ಪೋಸ್ಟರ್ ಹಾಗೂ ಟೀಸರ್ ಮೂಲಕ ಸದ್ದು ಮಾಡ್ತಿರುವ ರಾಧಿಕಾ ನಾರಾಯಣ್ ಅಭಿನಯದ ಚೇಸ್ ಸಿನೆಮಾದಿಂದ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗಿದ್ದು, ಬಿಡುಗಡೆಗೆ ಸಜ್ಜಾಗಿರೋ ಚೇಸ್ ಮೇಲೆ ಅಭಿಮಾನಿಗಳು ಕಣ್ಣಿಡುವಂತಾಗಿದೆ. ಹೌದು, ಟೈಟಲ್‌ನಲ್ಲೇ ಕುತೂಹಲ ಹುಟ್ಟಿಸೋ ಈ ಚೇಸ್, ವಿಲೋಕ್ ಶೆಟ್ಟಿ ನಿರ್ದೇಶಿಸಿರೋ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರದ ಸಿನೆಮಾ.
Advertisement
‘ಹುಡುಗಿ ಇವಳು ತರಲೆ,ಆದರೆ ಇಷ್ಟ ಆಗ್ತಾಳೆ’ ಅಂತ ಶುರುವಾಗೋ ಕ್ಯೂಟ್ ಕ್ಯೂಟ್ ಸಾಲುಗಳ ಈ ಹಾಡಿಗೆ ಉಮೇಶ್ ಪಿಲಿಕುಡೆಲು ಸಾಹಿತ್ಯ, ಬೆನ್ನಿ ದಯಾಳ್ ಧ್ವನಿ, ಕಾರ್ತಿಕ್ ಆಚಾರ್ಯ ಸಂಗೀತ ಸಂಯೋಜನೆ ಇದೆ. ಬಹಳ ಸುಂದರವಾಗಿ ಮೂಡಿಬಂದಿರೋ ಈ ಸಾಂಗ್ ಪ್ರೇಮಿಗಳ ದಿನದಂದು ಚೇಸ್ ಚಿತ್ರದಿಂದ ಸಿಕ್ಕ ಒಂದೊಳ್ಳೆ ಟ್ರೀಟ್ ಆಗಿದೆ.
Advertisement
Advertisement
ಸಿಂಪ್ಲಿಫನ್ ಮೀಡಿಯಾ ಫ್ರೈವೇಟ್ ಲಿಮಿಟೆಡ್ ಬ್ಯಾನರ್‌ನಲ್ಲಿ ತಯಾರಾದ ಚೇಸ್‌ಗೆ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರು. ಕಾರ್ತಿಕ್ ಆಚಾರ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
Advertisement
ತಾರಾಬಳಗದಲ್ಲಿ ರಾಧಿಕಾ ಚೇತನ್, ಅವಿನಾಶ್, ಸುಶಾಂತ್ ಪೂಜಾರಿ, ಶೀತಲ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ಅರವಿಂದ್ ಬೋಲಾರ್, ರೆಹಮಾನ್ ಹಾಸನ್, ಸುಧಾ ಬೆಳವಾಡಿ,ವೀಣಾ ಸುಂದರ್, ಸುಂದರ್, ಉಷಾ ಭಂಡಾರಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.