ಬೆಂಗಳೂರು: ಕೆಲವರಿಗೆ ತಾನು ಏನ್ ಮಾಡ್ತಿದ್ದೀನಿ, ಎಲ್ಲಿದ್ದೀನಿ, ಇದರ ಎಫೆಕ್ಟ್ ಮುಂದೆ ಏನ್ ಆಗಬಹುದು ಅನ್ನೋ ಸಣ್ಣ ಸೆನ್ಸ್ ಕೂಡ ಇರೋದಿಲ್ಲ. ಇದಕ್ಕೆ ತಾಜಾ ಉದಾರಣೆ ಎಂಬಂತೆ ಬೆಂಗಳೂರಿನ ಸೌತ್ ಎಂಡ್ ಬಳಿಯ ಡಿಸಿಪಿ ಕಚೇರಿ ಮುಂಭಾಗದಲ್ಲಿ ನಡೆದ ಅದೊಂದು ಘಟನೆ.
Advertisement
ಕಳೆದ ನವೆಂಬರ್ 6ರಂದು ರಾತ್ರಿ 9 ಗಂಟೆ ಸುಮಾರಿಗೆ ಇಲ್ಲಿನ ಸಿಗ್ನಲ್ ಬಳಿ ಯುವತಿಯೊಬ್ಬರು ಬೈಕ್ ನಿಲ್ಲಿಸಿಕೊಂಡಿದ್ರು. ಇದೇ ವೇಳೆ ಹರೀಶ್ ಎಂಬಾತ ತನ್ನ ಬೈಕ್‍ನ ಪಕ್ಕದಲ್ಲಿ ನಿಲ್ಲಿಸಿದ್ದ. ಸಿಗ್ನಲ್ ಬಿಟ್ಟ ವೇಳೆ ಪರಸ್ಪರ ಬೈಕ್ ಸಣ್ಣದಾಗಿ ಟಚ್ ಆಗಿತ್ತು. ಅಷ್ಟೇ ಮುಂದೆ ಹೋಗ್ತಿದ್ದ ಯುವತಿಯ ಬೈಕ್ ಅಡ್ಡಗಟ್ಟಿದ ಬೈಕ್ ಸವಾರ ಹರೀಶ್, ಯುವತಿಯ ಬಟ್ಟೆ ಹಿಡಿದು ಎಳೆದಾಡಿ ಅವಾಚ್ಯವಾಗಿ ನಿಂದಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದ.
Advertisement
Advertisement
ಡಿಸಿಪಿ ಕಚೇರಿ ಮುಂದೆಯೇ ಯುವತಿ ಬಟ್ಟೆ ಎಳೆದಾಡಿದ ವಿಚಾರ ಸಾರ್ವಜನಿಕರನ್ನೇ ಶಾಕ್ ಆಗುವಂತೆ ಮಾಡಿತ್ತು. ವಿಚಾರ ತಿಳಿದ ಜಯನಗರ ಪೊಲೀಸರು ಯುವತಿಯನ್ನು ಪತ್ತೆ ಮಾಡಿ ದೂರು ದಾಖಲಿಸಿಕೊಂಡಿದ್ದರು. ಆದರೆ ಆರೋಪಿ ಯಾರು, ಹೇಗಿದ್ದ ಯಾವ್ ಕಡೆ ಹೋದ ಅನ್ನೋ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಡಿಸಿಪಿ ಕಚೇರಿ ಮುಂಭಾಗಲ್ಲಿ ನಡೆದ ಘಟನೆಯನ್ನು ಸಿರಿಯಸ್ ಆಗಿ ತೆಗೆದುಕೊಂಡ ಪೊಲೀಸರು ಸುಮಾರು 500 ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಬಿನ್ನಿಪೇಟೆಗೆ ಕರೆದುಕೊಂಡು ಹೋಗಿತ್ತು. ಹರೀಶ್ ಮನೆಯನ್ನು ಪತ್ತೆ ಮಾಡಿದ ಪೊಲೀಸರು ಆರಾಮಾಗಿ ಟಿವಿ ನೋಡ್ತಿದ್ದ ಆರೋಪಿ ಹರೀಶ್‍ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
Advertisement
ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಇಷ್ಟೆಲ್ಲಾ ದೊಡ್ಡ ಸುದ್ದಿ ಆಗಿ ಹರೀಶ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ರು ಕೂಡ ಆರೋಪಿ ಹರೀಶ್‍ಗೆ ಈ ಬಗ್ಗೆ ಯಾವುದೇ ಮಾಹಿತಿ ಇರ್ಲಿಲ್ವಂತೆ. ಕೋಪದ ಕೈಗೆ ಬುದ್ದಿಕೊಟ್ಟು ಯುವತಿಯ ತಂಟೆಗೆ ಹೋದ್ರೆ ಏನಾಗುತ್ತೆ ಅನ್ನೋದಕ್ಕೆ ಈ ಪ್ರಕರಣ ಬೆಸ್ಟ್ ಎಗ್ಸಾಂಪಲ್.