ದಾವಣಗೆರೆ: ದಿನ ನಿತ್ಯದ ಬೆಲೆ ಪರಿಷ್ಕರಣೆ ಮಾಡದೆ ಒಂದೇ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಹಾಕಲಾಗುತ್ತಿರುವ ಬಂಕ್ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸಿದ ಘಟನೆ ದಾವಣಗೆರೆ ತಾಲೂಕಿನ ಅಣಜಿ ಕ್ರಾಸ್‍ನಲ್ಲಿ ನಡೆದಿದೆ.
ಕೇಂದ್ರ ಸರ್ಕಾರ ಜೂನ್ 1ರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿದಿನ ಪರಿಷ್ಕರಣೆ ಮಾಡಬೇಕು ಎನ್ನುವ ಅದೇಶವನ್ನು ಜಾರಿಮಾಡಿತ್ತು. ಈ ಆದೇಶದ ಅನ್ವಯ ಎಲ್ಲಾ ಪೆಟ್ರೋಲ್ ಬಂಕ್‍ಗಳ ಪ್ರತಿನಿತ್ಯ ದರ ಬದಲಾವಣೆ ಮಾಡುತ್ತಿವೆ.
Advertisement
Advertisement
ಆದ್ರೆ ಅಣಜಿ ಕ್ರಾಸ್ ಬಳಿ ಇರುವ ಕಿಸಾನ್ ಸೇವಾ ಬಂಕ್‍ನಲ್ಲಿ ದರ ಪರಿಷ್ಕರಣೆ ಮಾಡದೇ ಪ್ರತಿದಿನ ಒಂದೇ ದರದಲ್ಲಿ ತೈಲವನ್ನು ವಿತರಿಸುತಿತ್ತು. ಬೆಲೆ ಹೆಚ್ಚಾಗಿದ್ದರೆ ದರವನ್ನು ಏರಿಕೆ ಮಾಡಿದ್ದರೆ, ಕಡಿಮೆಯಾಗಿದ್ದರೆ ದರ ಇಳಿಕೆ ಆಗುತ್ತಿರಲಿಲ್ಲ.
Advertisement
ಪ್ರತಿ ಲೀಟರ್ ಡಿಸೇಲ್ ಬೆಲೆ ಪ್ರಸ್ತುತ 58 ರೂ. ಇದ್ದರೂ 61 ರೂ. ನಿಗದಿಯಾಗಿದ್ದರೆ, ಲೀಟರ್ ಪೆಟ್ರೋಲ್ ಬೆಲೆ 68 ರೂ. ಇದ್ದರೂ 71 ರೂ. ಮಾರಾಟ ಮಾಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಮಾಲೀಕರು ವಿರುದ್ಧ ಜಗಳ ನಡೆಸಿದ್ದಾರೆ.
Advertisement