ಕಾರವಾರ: ವಿವಾಹಿತ ಮಹಿಳೆಯ ಮೊಬೈಲ್ (Mobile) ಹ್ಯಾಕ್ ಮಾಡಿ ಫೋಟೋಗಳನ್ನು ಎಡಿಟ್ ಮಾಡಿ ಆಕೆಯ ಸ್ನೇಹಿತರಿಗೆ ಕಳುಹಿಸುವ ಮೂಲಕ ಹಣದ ಬೇಡಿಕೆ ಇಟ್ಟಿದ್ದ ಹೊನ್ನಾವರ ಮೂಲದ ಹ್ಯಾಕರ್‌ನನ್ನು (Hacker) ಹರಿಯಾಣ ಪೊಲೀಸರು (Police) ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
Advertisement
ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದ ಇಮ್ದಾದ್ ಮುಲ್ಲಾ ಪೊಲೀಸರು ವಶಕ್ಕೆ ಪಡೆದ ಆರೋಪಿ. ಹರಿಯಾಣ ಪೊಲೀಸರು ಹೊನ್ನಾವರಕ್ಕೆ ಬಂದು ಅಲ್ಲಿನ ಪೊಲೀಸರ ಸಹಕಾರದೊಂದಿಗೆ ಇಮ್ದಾದ್ ಮುಲ್ಲಾನನ್ನು ವಶಕ್ಕೆ ಪಡೆದಿದ್ದು, ಆತನಿಂದ ಮೊಬೈಲ್, ಲ್ಯಾಪ್‍ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್ 22 ವರ್ಷದ ಲೀನಾ ನಾಗವಂಶಿ ಆತ್ಮಹತ್ಯೆ?
Advertisement
Advertisement
ವೈಯಕ್ತಿಕ ದ್ವೇಷದಿಂದ ಅಮೆರಿಕ (America) ಮೂಲದ ಮಹಿಳೆ ಹರಿಯಾಣದ ಗುರುಗ್ರಾಮ ಮೂಲದ ವಿವಾಹಿತ ಮಹಿಳೆಯ ಚಾರಿತ್ರ್ಯ ಹಾಳು ಮಾಡಲು ಸಂಚು ಹೂಡಿದ್ದಳು. ಅದಕ್ಕಾಗಿ ಹ್ಯಾಕರ್‌ಗಳನ್ನು ಹುಡುಕುತ್ತ, ಆ್ಯಪ್‍ವರ್ಕ್ ಡಾಟ್ ಕಾಮ್ ವೆಬ್‍ಸೈಟ್ ಮೂಲಕ ಇಮ್ದಾದ್ ಮುಲ್ಲಾನ ಸಂಪರ್ಕ ಮಾಡಿದ್ದಾಳೆ. ತಾನು ಸೂಚಿಸಿದ ಮಹಿಳೆಯ ಮೊಬೈಲ್ ಹ್ಯಾಕ್ ಮಾಡಿ, ಆಕೆಯ ನಂಬರ್‌ನಿಂದ ಬೇರೆಯವರಿಗೆ ಆಕೆಯ ನಗ್ನ ವೀಡಿಯೋ ಹಾಗೂ ಫೋಟೋಗಳನ್ನು ಕಳುಹಿಸುವಂತೆ ಇಮ್ದಾಲ್ ಮುಲ್ಲಾನಿಗೆ ಸುಪಾರಿ ಕೊಟ್ಟಿದ್ದಳು. ಸುಪಾರಿ ಪಡೆದಿದ್ದ ಇಮ್ದಾದ್, ಮಹಿಳೆಯ ಮೊಬೈಲ್ ಹ್ಯಾಕ್ ಮಾಡಿ, ಆಕೆಯ ಫೋಟೋಗಳನ್ನು ಮೊಬೈಲ್‍ನಿಂದ ಪಡೆದುಕೊಂಡಿದ್ದ.
Advertisement
ಆ ಬಳಿಕ ಆಕೆಯ ಫೋಟೋವನ್ನು ನಗ್ನವಾಗಿರುವಂತೆ ಎಡಿಟ್ ಮಾಡಿ, ನಕಲಿ ಅಶ್ಲೀಲ ವೀಡಿಯೋಗಳನ್ನೂ ತಯಾರಿಸಿ, ಆಕೆಯ ನಂಬರ್‌ನಿಂದಲೇ ಆಕೆಯ ಸಂಪರ್ಕದಲ್ಲಿದ್ದ ಇತರೆ ನಂಬರ್‌ಗಳಿಗೆ ಪ್ರತಿನಿತ್ಯ ಬೆಳಗ್ಗೆ, ರಾತ್ರಿ ಕಳುಹಿಸುತ್ತಿದ್ದ. ವಿಷಯ ತಿಳಿದ ಮಹಿಳೆ ತನ್ನದೇ ನಂಬರ್‌ನಿಂದ ವೀಡಿಯೋ, ಫೋಟೋಗಳು ಶೇರ್ ಆಗುತ್ತಿರುವುದರಿಂದ ಗಾಬರಿಗೊಂಡು, ಮಾನಸಿಕ ಹಿಂಸೆಗೆ ಗುರಿಯಾಗಿದ್ದಳು. ಅಲ್ಲದೆ ಆಕೆಯ ಸಾಂಸಾರಿಕ ಜೀವನದಲ್ಲೂ ಸಾಕಷ್ಟು ಒಡಕು ಮೂಡಿತ್ತು. ಇದರಿಂದ ಬೇಸತ್ತ ಮಹಿಳೆ ಗುರುಗ್ರಾಮ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಇದನ್ನೂ ಓದಿ: ಮಕ್ಕಳಾಗಿಲ್ಲ ಎಂದು ಪತ್ನಿಯನ್ನು ಥಳಿಸಿದ ಪತಿ- ಖಾಸಗಿ ಅಂಗಕ್ಕೆ ಗಾಯ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹರಿಯಾಣ ಪೊಲೀಸರು, ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸುತ್ತಿರುವಾಗ ಅಮೆರಿಕ ಮೂಲದ ಮಹಿಳೆಯ ಜೊತೆ ದೂರು ನೀಡಿದ ಮಹಿಳೆಗೆ ವೈಯಕ್ತಿಕ ದ್ವೇಷವಿರುವುದು ತಿಳಿದು ಬಂದಿದೆ. ಬಳಿಕ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಪ್ರಕರಣದಲ್ಲಿ ಚಂದಾವರ ಮೂಲದ ಹ್ಯಾಕರ್‌ನ ಕೈವಾಡ ಇರುವ ಬಗ್ಗೆ ತಿಳಿದುಬಂದಿದ್ದು, ಈತನನ್ನ ಹೊನ್ನಾವರದಿಂದ ವಶಕ್ಕೆ ಪಡೆದು ಹರಿಯಾಣಕ್ಕೆ ಕರೆದೊಯ್ದು ಅಲ್ಲಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಐಷಾರಾಮಿ ಜೀವನದ ಆಸೆಗೆ ಬಿದ್ದು ಹ್ಯಾಕರ್ ಆದ:
ಆರೋಪಿ ಇಮ್ದಾದ್ ಐಷಾರಾಮಿ ಜೀವನ ನಡೆಸುವ ಆಸೆಗೆ ಬಿದ್ದಿದ್ದ ಹೀಗಾಗಿ ಹ್ಯಾಕಿಂಗ್ ಫುಲ್ ಟೈಮ್ ಉದ್ಯೋಗ ಮಾಡಿಕೊಂಡಿದ್ದ. ಹಲವರ ಮೊಬೈಲ್ ಹ್ಯಾಕ್ ಮಾಡಿ ಹಣ ವಸೂಲಿ ಮಾಡುತ್ತಿದ್ದ. ಬಂದ ಹಣದಿಂದ ಐಷಾರಾಮಿ ಕಾರು, ಬೈಕ್ ಕೊಂಡು ಎಂಜಾಯ್ ಮಾಡುತಿದ್ದ. ಈತನ ಐಷಾರಾಮಿ ಜೀವನಕ್ಕೆ ಇಡೀ ತಾಲೂಕಿನಲ್ಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ 2017ರಲ್ಲಿ ಬಿ.ಇ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ಮುಗಿಸಿದ ನಂತರ ಅಮೆರಿಕನ್ ಮೆಡಿಕಲ್ ಕೇರ್, ಜಸ್ಟ್ ಪೇ ಸೇರಿದಂತೆ ಹಲವು ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದ ಇಮ್ದಾದ್, ಯುಪಿಐ ಸಾಫ್ಟ್‌ವೇರ್ ಡೆವಲಪರ್ ಆಗಿ ಸಹ ಕೆಲಸ ಮಾಡಿದ್ದ. ನಂತರ ಮರಳಿ ಊರಿಗೆ ಬಂದು ಅ್ಯಪ್‍ವರ್ಕ್ ಡಾಟ್ ಕಾಮ್‍ನಲ್ಲಿ ಎಥಿಕಲ್ ಹ್ಯಾಕರ್ ಆಗಿ ಸೇರಿಕೊಂಡಿದ್ದ. ಈತನ ಬಳಿ ಐಷಾರಾಮಿ ಬಿಎಂಡಬ್ಲ್ಯೂ ಕಾರು, ಬಿಎಂಡಬ್ಲ್ಯೂ ಬೈಕ್‍ಗಳೂ ಇದ್ದು, ಶೋಕಿ ಜೀವನ ನಡೆಸುತ್ತಿದ್ದ. ಇದನ್ನೂ ಓದಿ: ಶಿಜಾನ್ ಖಾನ್ ಭೇಟಿಯಾದ ಬಳಿಕ ನಮ್ಮ ಹುಡುಗಿ ಹಿಜಬ್ ಧರಿಸುತ್ತಿದ್ದಳು – ನಟಿಯ ಚಿಕ್ಕಪ್ಪ ಆರೋಪ
ಗಂಟೆಗೆ 50 ಸಾವಿರ!
ಆರೋಪಿ ಇಮ್ದಾದ್, ಹ್ಯಾಕಿಂಗ್ ಕೆಲಸಕ್ಕಾಗಿ ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಎನ್ನಲಾಗಿದೆ. ಹರಿಯಾಣ ಮೂಲದ ಮಹಿಳೆಯ ಮೊಬೈಲ್ ಹ್ಯಾಕ್ ಮಾಡಲು ಸಹ ಅಮೆರಿಕ ಮೂಲದ ಮಹಿಳೆಯಿಂದ ಲಕ್ಷಾಂತರ ರೂಪಾಯಿ ಪಡೆದಿದ್ದ ಎನ್ನುವ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಸದ್ಯ ಈತನ ಜಾಲ ದೊಡ್ಡದಾಗಿದ್ದು ಹೆಚ್ಚಿನ ತನಿಖೆ ನಂತರ ಮಾಹಿತಿ ಹೊರಬರಬೇಕಿದೆ.