ರಸ್ತೆ ದಾಟುವಾಗ ವಾಹನದ ಚಕ್ರಕ್ಕೆ ಸಿಲುಕಿ ಚಿರತೆ ಸಾವು

Public TV
1 Min Read
CHEETAH

ಬಳ್ಳಾರಿ: ಚಿರತೆಯೊಂದು ರಸ್ತೆ ದಾಟುವಾಗ ವಾಹನದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಹೊಸಪೇಟೆ ತಾಲೂಕಿನ ತಿಮ್ಮಲಾಪುರದ ರಾಷ್ಟ್ರೀಯ ಹೆದ್ದಾರಿ 13ರ ಬಳಿ ಗುರುವಾರ ರಾತ್ರಿ ನಡೆದಿದೆ.

CHEETAH 1

ತಿಮ್ಮಲಾಪುರ ಬಳಿಯ ಪೋತಲಕಟ್ಟಿ ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ಸುಮಾರು ಒಂದೂವರೆ ವರ್ಷದ ಗಂಡು ಚಿರತೆ ಆಹಾರವನ್ನರಸಿ ರಸ್ತೆ ದಾಟುವಾಗ ವಾಹನದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆರ್‍ಎಫ್‍ಓ ನಾಗರಾಜ್ ಭೇಟಿ ನೀಡಿದ್ರು.

CHEETAH 2

ಇದೇ ವೇಳೇ ಮಾತನಾಡಿದ ಅವರು, ನಿನ್ನೆ ರಾತ್ರಿ ಆಹಾರಕ್ಕೆ ರಸ್ತೆ ದಾಟುವಾಗ ರಸ್ತೆ ದುರಸ್ತಿ ಕಾರ್ಯ ಹಾಗೂ ವಾಹನ ದಟ್ಟಣೆಯಿಂದ ಚಿರತೆ ವಿಚಲಿತಗೊಂಡು ಈ ಅವಘಡ ಸಂಭವಿಸಿರಬಹುದು. ಮರಣೋತ್ತರ ಪರೀಕ್ಷೆಗೆ ಹೊಸಪೇಟೆಗೆ ಸಾಗಿಸಲಾಗುವುದು ಎಂದರು.

CHEETAH 5

ಚಿರತೆಯನ್ನು ನೋಡಲು ಜನಜಂಗುಳಿ ಹೆಚ್ಚಾಗಿ, ಫೋಟೋ ವಿಡಿಯೋ ಮಾಡಲು ಜನ ಮುಗಿಬಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತಂದು ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯನ್ನು ಹೊಸಪೇಟೆಗೆ ಸಾಗಿಸಿದರು.

CHEETAH 3

CHEETAH 4

Share This Article
Leave a Comment

Leave a Reply

Your email address will not be published. Required fields are marked *