ಹುಬ್ಬಳ್ಳಿ: ಅಪರಿಚಿತ ಯುವತಿಯರನ್ನು ನಂಬಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗುವ ಯುವಕರಿಗೆ ಪೊಲೀಸ್ (Police) ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ, ವಂಚನೆ ಮಾತ್ರ ನಿಲ್ಲುತ್ತಿಲ್ಲ. ಅಪರಿಚಿತ ಯುವತಿಯೊಬ್ಬಳ ಮಾತುಕೇಳಿ ಯುವಕನೊಬ್ಬ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ 2.40 ಲಕ್ಷ ರೂ. ಕಳೆದುಕೊಂಡ ಪ್ರಕರಣ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.
ನಗರದ ದತ್ತಾತ್ರೇಯ ಎಂಬಾತ ಹಣ ಕಳೆದುಕೊಂಡ ಯುವಕನಾಗಿದ್ದಾನೆ. ಆತನಿಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ಪರಿಚಯವಾಗಿದ್ದಳು. ಬಳಿಕ ಸಲುಗೆ ಬೆಳೆಸಿಕೊಂಡು ನಗ್ನವಾಗಿ ವೀಡಿಯೋ ಕಾಲ್‍ನಲ್ಲಿ ಮಾತಾಡುತ್ತಿದ್ದಳು. ಅಲ್ಲದೇ ಯುವಕನಿಗೂ ನಗ್ನವಾಗಲು ಸೂಚಿಸಿದ್ದಳು. ಕೆಲವು ದಿನಗಳು ಹೀಗೆ ಇಬ್ಬರೂ ಮಾತಾಡಿದ್ದು, ಬಳಿಕ ಯುವಕನ ವೀಡಿಯೋಗಳನ್ನು ಸುದ್ದಿವಾಹಿನಿಗಳಿಗೆ ನೀಡುವುದಾಗಿ ಅಪರಿಚಿತರು ಬ್ಲಾಕ್‍ಮೇಲ್ ಮಾಡಿದ್ದಾರೆ. ಅಲ್ಲದೇ ಜೀವನವನ್ನು ಹಾಳು ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ಇದನ್ನೂ ಓದಿ: ಫೇಸ್‍ಬುಕ್‍ನಲ್ಲಿ ಪರಿಚಯ- ಸ್ನೇಹಿತನಿಂದ ಅಪ್ರಾಪ್ತೆಯ ಅಪಹರಿಸಿ ಗ್ಯಾಂಗ್ ರೇಪ್
ಯುವಕನಿಗೆ ದೆಹಲಿ (Delhi) ಪೊಲೀಸರ ಹೆಸರಲ್ಲಿ ಮಾತನಾಡಿ, ಪ್ರಕರಣ ದಾಖಲಿಸುವ ಬೆದರಿಕೆ ಹಾಕಲಾಗಿದೆ. ಪ್ರಕರಣ ಮುಚ್ಚಿ ಹಾಕಲು ಹಣದ ಬೇಡಿಕೆಯಿಟ್ಟಿದ್ದು, ಅದರಂತೆ ದತ್ತಾತ್ರೇಯ ಹಂತ ಹಂತವಾಗಿ ವಂಚಕರಿಗೆ 2.40 ಲಕ್ಷ ರೂ. ಹಣ ನೀಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೆ ವಂಚಕರು ಕೆಲವು ದಿನಗಳ ಬಳಿಕ ಯೂಟ್ಯೂಬರ್ ಹೆಸರಲ್ಲಿ ಬೆದರಿಕೆ ಹಾಕಿ ಮತ್ತೆ ಹಣದ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಆತಂಕಗೊಂಡ ಯುವಕ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಈ ಸಂಬಂಧ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಕಲಿ ಟಿಕೆಟ್ ತೋರಿಸಿ ಏರ್‌ಪೋರ್ಟ್ ಒಳಗೆ ನುಗ್ಗಿದ ಮಹಿಳೆ- ಎಫ್‍ಐಆರ್ ದಾಖಲು