ಮುಂಬೈ: ಕಾಡು ಹಂದಿಗಳನ್ನು ಬೇಟೆಯಾಡುವ (Hunting) ಸಲುವಾಗಿ ಹಾಕಲಾಗಿದ್ದ ಲೈವ್ ವೈರ್‌ಗಳ ಸ್ಪರ್ಶದಿಂದ ಹೆಣ್ಣು ಚಿರತೆ (Cheetah) ಮತ್ತು ಎರಡು ಚಿರತೆ ಮರಿಗಳು (Cubs) ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ (Maharashtra) ಗೊಂಡಿಯಾ (Gondia) ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಜಿಲ್ಲೆಯ ದೇವೋರಿ (Deori) ಅರಣ್ಯ ವ್ಯಾಪ್ತಿಯಲ್ಲಿ ಗಾಳಿಗೆ ದುರ್ವಾಸನೆ ಬೀರುತ್ತಿರುವ ಬಗ್ಗೆ ವ್ಯಕ್ತಿಯೋರ್ವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯ ಸ್ಥಾನಮಾನ ಯಾವಾಗ? – ಕಾಲಮಿತಿ ತಿಳಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ
Advertisement
Advertisement
ದುರ್ವಾಸನೆ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಶೋಧ ನಡೆಸಿದಾಗ ಚಿರತೆ ಹಾಗೂ ಎರಡು ಮರಿಗಳ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಕಳ್ಳಬೇಟೆಗೆ ಬಳಸಿದ ವಿದ್ಯುತ್ ತಂತಿಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸುಳಿವಿನ ಮೇರೆಗೆ ಅರಣ್ಯಾಧಿಕಾರಿಗಳು ಭೋಯರ್ತೋಲಾ ಮತ್ತು ಮೆಹ್ತಖೇಡಾ ಗ್ರಾಮಗಳ ಎಂಟು ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಬಳಿಕ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: INDIA ಒಕ್ಕೂಟದ ವಿರುದ್ಧ NDA ಶಕ್ತಿ ಪ್ರದರ್ಶನ – ಮುಂಬೈನಲ್ಲಿ ಒಂದೇ ದಿನ ಎರಡು ಸಭೆ
Advertisement
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿಎಫ್ ರಾಥೋಡ್ ಅವರ ಪ್ರಕಾರ, ನಾಲ್ವರು ಆಗಸ್ಟ್ 26ರ ರಾತ್ರಿ ಕಾಡು ಹಂದಿಗಳನ್ನು ಬೇಟೆಯಾಡಲು ಲೈವ್ ವೈರ್‌ಗಳನ್ನು ಹಾಕಿದ್ದರು. ಅದು ಚಿರತೆಗಳ ಸಾವಿಗೆ ಕಾರಣವಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಹೆಣ್ಣು ಚಿರತೆ ಹಾಗೂ ಮರಿಗಳು ಎರಡು ದಿನಗಳ ಹಿಂದೆ ಸತ್ತಿದ್ದು, ದೇಹದ ಭಾಗಗಳು ಹಾಗೆಯೇ ಇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಅಧಿಕೃತ ಮ್ಯಾಪ್‌ನಲ್ಲಿ ಅರುಣಾಚಲ ಪ್ರದೇಶ ಸೇರಿಸಿಕೊಂಡ ಚೀನಾ – ದಕ್ಷಿಣ ಟಿಬೆಟ್ ಎಂದು ನಾಮಕರಣ
Advertisement
ಮರಣೋತ್ತರ ಪರೀಕ್ಷೆ ಮತ್ತು ಇತರೆ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಸುಡಲಾಯಿತು. ನಾಲ್ವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಭಾರತೀಯ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಯೇ ವಿಶೇಷ ರಾಜ್ಯ ಸ್ಥಾನಮಾನ ರದ್ದುಪಡಿಸಲು ಪ್ರೇರೇಪಿಸಿತು: ಸುಪ್ರೀಂಗೆ ಕೇಂದ್ರ
Web Stories