ಚಿಕ್ಕಮಗಳೂರು: ಅದ್ಯಾಕೋ ಏನೋ.. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ (MP Kumaraswamy) ಗೆ ಟೈಮೇ ಸರಿ ಇಲ್ಲ ಅನ್ಸತ್ತೆ. ಚುನಾವಣೆ ಹೊಸ್ತಿಲಲ್ಲಿ ಅವರಿಗೆ ಟಿಕೆಟ್ ಕೊಡಬೇಕು ಅಂತ ಒಂದು ತಂಡ ಬೀದಿಗಳಿದು ಹೋರಾಡಿದರೆ, ಅವರಿಗೆ ಟಿಕೆಟ್ ಬೇಡವೇ ಬೇಡ ಅಂತ ಮತ್ತೊಂದು ತಂಡ ಕೂಡ ರಸ್ತೆಗಿಳಿದು ಹೋರಾಡುತ್ತಿದೆ. ಇದೇ ಹೊತ್ತಿನಲ್ಲಿ ಚೆಕ್‍ಬೌನ್ಸ್ (Checkbounce) ಕೇಸೊಂದು ಕುಮಾರಸ್ವಾಮಿಗೆ ಕೊರಳಿಗೆ ಉರುಳಾಗಿ ಬಂಧನವಾಗುತ್ತಾರಾ ಎಂಬ ಸುದ್ದಿಯೊಂದು ಮೂಡಿಗೆರೆ ತಾಲೂಕಿನಾದ್ಯಂತ ಸಂಚಲನ ಹುಟ್ಟಿಸಿದ್ದು ಎಂ.ಎಲ್.ಎ ಅರೆಸ್ಟ್ ಆಗ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕ ಕುಮಾರಸ್ವಾಮಿಯ ಪರ-ವಿರೋಧ ಗುಂಪು ಒಂದು ದಿನ ಶಾಸಕ ಸಿ.ಟಿ.ರವಿ ಮನೆಗೂ ಬರ್ತಾರೆ, ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮನೆಗೂ ಹೋಗ್ತಾರೆ. ಮೂಡಿಗೆರೆಯಲ್ಲೂ ಅಪ ಪ್ರಚಾರ ಮಾಡುತ್ತಿದ್ದರು. ಈ ಮಧ್ಯೆ ಚೆಕ್‍ಬೌನ್ಸ್ ಕೇಸ್‍ನಿಂದ ಕುಮಾರಸ್ವಾಮಿಗೆ ಬಂಧನ ಭೀತಿ ಕೂಡ ಎದುರಾಗಿದೆ.
Advertisement
ಈಗಾಗಲೇ ವಿಧಾನಸಭಾ ಚುನಾವಣೆ (Vidhanasabha Election) ಗೆ ಚುನಾವಣಾ ಆಯೋಗ ಕೂಡ ಕಹಳೆ ಊದಿದೆ. ರಾಜಕೀಯ ಪಕ್ಷಗಳು ಗೆಲ್ಲೋ ಕುದುರೆ ಬಾಲಕ್ಕೆ ಬಾಜಿ ಕಟ್ಟಲು ಮುಂದಾಗಿವೆ. ಇನ್ನೇನು ಒಂದೆರಡು ವಾರದಲ್ಲಿ ಬಿಜೆಪಿಯ ಕದನ ಕಲಿಗಳು ಕೂಡ ಅಖಾಡದಲ್ಲಿ ತೊಡೆ ತಟ್ಟಲಿದ್ದಾರೆ. ಆದರೆ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಮೂಡಿಗೆರೆಯಲ್ಲಿ ನಡೆಯುತ್ತಿರುವ ಬೆಳೆವಣಿಗೆಯಿಂದ ಹಾಲಿ ಶಾಸಕ ಹಾಗೂ ಟಿಕೆಟ್ ಆಕಾಂಕ್ಷಿ ಕುಮಾರಸ್ವಾಮಿ ಕೂಡ ಟೆನ್ಷನ್ ಆಗಿದ್ದಾರೆ. ಇಷ್ಟು ದಿನ ಕಾರ್ಯಕರ್ತರನ್ನ ಫೇಸ್ ಮಾಡುವ ಸವಾಲು ಎದುರಿಸುತ್ತಿದ್ದ ಕುಮಾರಸ್ವಾಮಿಗೆ ಈಗ ನ್ಯಾಯಾಲಯವನ್ನ ಎದುರಿಸುವ ಸ್ಥಿತಿ ಬಂದಿದ್ದು, ಚೆಕ್ ಬೌನ್ಸ್ ಕೇಸಲ್ಲಿ ಕುಮಾರಸ್ವಾಮಿಗೆ ಬಂಧನ ಭೀತಿ ಕೂಡ ಎದುರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಕುಮಾರಸ್ವಾಮಿ ವಿರುದ್ಧ ನಾನ್ ಬೇಲೇಬಲ್ ವಾರಂಟ್ ಜಾರಿ ಮಾಡಿರೋದು ಕುಮಾರಸ್ವಾಮಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಎಂ.