ಸಾಮಾನ್ಯವಾಗಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಬಿಗ್ ಬಾಸ್ ಮೇಲೆಯೇ ಆರೋಪ ಮಾಡುವುದು ಕಡಿಮೆ. ಆದರೆ, ಮೇಲಿಂದ ಮೇಲೆ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಅವರನ್ನೇ ತರಾಟೆಗೆ ತಗೆದುಕೊಳ್ಳುತ್ತಿದ್ದಾರೆ. ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಮೋಸಗಾರ ಎಂದೇ ನೇರವಾಗಿ ಕರೆದು ಅಚ್ಚರಿ ಮೂಡಿಸುತ್ತಿದ್ದಾರೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್ಗೆ ರಾಕೇಶ್ ಫುಲ್ ಶಾಕ್..!
Advertisement
ಸೋನು ಗೌಡಗೆ ಬೆಳಗ್ಗೆ ಎದ್ದು ಕುಡಿಯಲು ಹಾರ್ಲೆಕ್ಸ್ ಪೌಡರ್ ಬೇಕಿತ್ತು. ಹಾಗಾಗಿ ಅವರು ತಮ್ಮ ತಾಯಿಯಲ್ಲಿ ಹಾರ್ಲೆಕ್ಸ್ ಪೌಡರ್ ಕಳುಹಿಸುವಂತೆ ಮನವಿ ಮಾಡಿದ್ದರು. ಆದರೆ, ನಿಯಮದ ಪ್ರಕಾರ, ಮನೆಯ ಆಚೆಯಿಂದ ಮನೆ ಒಳಗೆ ಯಾವುದೇ ವಸ್ತುಗಳನ್ನು ತರುವಂತಿಲ್ಲ. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದ್ದರಿಂದ ಸೋನು ಗೌಡಗೆ ಹಾರ್ಲೆಕ್ಸ್ ಪೌಡರ್ ಬರಲಿಲ್ಲ. ಇದಕ್ಕೆ ಸಿಟ್ಟಿಗೆದ್ದ ಸೋನು, ಹುಡುಗರಿಗೆ ಒಂದು ಕಾನೂನು ಹುಡುಗಿಯರಿಗೆ ಒಂದು ಕಾನೂನು ಎಂದು ಜರಿದಿದ್ದಾರೆ.
Advertisement
Advertisement
ಬಿಗ್ ಬಾಸ್ ಮನೆಯಲ್ಲಿ ಹುಡುಗರಿಗೆ ಪ್ರೊಟಿನ್ ಪೌಡರ್ ನೀಡಲಾಗುತ್ತದೆ ಎನ್ನುವ ವಿಷಯವನ್ನು ಜಗಜ್ಜಾಹೀರು ಮಾಡಿರುವ ಸೋನು ಗೌಡ, ಹುಡುಗರಿಗೆ ಆದರೆ, ಅದನ್ನು ತರಿಸಿಕೊಡಲಾಗುತ್ತದೆ. ನಮಗೇಕೆ ಹಾರ್ಲೆಕ್ಸ್ ಪೌಡರ ಕೊಡುವುದಿಲ್ಲ. ಇದು ಬಿಗ್ ಬಾಸ್ ಮಾಡುವ ಮೋಸ. ಹುಡುಗರಿಗೊಂದು ಹುಡುಗಿಯರಿಗೊಂದು ಕಾನೂನು ಇಲ್ಲ ಎಂದು ಹೇಳಿದ್ದಾರೆ.