ಖ್ಯಾತ ಕಿರುತೆರೆ ನಟ, ನಿರ್ದೇಶಕ, ನಿರ್ಮಾಪಕ ರವಿಕಿರಣ್‍ಗೆ (Ravikiran) ಸ್ವಾಮೀಜಿಯೊಬ್ಬರು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ವರದಿಯಾಗಿದೆ. ಕುಮಾರಸ್ವಾಮಿ ಲೇಔಟ್‍ನಲ್ಲಿ ವಾಸವಾಗಿರುವ ರವಿಕಿರಣ್‍ಗೆ ಕಳೆದ ಎರಡು ವರ್ಷಗಳ ಹಿಂದೆ ನವೀನ್ (Naveen), ಭಾಗ್ಯಶ್ರೀ (Bhagyashree) ಅನ್ನೋರು ಪರಿಚಯವಾಗಿದ್ರು. ನಾನು ಅನಾಥಾಶ್ರಮವೊಂದನ್ನು ನಡೆಸುತ್ತಿದ್ದೇನೆ, ನಿಮ್ಮ ಕಡೆಯಿಂದ ಏನಾದ್ರು ಸಹಾಯ ಮಾಡಿ ಅಂತಾ ಹೇಳಿದ್ದ. ಅನಾಥಶ್ರಮ ಅಂತಾ ಕೇಳಿದ ರವಿಕಿರಣ್ ಮೊದಲಿಗೆ ಎರಡುವರೇ ಸಾವಿರ ಗೂಗಲ್ ಪೇ ಮೂಲಕ ಹಣ ನೀಡಿದ್ರು.
Advertisement
ಅಂದಿನಿಂದ ನಟ ರವಿಕಿರಣ್‍ಗೆ ಹತ್ತಿರವಾದ ನವೀನ್ ಭಾಗ್ಯಶ್ರೀ ಗುರುಜೀ, ದುಬೈನಲ್ಲಿ ಒಂದು ಕಾರ್ಯಕ್ರಮಕ್ಕೆ ಚೀಫ್ ಗೆಸ್ಟ್ ಆಗಿ ನೀವು ಹೋಗಿ ನಾನು ಅಲ್ಲಿ ಮಾತಾಡಿದ್ದೀನಿ ಅಂದಿದ್ದ. ಸ್ವಾಮೀಜಿ ಮಾತನ್ನು ನಂಬಿದ ನಟ ರವಿಕಿರಣ್ ಟಿಕೆಟ್ ಮಾಡಿಸೋಕೆ ಅಂತಾ ಮೊದಲಿಗೆ 25 ಸಾವಿರ ದುಡ್ಡು ಹಾಕಿದ್ರು. ಹಾಗೇ ಮುಂದುವರೆದು, ಪ್ರವಾಸದ ಖರ್ಚು ಅದು ಇದು ಅಂತಾ ಪದೇ ಪದೇ ದುಡ್ಡು ಹಾಕಿಸಿಕೊಂಡಿದ್ದ.
Advertisement
Advertisement
ಇಷ್ಟಕ್ಕೂ ಸುಮ್ಮನಾಗದ ಸ್ವಾಮೀಜಿ ನವೀನ್ ಭಾಗ್ಯಶ್ರೀ, ದುಬೈ ನಲ್ಲಿ ನಂಗೆ ಪರಿಚಯವಿರುವ ಸ್ನೇಹಿತರೊಬ್ಬರು ಇದ್ದಾರೆ. ಅವರ ಹತ್ರ ಕಡಿಮೆ ಬೆಲೆಗೆ ಚಿನ್ನ ಕೊಡಿಸೋದಾಗಿ ಹೇಳಿ ಮತ್ತೆ 42 ಸಾವಿರ, 87 ಸಾವಿರ ಅಂತಾ ಹಂತ ಹಂತವಾಗಿ ಮತ್ತೆ ರವಿಕಿರಣ್ ಬಳಿ ಹಣ ಹಾಕಿಸಿಕೊಂಡಿದ್ರು. ಇದೇ ವೇಳೆ ಕಾರ್ಯಕ್ರಮ ತಡವಾಗ್ತಿದೆ, ನೀವು ಹಾಕಿರುವ ಹಣಕ್ಕೆ ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿ ಒಂದು ಸೈಟ್ ಕೊಡಿಸುವುದಾಗಿ ನಂಬಿಸಿದ್ದ. ಈಗ ಕೊಟ್ಟಿರೋ ಹಣಕ್ಕೆ ಮತ್ತಷ್ಟು ಹಣ ಕೊಡಿ ರಿಜಿಸ್ಟೇಷನ್ ಅಂತಾ ಹೇಳಿ ಮತ್ತೆ ಹಣ ತೆಗೆದುಕೊಂಡಿದ್ದ.
Advertisement
ಈ ಕಥೆ ಮುಂದುವರೆದು, ಹೊಸಕೋಟೆಯಲ್ಲಿ ಬೇಡ, ಆಶ್ರಮದ ಕಡೆಯಿಂದ ಏಪೋರ್ಟ್ ರೋಡ್ ನಲ್ಲೇ ಸೈಟ್ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ 4 ಲಕ್ಷ 35 ಸಾವಿರ ಹಣ ತೆಗೆದುಕೊಂಡಿದ್ದ. ಯಾವಾಗ ಏರ್ಪೋಟ್ ರಸ್ತೆಯಲ್ಲೂ ಸೈಟ್ ಸಿಗಲಿಲ್ವೋ, ಆಗ ನಟ ರವಿಕಿರಣ್ ಸ್ವಾಮೀಜಿಯ ಮೋಸ ಬಗ್ಗೆ ತಿಳಿದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ನವೀನ್ ಭಾಗ್ಯಶ್ರೀ, ಪತ್ನಿ ಚೈತ್ರಾ, ಮಧ್ಯವರ್ತಿ ಸೇರಿ ಮೂವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.
ಸದ್ಯ ಸ್ವಾಮೀಜಿ ನವೀನ್ ಭಾಗ್ಯಶ್ರೀ, ಅತನ ಪತ್ನಿ ಎಸ್ಕೇಪ್ ಆಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅನುಭವಿ ಕಿರುತೆರೆ ನಟನಾಗಿರುವ ರವಿಕಿರಣ್‍ಗೆ ಹಣ, ಚಿನ್ನ, ಸೈಟು ಅಂತಾ ಆಸೆ ತೋರಿಸಿ ವಂಚಿಸಿರೋದು ನಿಜಕ್ಕೂ ವಿಪರ್ಯಾಸವೇ ಸರಿ.