ಹೈದರಾಬಾದ್: ಮೆಡಿಕಲ್ ಸೀಟ್ ಕೊಡಿಸ್ತೀನಿ ಅಂತಾ ಯಾರಾದ್ರು ನಿಮ್ಮನ್ನ ಕೇಳಿದ್ದಾರಾ? ಹಾಗಿದ್ರೆ ಹುಷಾರಾಗಿರಿ. ಮೆಡಿಕಲ್ ಸೇಟ್ ಕೊಡಿಸ್ತೀನಿ ಅಂತ ಹೇಳಿ, 40 ಲಕ್ಷ ರೂ. ಹಣ ಪಡೆದು ಪರಾರಿಯಾಗಿದ್ದ ಕಳ್ಳ ಈಗ ಪೊಲೀಸರು ಅಥಿತಿಯಾಗಿದ್ದಾನೆ.
ಆರೋಪಿ ರೂಪೇಂದ್ರ ಕುಮಾರ್, ಆಂಧ್ರ ಪ್ರದೇಶದ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಮಗಳಿಗೆ ಬೆಂಗಳೂರಿನಲ್ಲಿ ಸೀಟ್ ಕೊಡಿಸುವುದಾಗಿ ಹೇಳಿದ್ದಾನೆ. ನಂತರ ಸೀಟ್‍ಗಾಗಿ 40 ಲಕ್ಷ ರೂ. ಹಣವನ್ನು ಪಡೆದುಕೊಂಡು ಕರ್ನಾಟಕ ರಾಜ್ಯಪಾಲ ವಾಜುಭಾಯ್ ವಾಲಾ ಅವರ ನಕಲಿ ಶಿಫಾರಸು ಪತ್ರವನ್ನು ಅವರಿಗೆ ವಾಟ್ಸಾಪ್ ಮೂಲಕ ಕಳುಹಿದ್ದಾನೆ. ಹಣ ಕೈಗೆ ಬಂದ ತಕ್ಷಣ ಕುಮಾರ್ ಪರಾರಿಯಾಗಿದ್ದಾನೆ.
ನಂತರ ಪ್ರಾಂಶುಪಾಲರು ಕುಮಾರ್ ವಿರುದ್ಧ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆಯೋಪಿಯನ್ನು ಹುಡುಕಿ ಬಂಧಿಸಿದ್ದಾರೆ. ಆರೋಪಿ ಬಳಿ ಇದ್ದ ರಾಜ್ಯಪಾಲರ ಹೆಸರಿನ ನಕಲಿ ವಿಸಿಟಿಂಗ್ ಕಾರ್ಡ್, ಹಾರ್ಡ್ ಡಿಸ್ಕ್, ಮೊಬೈಲ್ ಮತ್ತು ಕೆಲವು ಪೆನ್ ಡ್ರೈವ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.