ಭೋಪಾಲ್: ಹೊಸ ವರ್ಷಕ್ಕೆ ಮಧ್ಯಪ್ರದೇಶ ಸರ್ಕಾರ (Madhya Pradesh Government) ವನ್ಯಜೀವಿ ಪ್ರಿಯರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ನಮೀಬಿಯಾದಿಂದ (Namibia) ತರಿಸಲಾದ ಚಿರತೆಗಳು (Cheetah) ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಆರೋಗ್ಯವಾಗಿವೆ. ಈ ಹಿನ್ನೆಲೆಯಲ್ಲಿ 2023ರ ವರ್ಷದ ಫೆಬ್ರವರಿಯಿಂದ ಕುನೊ ಪಾರ್ಕ್‌ನಲ್ಲಿ ಚೀತಾ ಪ್ರವಾಸೋದ್ಯಮ (Cheetah Tourism) ಆರಂಭಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಕುನೊ ರಾಷ್ಟ್ರೀಯ ಉದ್ಯಾನವನದ (Kuno National Park) ವಿಭಾಗೀಯ ಅರಣ್ಯಾಧಿಕಾರಿ (DFO) ಪ್ರಕಾಶ್ ಕುಮಾರ್ ವರ್ಮಾ ಈ ಬಗ್ಗೆ ಮಾತನಾಡಿದ್ದಾರೆ. ಚೀತಾಗಳನ್ನು ಹಂತ-ಹಂತವಾಗಿ ದೊಡ್ಡ ಆವರಣಕ್ಕೆ ಬಿಡಲಾಗಿದೆ. ಈಗ ಅವು ವಾತಾವರಣಕ್ಕೆ ಒಗ್ಗಿಕೊಂಡಿದ್ದು, ಆರೋಗ್ಯಕರವಾಗಿವೆ. ಎಲ್ಲಾ ಚಿರತೆಗಳು ಸಂಪೂರ್ಣವಾಗಿ ಫಿಟ್ ಆಗಿದ್ದು ಮುಕ್ತವಾಗಿ ಬೇಟೆಯಾಡುತ್ತಿವೆ. ಆದ್ರೆ ದೊಡ್ಡ ಆವರಣದಲ್ಲಿರುವ ಚಿರತೆಗಳನ್ನು ತೆರೆದ ಅರಣ್ಯಕ್ಕೆ ಬಿಡುವ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ಚೀತಾ ಟಾಸ್ಕ್ ಫೋರ್ಸ್, ಚಿರತೆ ಪರಿಚಯಿಸುವ ಯೋಜನೆಯ ಮೇಲ್ವಿಚಾರಣೆಯ ತಜ್ಞರ ಗುಂಪು ಹಾಗೂ ಮಧ್ಯಪ್ರದೇಶ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳಲಿದೆ ಎಂದು ಹೇಳಿದ್ದಾರೆ.
Advertisement
Advertisement
ಚೀತಾಗಳು ಹಂತ-ಹಂತವಾಗಿ ಕಾಡಿಗೆ: ಕಳೆದ ನವೆಂಬರ್ 5 ರಂದು ಎಲ್ಟನ್ ಮತ್ತು ಫ್ರೆಡ್ಡಿ ಗಂಡು ಚೀತಾ, ನವೆಂಬರ್ 18ರಂದು ಒಬಾನ್ ಗಂಡು ಚೀತಾ, ನವೆಂಬರ್ 27 ರಂದು ಆಶಾ ಮತ್ತು ಟಿಬಿಲಿಸಿ ಹೆಣ್ಣು ಚೀತಾ, ನವೆಂಬರ್ 28 ರಂದು ಸಿಯಾಯಾ, ಸವನ್ನಾ ಹಾಗೂ ಸಾಶಾ ಹೆಣ್ಣು ಚಿರತೆಗಳನ್ನ ದೊಡ್ಡ ಆವರಣಕ್ಕೆ ಬಿಡಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಭೀಕರ ಹತ್ಯೆ – ಶಿರಚ್ಛೇದಿಸಿ, ಚರ್ಮ ಸುಲಿದ್ರು
Advertisement
ಆದಾಗ್ಯೂ 2023ರ ಫೆಬ್ರವರಿಯಿಂದ ಚೀತಾ ಪ್ರವಾಸೋದ್ಯಮ ಆರಂಭವಾಗುವ ನಿರೀಕ್ಷೆಯನ್ನ ಅಧಿಕಾರಿಗಳು ಹೊಂದಿದ್ದಾರೆ. ಅದಕ್ಕೆ ಪೂರಕ ಸಿದ್ಧತೆಗಳೂ ಬರದಲ್ಲಿ ಸಾಗುತ್ತಿವೆ. ಎಲ್ಲವೂ ಅಂದುಕೊಂಡಂತೆ ಆದ್ರೆ, 75 ವರ್ಷಗಳ ಬಳಿಕ ಕಾಡಿನಲ್ಲಿ ಚೀತಾಗಳು ಕಾಣಿಸಿಕೊಳ್ಳಲಿವೆ. ಅಲ್ಲದೇ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ಅವರು ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಬರ್ತಾರೆ ಅಂತ ಅಸೆಂಬ್ಲಿ ಮೊಟಕುಗೊಳಿಸಿದ್ರು: ಸಿದ್ದರಾಮಯ್ಯ
ಅಲ್ಲದೇ ಭಾರತೀಯ ವನ್ಯಜೀವಿ ಸಂಸ್ಥೆಯು (Wildlife Institute of India) ಸಿದ್ಧಪಡಿಸಿದ `ಭಾರತದಲ್ಲಿ ಚಿರತೆಯ ಮರುಪರಿಚಯಕ್ಕಾಗಿ ಕ್ರಿಯಾ ಯೋಜನೆ’ ಚೀತಾ ಫ್ಯಾಮಿಲಿಯನ್ನು ಅಭಿವೃದ್ಧಿ ಪಡಿಸಲು ಇನ್ನೂ 12 ರಿಂದ 14 ಚೀತಾಗಳನ್ನು (ಹೆಣ್ಣು-ಗಂಡು ಸೇರಿದಂತೆ) ದಕ್ಷಿಣ ಆಫ್ರಿಕಾ, ನಮೀಬಿಯಾ ಹಾಗೂ ಇತರ ಆಫ್ರಿಕನ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.