ಬೆಂಗಳೂರು: ಹೆಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ಸೈಬರ್ (Cyber) ಖದೀಮರು ದೋಖಾ ನಡೆಸುತ್ತಿದ್ದು, ಅರ್ಜಿ ಸಲ್ಲಿಸುವ ಮೊದಲು ಜನರು ಎಚ್ಚರವಹಿಸಬೇಕು ಎಂದು ಪೊಲೀಸರು (Police) ತಿಳಿಸಿದ್ದಾರೆ.
ಸರ್ಕಾರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಹಾಕುವಂತೆ ಸೂಚನೆ ನೀಡಿದ ಬೆನ್ನಲ್ಲೇ ಹೆಚ್‌ಎಸ್‌ಆರ್‌ಪಿ ಹೆಸರಿನಲ್ಲಿ ಅನ್‌ಲೈನ್‌ನಲ್ಲಿ ನಕಲಿ ಕ್ಯೂ ಆರ್ ಕೋಡ್‌ಗಳು ಮತ್ತು ಲಿಂಕ್‌ಗಳು ಹರಿದಾಡುತ್ತಿವೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ – 3 ಸಾವು, 6 ಮಂದಿ ಗಂಭೀರ ಗಾಯ
ಮೊದಲು ನಕಲಿ ಲಿಂಕ್‌ಗಳನ್ನು ಹರಿಬಿಟ್ಟು ಖದೀಮರು ನೋಂದಣಿ ಮಾಡಿಸುತ್ತಾರೆ. ಆ ಲಿಂಕ್‌ಗಳಲ್ಲಿ ನೋಂದಣಿ ಮಾಡಿದ ಬಳಿಕ ಒಂದು ಕ್ಯೂ ಆರ್ ಕೋಡ್ ಸಿಗುತ್ತೆ. ಒಂದು ವೇಳೆ ಬಂದಿರುವ ಕ್ಯೂ ಆರ್ ಕೋಡ್‌ನನ್ನು ಟಚ್ ಮಾಡಿದರೆ ಅಪರಿಚಿತರ ಖಾತೆಗೆ ನಿಮ್ಮ ಖಾತೆ ಲಿಂಕ್ ಆಗುತ್ತದೆ. ಸ್ವಲ್ಪ ಎಮಾರಿದ್ರು ನಿಮ್ಮ ಖಾತೆಯಲ್ಲಿರುವ ಹಣ ಖದೀಮರ ಪಾಲಾಗುತ್ತದೆ. ಇದನ್ನೂ ಓದಿ: ಕಾಂತಾರ-2ನಲ್ಲಿ ದೈವಾರಾಧನೆ ಪ್ರದರ್ಶನವಾದ್ರೆ ಉಗ್ರ ಹೋರಾಟ – ರಿಷಬ್ ಶೆಟ್ಟಿಗೆ ವಿಹೆಚ್‌ಪಿ, ಬಜರಂಗ ದಳ ಎಚ್ಚರಿಕೆ
ಈ ಬಗ್ಗೆ ವ್ಯಕ್ತಿ ಒಬ್ಬರು ಎಕ್ಸ್ ಮೂಲಕ ಕ್ಯೂ ಆರ್ ಕೋಡ್ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಸೈಬರ್ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ. ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಶೆಟ್ಟರ್‌ಗೆ ತಟ್ಟಿತು ಕೈ ಕಾರ್ಯಕರ್ತರ ಪ್ರತಿಭಟನೆ ಬಿಸಿ
ಏನಿದು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್?
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ನಲ್ಲಿ ನಿಮ್ಮ ಕಾರಿನ ಅಥವಾ ದ್ವಿಚಕ್ರ ವಾಹನದ ಸಂಪೂರ್ಣ ಮಾಹಿತಿ ಇರುತ್ತೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ನಲ್ಲಿ ನಿಮ್ಮ ವಾಹನದ ಇಂಜಿನ್ ಸಂಖ್ಯೆ, ಚಾಸ್ಸಿ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳು ಇರುತ್ತವೆ. ಈ ಎಲ್ಲಾ ಮಾಹಿತಿಗಳೂ ಕೇಂದ್ರೀಯ ಡೆಟಾಬೇಸ್‌ನಲ್ಲಿ ಸಂಗ್ರಹವಾಗಿರುತ್ತದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ – ಮೋದಿ, ನಡ್ಡಾ ನೇತೃತ್ವದಲ್ಲಿ 2 ದಿನ ಹೈವೋಲ್ಟೇಜ್ ಸಭೆ
ಒಂದು ವೇಳೆ ವಾಹನ ಕಳ್ಳತನವಾದ್ರೆ ಈ ಮಾಹಿತಿಯನ್ನ ಬಳಸಿಕೊಂಡು ಬೇಗ ಹುಡುಕಬಹುದು. ವಾಹನಕ್ಕೆ ನಾವು ಹಾಕಿರುವ ನಂಬರ್ ಪ್ಲೇಟ್‌ಅನ್ನು ಅನಧಿಕೃತವಾಗಿ ಬದಲಾವಣೆ ಮಾಡೋಕೆ ಸಾಧ್ಯವೇ ಇಲ್ಲ. ಇನ್ನು ಕಳ್ಳರ ಕೈಗೆ ಸಿಕ್ಕರೆ ಅದನ್ನು ಕೂಡಲೇ ತೆಗೆಯೋದಕ್ಕೂ ಸಾಧ್ಯವಿಲ್ಲ. ಇನ್ನು ಈ ಪ್ಲೇಟ್‌ನಲ್ಲಿ ಇರುವ ಮಾಹಿತಿಯನ್ನು ತಿದ್ದಲು ಕೂಡಾ ಸಾಧ್ಯವಿಲ್ಲ. ಒಂದು ವೇಳೆ ವಾಹನದ ಬದಲು ಕೇವಲ ಪ್ಲೇಟ್ ಕಳ್ಳತನ ಮಾಡಿದರೆ, ಅದನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಇದನ್ನೂ ಓದಿ: ನೇಣು ಬಿಗಿದುಕೊಂಡು ಮಹಿಳಾ ಪೇದೆ ಆತ್ಮಹತ್ಯೆ