ್ತಿದೆ.
Advertisement
Advertisement
ಈ ಶೋನಲ್ಲಿ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಮಾಡಿಕೊಂಡ ರಫೇಲ್ ಯುದ್ಧ ವಿಮಾನ, ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಪ್ರತಿರೂಪದ ಮೂಡಿದ್ದು, ಎಲ್ಲರ ಗಮನ ತನತ್ತ ಸೆಳೆಯುತ್ತಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಧರೆಗಿಳಿದ ಕೇಕ್‍ಗಳ ಲೋಕ
Advertisement
ವಿಂಗ್ ಕಮಾಂಡರ್ ಅಭಿನಂದನ್ ಪ್ರತಿರೂಪವನ್ನು 3.5 ಅಡಿ ಎತ್ತರ, 2 ಫೀಟ್ ಅಗಲ ಹಾಗೂ 2 ಫೀಟ್ ಉದ್ದದಲ್ಲಿ 225 ಕೆಜಿ ಕೇಕ್‍ನಲ್ಲಿ ತಯಾರಿಸಲಾಗಿದೆ. ಹಾಗೆಯೇ ರಫೇಲ್ ಯುದ್ಧ ವಿಮಾನ 4 ಅಡಿ ಉದ್ದ, 3 ಅಡಿ ಅಗಲ, 1.5 ಫೀಟ್ ಎತ್ತರ ಹಾಗೂ 125 ಕೆ.ಜಿ ಕೇಕ್ ನಲ್ಲಿ ತಯಾರಾಗಿದೆ.
Advertisement
ಜನರು ರಫೇಲ್ ಯುದ್ಧ ವಿಮಾನ ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ಪ್ರತಿರೂಪದ ಕೇಕ್ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.