ಮಿಸ್ ಮ್ಯಾಚ್ ಜೋಡಿ ಎಂದೇ ಸಖತ್ ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮಿ (Mahalakshmi) ಅವರ ಪತಿ ರವೀಂದರ್ ಚಂದ್ರಶೇಖರ್ ವಿರುದ್ಧ ವಂಚನೆಯ (Fraud) ಆರೋಪ ಕೇಳಿ ಬಂದಿದೆ. ಸಿನಿಮಾ ಮಾಡುವುದಾಗಿ 15 ಲಕ್ಷ ರೂಪಾಯಿಯನ್ನು ತಮ್ಮಿಂದ ಪಡೆದುಕೊಂಡು ವಂಚಿಸಿದ್ದಾರೆ ಎಂದು ಅಮೆರಿಕಾದಲ್ಲಿ ನೆಲೆಸಿರುವ ಭಾರತ ಮೂಲದ ವಿಜಯ್ (Vijay) ಎನ್ನುವವರು ದೂರು ನೀಡಿದ್ದಾರೆ.
ವಿಜಯ್ ನೀಡಿದ ದೂರಿನ ಆಧಾರದ ಮೇಲೆ ಚೆನ್ನೈನ ಕೇಂದ್ರ ಅಪರಾಧ ವಿಭಾಗ ಪೊಲೀಸ್ ಅಧಿಕಾರಿಗಳು ರವೀಂದರ್ (Ravinder Chandrasekhar) ವಿರುದ್ದ ಪ್ರಕರಣ (Complaint) ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಪಡೆದುಕೊಂಡಿರುವ ರವೀಂದರ್ ವಿಚಾರಣೆಯನ್ನೂ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಇಷ್ಟದ ಹುಡುಗಿಯನ್ನ ಮೆಚ್ಚಿಸಲು ಸಿಂಗರ್ ಹನುಮಂತ ಸರ್ಪ್ರೈಸ್
ತಮ್ಮೊಂದಿಗೆ ಸಿನಿಮಾ ಮಾಡುವುದಾಗಿ ತಿಳಿಸಿ 15 ಲಕ್ಷ ರೂಪಾಯಿಯನ್ನು ರವೀಂದರ್ ಪಡೆದರು. ನಂತರ ಯಾವುದೇ ಸಿನಿಮಾ ಮಾಡಲಿಲ್ಲ. ಸಿನಿಮಾದ ಬಗ್ಗೆ ಮಾಹಿತಿಯನ್ನೂ ಅವರು ನೀಡುತ್ತಿರಲಿಲ್ಲ. ಇವರು ಸಿನಿಮಾ ಮಾಡುವುದು ಅನುಮಾನ ಎಂದು ಗೊತ್ತಾಯಿತು. ವಿಚಾರಿಸಿದಾಗ ತಾವು ಮೋಸ ಹೋಗಿರುವುದಾಗಿ ತಿಳಿಯಿತು ಎಂದು ವಿಜಯ್ ದೂರಿನಲ್ಲಿ ಬರೆದಿದ್ದಾರೆ.
ಆನ್ ಲೈನ್ ಮೂಲಕ ಈ ದೂರು ದಾಖಲಾಗಿದ್ದು, ಸಾಕ್ಷಿಗಳನ್ನು ಕಲೆ ಹಾಕುವುದರಲ್ಲಿ ಪೊಲೀಸರು ನಿರತರಾಗಿದ್ದಾರೆ. ಒಂದು ಸುತ್ತಿನ ವಿಚಾರಣೆಗೂ ಪೊಲೀಸರು ರವೀಂದ್ರರ್ ಅವರನ್ನು ಕರೆಯಿಸಿಕೊಂಡಿದ್ದಾರೆ. ಅಧಿಕಾರಿಗಳ ತನಿಖೆಗೆ ಸಹಕಾರ ನೀಡಿರುವ ರವೀಂದರ್, ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನೂ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
Web Stories