ಆಲ್ಲೂಗೆಡ್ಡೆಯಲ್ಲಿ ಹೆಚ್ಚು ಚಾಟ್, ಚಿಪ್ಸ್ಗಳು ಬರುತ್ತಿದ್ದು, ಇದನ್ನು ಆಹಾರಪ್ರಿಯರು ಸವಿದು ಖುಷಿಪಡುತ್ತಿದ್ದಾರೆ. ಅದರಂತೆ ಇಂದು ವಿಶೇಷವಾಗಿ ಮತ್ತು ಸರಳವಾಗಿ ‘ಆಲೂ ಚಾಟ್’ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಹೇಳಿಕೊಡಲಾಗುತ್ತೆ. ಈ ರೆಸಿಪಿ ಸರಳವಾಗಿದ್ದು, ರುಚಿಕರವಾಗಿದೆ.
Advertisement
ಬೇಕಾಗುವ ಸಾಮಾಗ್ರಿಗಳು:
* ಬೇಯಿಸಿದ ಆಲೂಗಡ್ಡೆ- 2(ಸಿಪ್ಪೆ ಸುಲಿಯಬೇಕು)
* ರೆಡ್ ಚಿಲ್ಲಿ ಪೌಡರ್ – 1/2 ಟೀ ಸ್ಪೂನ್
* ಜೀರಿಗೆ-ಕೊತ್ತಂಬರಿ ಪುಡಿ – 1/2 ಟೀಸ್ಪೂನ್
* ಚಾಟ್ ಮಸಾಲಾ ಪೌಡರ್ – 1/2 ಟೀಸ್ಪೂನ್
* ನಿಂಬೆ ರಸ – 1 ಟೀಸ್ಪೂನ್
Advertisement
* ಸಣ್ಣದಾಗಿ ಕತ್ತರಿಸಿದ ಈರುಳ್ಳಿ – 1/4 ಕಪ್
* ಹಸಿರು ಕೊತ್ತಂಬರಿ ಚಟ್ನಿ – 1 ಟೀಸ್ಪೂನ್
* ಸಿಹಿ ಹುಣಸೆಹಣ್ಣಿನ ಚಟ್ನಿ – 1 ಟೀಸ್ಪೂನ್
* ಮೊಸರು – 4 ಟೇಬಲ್ಸ್ಪೂನ್
* ಸೆವ್ – 2 ಟೇಬಲ್ಸ್ಪೂನ್
* ದಾಳಿಂಬೆ – 1 ಕಪ್
* ಕತ್ತರಿಸಿದ ಕೊತ್ತಂಬರಿ ಸೋಪ್ಪು – 2 ಟೀಸ್ಪೂನ್
* ರುಚಿಗೆ ಉಪ್ಪು ಮತ್ತು 2 ಟೇಬಲ್ಸ್ಪೂನ್ ಎಣ್ಣೆ ಇದನ್ನೂ ಓದಿ: ಸೋರೆಕಾಯಿಯಲ್ಲಿ ಮಾಡಿ ಸೂಪರ್ ರೆಸಿಪಿ ‘ಸ್ಟಫ್ಡ್ ಲೌಕಿ’
Advertisement
ಮಾಡುವ ವಿಧಾನ:
* ಫ್ರೈಯಿಂಗ್ ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಬೇಯಿಸಿದ ಆಲೂಗಡ್ಡೆ ದಪ್ಪ-ದಪ್ಪದಾಗಿ ಕತ್ತರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಡೀಪ್ ಫ್ರೈ ಮಾಡಿ. ಆಲೂಗಡ್ಡೆ ಗೋಲ್ಡನ್ ಬ್ರೌನ್ ಬಂದ ಮೇಲೆ 4-5 ನಿಮಿಷಗಳು ತಣ್ಣಗಾಗಲು ಬಿಡಬೇಕು.
Advertisement
* ಆಲೂಗಡ್ಡೆಯನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಅದಕ್ಕೆ 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 1/2 ಟೀಸ್ಪೂನ್ ಜೀರಿಗೆ, ಕೊತ್ತಂಬರಿ ಪುಡಿ ಮತ್ತು 1/2 ಟೀಸ್ಪೂನ್ ಚಾಟ್ ಮಸಾಲಾ ಪುಡಿಯನ್ನು ಸೇರಿಸಿ. 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆಲೂಗಡ್ಡೆ ತುಂಡುಗಳನ್ನು ಮಸಾಲಾದೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ.
* 1 ಟೀಸ್ಪೂನ್ ಹಸಿರು ಕೊತ್ತಂಬರಿ ಚಟ್ನಿ, 1 ಟೀಸ್ಪೂನ್ ಸಿಹಿ ಹುಣಸೆಹಣ್ಣಿನ ಚಟ್ನಿ ಮತ್ತು 1/4 ಕಪ್ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಸೇರಿಸಿ ಎಲ್ಲವನ್ನು ಸರಿಯಾಗಿ ಮಿಕ್ಸ್ ಮಾಡಿ. ಇದನ್ನೂ ಓದಿ: ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್
* ಈ ಮಿಶ್ರಣವನ್ನು ಒಂದು ಬೌಲ್ ಹಾಕಿಕೊಳ್ಳಿ. ಮೊಸರು ಇಷ್ಟ ಇದ್ದವರು ಆಲೂ ಚಾಟ್ ಮೇಲೆ ಹಾಕಿಕೊಂಡು ಅದರ ಮೇಲೆ ಸೇವ್, ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆ ಹಣ್ಣನ್ನು ಹಾಕಿ ಅಲಂಕರಿಸಿ. ಕೊನೆಗೆ ಆಲೂ ಚಾಟ್ ಬಡಿಸಿ ಆನಂದಿಸಿ.