ದಾವಣಗೆರೆ: ಮಾನವ ಹಕ್ಕುಗಳು ಎಂಬ ಸಂಸ್ಥೆ ಕಟ್ಟಿಕೊಂಡು ರಾಜ್ಯಾಧ್ಯಕ್ಷ ಕೂಡ ಆಗಿದ್ದ ವ್ಯಕ್ತಿ ಸಂಘಕ್ಕೆ ತದ್ವಿರುದ್ಧವಾಗಿ ಒಂದಲ್ಲ, ಎರಡಲ್ಲ, 4 ಮದುವೆ ಆಗಿ ಮಹಿಳೆಯರ ಹಕ್ಕುಗಳನ್ನೇ ಕಿತ್ತುಕೊಂಡು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ದಾವಣಗೆರೆಯ (Davanagere) ಆಜಾದ್ ನಗರ (Azad Nagar) ನಿವಾಸಿ ಮಹಮ್ಮದ್ ವಾಸೀಂ ಬರೋಬ್ಬರಿ 4 ಮದುವೆಯಾಗಿದ್ದಾನೆ. ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ಅಂತ ಕಟ್ಟಿಕೊಂಡು ಅದಕ್ಕೆ ರಾಜ್ಯಾಧ್ಯಕ್ಷನೂ ಆಗಿದ್ದ. ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇನೆ ಎಂದು ವಿಧವೆ, ಪತಿಯಿಂದ ದೂರಾದವರು, ಅಮಾಯಕ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ. ಅಂತಹವರ ಜೊತೆ ಮೊದಲು ಸ್ನೇಹ ಬೆಳೆಸಿ ಬಳಿಕ ಮದುವೆಯಾಗಿ ಬಾಳು ಕೊಡುವುದಾಗಿ ನಂಬಿಸುತ್ತಿದ್ದ.
Advertisement
Advertisement
ಈತನನ್ನು ನಂಬಿದ ಮಹಿಳೆಯರು ಮದುವೆಗೆ ಒಪ್ಪಿ ನಿಖಾ ಮಾಡಿಕೊಳ್ಳುತ್ತಿದ್ದ. ಸ್ವಲ್ಪ ದಿನ ಕಳೆದ ಮೇಲೆ ತವರು ಮನೆಯಿಂದ ಹಣ ತರುವಂತೆ, ಆಸ್ತಿ ಇದ್ದರೆ ಸೇಲ್ ಆಗ್ರಿಮೆಂಟ್ ಮಾಡಿಕೊಂಡುವಂತೆ ಒತ್ತಾಯ ಮಾಡುತ್ತಿದ್ದ. ಹೀಗೆ ಮಹಿಳೆಯರಿಗೆ ನಿರಂತರವಾಗಿ ಮೋಸ ಮಾಡಿಕೊಂಡು ಹೋಗಿದ್ದಾನೆ.
Advertisement
Advertisement
ಇದೀಗ ವಾಸೀಂ ಮೂರನೇ ಹೆಂಡತಿಗೆ ಮೋಸ ಮಾಡಿ ನಾಲ್ಕನೇ ಹೆಂಡತಿ ಮನೆಯಲ್ಲಿದ್ದಾಗ ಮೂರನೇ ಹೆಂಡತಿ ರೆಡ್ಹ್ಯಾಂಡ್ ಆಗಿ ಹಿಡಿದು ಆತನ ಬಂಡವಾಳ ಬಯಲು ಮಾಡಿದ್ದಾಳೆ. ವಾಸೀಂ ಮೊದಲ ಮದುವೆ ಆಗಿದ್ದು ಕೂಡ ವಿಧವೆಯನ್ನೇ. ಆಕೆಗೆ ಹಾಗೂ ಆಕೆಯ ಮಕ್ಕಳಿಗೂ ಆಶ್ರಯವಾಗಿ ಇರುತ್ತೇನೆ ಎಂದು ಮದುವೆ ಆಗಿ ವಂಚಿಸಿದ್ದಾನೆ. ನನಗೂ ನನ್ನ ಮಕ್ಕಳಿಗೆ ಏನು ಉಳಿದಿಲ್ಲ. ಇಂತಹ ಕಿರಾತಕನಿಗೆ ಕಠಿಣ ಶಿಕ್ಷೆಯಾಗಬೇಕು. ಅವನನ್ನು ಬಂಧಿಸಬೇಕು ಎಂದು ಆತನ ಮೊದಲ ಪತ್ನಿ ಅಜ್ಮತ್ಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗ್ರಾಹಕರೇ ಎಚ್ಚರ – ಮನೆ ಮನೆಗೆ ವಿತರಣೆಯಾಗುವ ಗ್ಯಾಸ್ ಸಿಲಿಂಡರ್ನಲ್ಲಿ ಭಾರೀ ವಂಚನೆ
ವಾಸೀಂನ ಕರ್ಮಕಾಂಡದ ಬಗ್ಗೆ ಮುಸ್ಲಿಂ ಜಮಾತ್ಗೆ ತಿಳಿಸಿದರೂ ಏನೂ ಕ್ರಮ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರನ್ನು ನೀಡಲಾಗಿದ್ದು, ಅವರು ಕೂಡಾ ಆತನ ಪರವಾಗಿಯೇ ಮಾತನಾಡುತ್ತಾರೆ ಎಂದು ಆರೋಪಿಸಲಾಗುತ್ತಿದೆ. ಅವನಿಗೆ ತಕ್ಕಪಾಠ ಕಲಿಸಬೇಕೆಂದು ವಂಚನೆಗೆ ಒಳಗಾದವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 200 ರನ್ಗಳ ಭರ್ಜರಿ ಗೆಲುವು – ವಿಂಡೀಸ್ ವಿರುದ್ಧ ಸತತ 13ನೇ ಏಕದಿನ ಸರಣಿ ಗೆದ್ದ ಭಾರತ
Web Stories