ಮೈಸೂರು: ಬೆಳಗಾವಿ (Belagavi) ಆಯ್ತು ಇದೀಗ ಮೈಸೂರಿಗೆ (Mysuru) ಚಿರತೆ ಭೀತಿ ಶುರುವಾಗಿದೆ. ಮೈಸೂರಿನ ಆರ್.ಬಿ.ಐ. ನೌಕರರಿಗೆ ಚಿರತೆ ಕಾಟ ಬಹಳ ಜಾಸ್ತಿಯಾಗಿದೆ.
Advertisement
ಕಳೆದ 2 ವಾರದಿಂದ ಚಿರತೆ ಫ್ಯಾಮಿಲಿಯ ಓಡಾಟ ಹೆಚ್ಚಾಗಿದ್ದು ಆರ್.ಬಿ.ಐ. ನೌಕರರು, ಕುಟುಂಬಸ್ಥರು ಭಯಭೀತರಾಗಿದ್ದಾರೆ. ಮೈಸೂರಿನ ಹೊರ ವಲಯದ ಮೇಟಗಳ್ಳಿಯ ನೋಟು ಮುದ್ರಣಾಲಯ ಸುತ್ತ ಚಿರತೆ ಫ್ಯಾಮಿಲಿ ಬೀಡು ಬಿಟ್ಟಿದೆ. ಇದನ್ನೂ ಓದಿ: ಚಿರತೆ ಸೆರೆಗೆ ಕೈಯಲ್ಲಿ ಕೋಲು ಹಿಡಿದು ಬಂದ ಮಹಿಳಾಮಣಿಗಳು
Advertisement
Advertisement
ಎರಡು ಮರಿಗಳೊಂದಿಗೆ ತಾಯಿ ಚಿರತೆ (Cheetah) ಸಂಚಾರ ಮಾಡುತ್ತಿದ್ದು, ಚಿರತೆ ಕಂಡು ನೌಕರರು ಕಂಗೆಟ್ಟಿದ್ದಾರೆ. ಬೀದಿ ನಾಯಿಗಳನ್ನು ಎಳೆದೊಯ್ದಿರುವ ಚಿರತೆ, ದಿನದಿಂದ ದಿನಕ್ಕೆ ಈ ಭಾಗದಲ್ಲಿ ನಾಯಿಗಳು ಕಡಮೆಯಾಗುತ್ತಿದ್ದು ಜನರು ಮನೆಯಿಂದ ಹೊರಗೆ ಬರಲೂ ಹೆದರುತ್ತಿದ್ದಾರೆ. ಹೀಗಾಗಿ ಈ ಭಾಗದಲ್ಲಿರೋ ಕೇಂದ್ರೀಯ ವಿದ್ಯಾಲಯಕ್ಕೆ ವಾರದಿಂದ ರಜೆ ನೀಡಲಾಗಿದೆ.
Advertisement
ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ (Forest Department) ಸಿಬ್ಬಂದಿ. ಎರಡು ಕಡೆ ಬೋನ್ ಇಟ್ಟರೂ ಚಿರತೆ ಸೆರೆಯಾಗಿಲ್ಲ. ಇದನ್ನೂ ಓದಿ: 23ನೇ ದಿನಕ್ಕೆ ಕಾಲಿಟ್ಟ ಚಿರತೆ ಸೆರೆ ಕಾರ್ಯಾಚರಣೆ- 22 ಶಾಲೆಗಳಿಗೆ ರಜೆ ಮುಂದುವರಿಕೆ