ಎಲ್.ಎ. ವಿರುದ್ಧ ಎನ್.ಬಿ.ಡಬ್ಲ್ಯೂ ಆದೇಶ ಜಾರಿ ಮಾಡಿರುವ ಕೋರ್ಟ್ ಖುದ್ದು ಎಸ್‍ಪಿ ಅವರಿಗೆ ಕುಮಾರಸ್ವಾಮಿಯನ್ನ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಸೂಚಿಸಿದೆ. ಆದೇಶದ ಪ್ರತಿ ಎಸ್ಪಿ ಕೈಗೆ ಸಿಕ್ಕ ಕೂಡಲೇ ಕುಮಾರಸ್ವಾಮಿ ಬಂಧನವಾಗ್ತಾರೆ ಎಂಬ ಮಾತುಗಳು ಮೂಡಿಗೆರೆ ತಾಲೂಕಿನಲ್ಲಿ ಫುಲ್ ಗುಲ್ ಎದ್ದಿದೆ. ಇದನ್ನೂ ಓದಿ: ಬಸ್ ಮೇಲಿಂದ ಕಲಾವಿದರಿಗೆ ಹಣ ಎಸೆದಿದ್ದ ಡಿಕೆಶಿ ವಿರುದ್ಧ ದೂರು
Advertisement
Advertisement
ಶಾಸಕ ಕುಮಾರಸ್ವಾಮಿ ಸಾಲದ ರೂಪದಲ್ಲಿ ನನ್ನ ಬಳಿ ಹಣ ಪಡೆದುಕೊಂಡು ಹಣವನ್ನ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಹೂವಪ್ಪಗೌಡ ಎಂಬವರು ಜನಪ್ರತಿನಿಧಿಗಳ ಕೋರ್ಟಿನಲ್ಲಿ ದೂರು ದಾಖಲಿಸಿದ್ದರು. ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟಿನಲ್ಲಿ ಮೂರು ವರ್ಷಗಳಿಂದ ಕೇಸ್ ಕೂಡ ನಡೆಯುತ್ತಿತ್ತು. ಶಾಸಕರ ಹಣ ವಾಪಸ್ ನೀಡದ ಹಿನ್ನೆಲೆ ವಾದ-ವಿವಾದಗಳನ್ನ ಆಲಿಸಿದ ನ್ಯಾಯಾಲಯ ಒಂದು ತಿಂಗಳಲ್ಲಿ 1 ಕೋಟಿ, 38 ಲಕ್ಷದ 65 ಸಾವಿರ ಹಣ ನೀಡಬೇಕು. ಇಲ್ಲವಾದರೆ ನಾಲ್ಕು ವರ್ಷಗಳ ಸಾದ ಶಿಕ್ಷೆ ಅಂತ ತೀರ್ಪು ನೀಡಿತ್ತು. ಪ್ರಕರಣ ಸಂಬಂಧ ಕುಮಾರಸ್ವಾಮಿ ಮೇಲ್ಮನವಿ ಕೂಡ ಹೋಗಿದ್ರು. ಆದರೆ ಅಲ್ಲಿ ಸ್ಟೇ ಸಿಕ್ಕಿಲ್ಲ. ಕನ್ವಿಕ್ಷನ್‍ಗೂ ಸ್ಟೇ ಸಿಕ್ಕಿಲ್ಲ. ಜನಪ್ರತಿನಿಧಿಗಳ ಕೋರ್ಟ್ ನೀಡಿದ್ದ ಗುಡುವು ಮುಗಿದ ಹಿನ್ನೆಲೆ ನ್ಯಾಯಾಲಯ ಕುಮಾರಸ್ವಾಮಿ ಬಂಧನಕ್ಕೆ ನಾನ್ ಬೇಲೇಬಲ್ ವಾರಂಟ್ ಇಶ್ಯು ಮಾಡಿದೆ. ಆದೇಶದ ಪ್ರತಿ ಚಿಕ್ಕಮಗಳೂರು ಎಸ್‍ಪಿ ಕೈಸೇರಿದ ಕೂಡಲೇ ಎಸ್‍ಪಿ ಕುಮಾರಸ್ವಾಮಿಯನ್ನ ಕೋರ್ಟ್‍ಗೆ ಹಾಜರುಪಡಿಸಬೇಕಿದೆ.