ಹೈದರಾಬಾದ್: ವ್ಯಕ್ತಿಯೊಬ್ಬ ಮೊಬೈಲಿನಲ್ಲಿ ತನ್ನ ಗೆಳತಿಯೊಡನೆ ಯಾವಾಗಲೂ ಚಾಟ್ ಮಾಡುತ್ತಿದ್ದಕ್ಕೆ ಪತ್ನಿ ಬೈದಿದ್ದಾಳೆ. ಇದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ಆತನೊಡನೆ ಚಾಟ್ ಮಾಡುತ್ತಿದ್ದ ಗೆಳತಿಯೂ ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಈ ಘಟನೆ ಸಿಕಂದರಾಬಾದ್ ನ ಈಸ್ಟ್ ಮರ್ರೆದ್ಪಲ್ಲಿ ಪ್ರದೇಶದಲ್ಲಿ ನಡೆದಿದೆ. ಕೆ. ಶಿವಕುಮಾರ್(27) ಪತ್ನಿಯ ಮಾತಿನಿಂದ ಮನನೊಂದು ನೇಣಿಗೆ ಶರಣಾದ ಪತಿ. ಈತ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು. ಶನಿವಾರ ಈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
- Advertisement 2
- Advertisement 3
ಏನಿದು ಪ್ರಕರಣ?
ಮೃತ ಶಿವಕುಮಾರ್ ಗೆ ಇದೇ ವರ್ಷ ಆಗಸ್ಟ್ 15ರಂದು ಮದುವೆಯಾಗಿತ್ತು. ಆದರೆ ಪತಿ-ಪತ್ನಿ ಇಬ್ಬರು ಚಿಕ್ಕ ವಿಚಾರಗಳಿಗೂ ಸಹ ಜಗಳ ಮಾಡಿಕೊಳ್ಳುತ್ತಿದ್ದರು. ಈ ಮಧ್ಯೆ ಪತ್ನಿಗೂ ಸಮಯ ಕೊಡದೇ ಶಿವಕುಮಾರ್ ಸದಾ ವಾಟ್ಸಪ್ ನಲ್ಲಿ ಮೆಸೇಜ್ ಮಾಡುತ್ತಿದ್ದನು. ಕೆಲವು ದಿನಗಳ ಹಿಂದೆ ಪತಿ ಬೇರೊಬ್ಬ ಯುವತಿ ಜೊತೆಗೆ ಚಾಟ್ ಮಾಡುತ್ತಿದ್ದಾನೆ ಎಂದು ಪತ್ನಿಗೆ ಅನುಮಾನ ಬಂದಿದೆ. ಬಳಿಕ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಪ್ರತಿ ದಿನಸ ಜಗಳ ಮಾಡಿಕೊಳ್ಳುತ್ತಿದ್ದರು. ಇದರಿಂದ ಬೇಸತ್ತ ಶಿವಕುಮಾರ್ ಶನಿವಾರ ಮನೆಯಲ್ಲೇ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಲೀಸರು ವಿವರಿಸಿದ್ದಾರೆ.
- Advertisement 4
ಇತ್ತ ಶಿವಕುಮಾರ್ ಬಾಲ್ಯದ ಸ್ನೇಹಿತೆ ಸಿ. ವೆನೇಲಾ (19) ತನ್ನ ಸ್ನೇಹಿತ ಮೃತಪಟ್ಟ ಸಂಗತಿ ತಿಳಿದಿದೆ. ಇದರಿಂದ ಖಿನ್ನತೆಗೆ ಒಳಗಾಗಿ ಶನಿವಾರ ತಾನು ಸಹ ವಿಷ ಸೇವಿಸಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾಳೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆ ಕುರಿತು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv