ಬೆಂಗಳೂರು: ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಚಿತ್ರನಟಿ ಸಿಂಧು ಮೆನನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಆಫ್ ಬರೋಡಗೆ 36 ಲಕ್ಷ ರೂ. ವಂಚನೆಗೈದ ಆರೋಪದ ಮೇಲೆ ಸಿಂಧು ಮೆನನ್ ಸೇರಿದಂತೆ ನಾಲ್ವರ ವಿರುದ್ಧ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ಎಫ್‍ಐಆರ್ ದಾಖಲಾಗಿದೆ.
Advertisement
ಸಿಂಧು ಮೆನನ್ ಸಹೋದರ ಮನೋಜ್ ಕೆ ವರ್ಮಾ ಹಾಗೂ ನಾಗಶ್ರೀ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮನೋಜ್ ಕೆ ವರ್ಮಾ ಮೊದಲ ಆರೋಪಿ ಆಗಿದ್ದರೆ ನಾಗಶ್ರೀ ಶಿವಣ್ಣ ಎ2 ಆಗಿದ್ದಾರೆ. ಸಿಂಧು ಮೆನನ್ ಎ3 ಆಗಿದ್ದು, ಸುಧಾ ರಾಜಶೇಖರ್ ಎ4 ಆಗಿದ್ದಾರೆ.
Advertisement
ಏನಿದು ಪ್ರಕರಣ?
ಬ್ಯಾಂಕ್ ಆಫ್ ಬರೋಡಾದಲ್ಲಿ ಕಾರ್ ಖರೀದಿಗಾಗಿ ಆರೋಪಿ ಮನೋಜ್ ಶರ್ಮಾ 36 ಲಕ್ಷ ರೂ. ಸಾಲ ಪಡೆದಿದ್ದ. ಸಾಲ ಪಡೆಯಲು ಜ್ಯುಬಿಲೆಂಟ್ ಮೋಟಾರ್ಸ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ದಾಖಲೆ ಸೃಷ್ಟಿಸಿದ್ದರು. ಪರಿಶೀಲನೆ ವೇಳೆ ನಕಲಿ ದಾಖಲೆ ನೀಡಿದ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ರಮೇಶ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೋಜ್ ಶರ್ಮಾ ಸಾಲ ಪಡೆದ ಬಳಿಕ ಹಣವನ್ನು ಸಿಂಧು ಮೆನನ್ ಅವರ ಖಾತೆಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ನಟಿ ಮೇಲೂ ಎಫ್‍ಐಆರ್ ದಾಖಲಾಗಿದೆ.