ಮೈಸೂರು: ಇಲ್ಲಿನ ನವನಗರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ (Navanagara Urban Co-Operative Bank) ಮಹಿಳೆಯೊಬ್ಬರಿಗೆ 1.41 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಸುನಿತಾ ಎಂಬ ಮಹಿಳೆಯ ಬ್ಯಾಂಕ್ ಉಳಿತಾಯ ಖಾತೆಯಲ್ಲಿದ್ದ (Savings Account) 1 ಕೋಟಿ 41 ಲಕ್ಷ ರೂ. ಹಣವನ್ನು ಅವರ ಅನುಮತಿಯಿಲ್ಲದೇ ಬ್ಯಾಂಕಿನ 2 ಅನ್ಯ ಖಾತೆಗೆ ಟ್ರಾನ್ಸಫರ್ ಮಾಡಿಕೊಳ್ಳಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಪ್ರವಾಸಿಗರ ಕೊಂಡೊಯ್ಯುತ್ತಿದ್ದ ಬಸ್ ಅಪಘಾತ – 25 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಸಾಲಕ್ಕಾಗಿ ಬ್ಯಾಂಕ್‌ಗೆ ನೀಡಿದ್ದ ಚೆಕ್‌ಗಳನ್ನು ಬಳಸಿ, ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಬ್ಯಾಂಕ್‌ನ ಅಧ್ಯಕ್ಷ ಕೆ.ಎನ್.ಬಸಂತ್, ಜನರಲ್ ಮ್ಯಾನೇಜರ್ ಸುರೇಶ್, ಮ್ಯಾನೇಜರ್ ಶಿವಕುಮಾರ್ ಅವರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ – ಪ್ರತಿಭಟನಾಕಾರರಿಗೆ ಎಸಿಪಿ ಕಾರಿನಲ್ಲೇ ಡ್ರಾಪ್ ಆರೋಪ
ಈ ಬಗ್ಗೆ ಬ್ಯಾಂಕ್‌ನ ಅಧ್ಯಕ್ಷರನ್ನು ವಿಚಾರಿಸಿದಾಗ ಬ್ಯಾಂಕ್‌ನ ಹಿತದೃಷ್ಟಿಯಿಂದ ಹಣ ಬಳಸಿದ್ದೇವೆಂದು 4 ವರ್ಷಗಳಿಂದ ಸಬೂಬು ಹೇಳುತ್ತಾ ಬಂದಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ಮ್ಯಾನೇಜರ್ ಶಿವಕುಮಾರ್ ಅವರನ್ನ ಸೇವೆಯಿಂದ ಅಮಾನತು ಮಾಡಲಾಗಿತ್ತು. ಅವರು ಬಳಸಿಕೊಂಡ ಹಣಕ್ಕೆ ಬಡ್ಡಿ ಸಹಿತ ವಾಪಸ್ ಕೊಡಿಸುವುದಾಗಿ ಅಧ್ಯಕ್ಷ ಕೆ.ಎನ್. ಬಸಂತ್ ಭರವಸೆ ನೀಡಿದ್ದರು. ಈವರೆಗೆ 25 ಲಕ್ಷ ರೂ. ಮಾತ್ರ ಸುನಿತಾ ಅವರ ಖಾತೆಗೆ ಜಮೆ ಆಗಿದ್ದು, ಇನ್ನೂ 1 ಕೋಟಿ 16 ಲಕ್ಷ ರೂ. ಕೊಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಗುಂಡು ತಗುಲಿ ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು
ತಮ್ಮ ಬಾಕಿ ಹಣವನ್ನು ವಾಪಸ್ ನೀಡದೇ ಇದಿದ್ದಕ್ಕೆ ಸುನಿತಾ, ಬ್ಯಾಂಕ್‌ನ ಅಧ್ಯಕ್ಷ, ಜನರಲ್ ಮ್ಯಾನೇಜರ್ ಹಾಗೂ ಮ್ಯಾನೇಜರ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ (Vijayanagara Police Station) ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.