ಬೆಂಗಳೂರು: ಮಂಗಳವಾರ ನಡೆದ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ಗೆ ಎಂಟ್ರಿ ನೀಡಿದೆ. ಪಂದ್ಯದಷ್ಟೇ ಹೆಚ್ಚು ಜನರ ಮೆಚ್ಚುಗೆಗೆ ಪಾತ್ರವಾದ 87 ವರ್ಷದ ಚಾರುಲತಾ ಪಟೇಲ್ ಒಂದೇ ದಿನದಲ್ಲಿ ಭಾರತೀಯರ ಫೇವರೇಟ್ ಆಗಿದ್ದಾರೆ. ಇದೀಗ ಮಹಿಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ. ಭಾರತದ ಮುಂದಿನ ಎಲ್ಲ ಪಂದ್ಯಗಳ ಟಿಕೆಟ್ ಉಚಿತವಾಗಿ ನೀಡುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
As per my tradition, I wasn’t watching the match ???? But I’m going to switch it on now just to see this lady…She looks like a match winner…. https://t.co/cn9BLpwfyj
— anand mahindra (@anandmahindra) July 2, 2019
Advertisement
ಆನಂದ್ ಮಹಿಂದ್ರಾ ಟ್ವೀಟ್:
ಕ್ರಿಕೆಟ್ ಪಂದ್ಯ ನೋಡೋದು ನನ್ನ ಹವ್ಯಾಸವಲ್ಲ. ಆದ್ರೆ ಟಿವಿ ಆನ್ ಮಾಡಿದಾಗ ಅಜ್ಜಿಯನ್ನು ನೋಡಿದೆ. ಮ್ಯಾಚ್ ವಿನ್ನರ್ ರೀತಿಯಲ್ಲಿ ಅಜ್ಜಿ ಕಾಣುತ್ತಿದ್ದರು ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಪ್ರತಿಕ್ರಿಯಿಸಿದ ಮಹಿಳೆ, ಯಾಕೆ ನೀವು ಅಜ್ಜಿಗೆ ಸ್ಪಾನ್ಸರ್ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದರು. ಮಹಿಳೆ ಟ್ವೀಟ್ ಗೆ ಉತ್ತರಿಸಿದ ಆನಂದ್ ಮಹಿಂದ್ರಾ, ಕೊನೆಯ ಓವರ್ ನಲ್ಲಿ ಮಾತ್ರ ಪಂದ್ಯ ನೋಡಿದೆ. ಮುಂದಿನ ಪಂದ್ಯಗಳಲ್ಲಿಯೂ ಭಾರತ ಹೀಗೆ ಆಡಲಿ ಎಂದು ಹಾರೈಸುತ್ತೇನೆ. ಸಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿಯೂ ಸ್ಫೂರ್ತಿದಾಯಕ ಅಜ್ಜಿ ಸ್ಟೇಡಿಯಂನಲ್ಲಿರಲಿ ಎಂಬುವುದು ನನ್ನ ಆಸೆ. ಹಾಗಾಗಿ ಭಾರತದ ಮುಂದಿನ ಪಂದ್ಯಗಳಿಗೆ ನಾನು ಅಜ್ಜಿಗೆ ಉಚಿತವಾಗಿ ಟಿಕೆಟ್ ನೀಡುತ್ತೇನೆ ಎಂದಿದ್ದಾರೆ.
Advertisement
Ok, watched the last over & it had all the drama I needed. The best victories are those that make you bite your nails at 1st & then make it look easy in the end. Shabash, India & make sure this match-winning lady is present at the semifinals & finals…give her a free ticket! https://t.co/Smp0MrqCIA
— anand mahindra (@anandmahindra) July 2, 2019
Advertisement
ಮತ್ತೊಂದು ಟ್ವೀಟ್ ನಲ್ಲಿ ಆ ಅಜ್ಜಿ ಯಾರು ಎಂಬುದನ್ನು ಪತ್ತೆ ಮಾಡಿ. ನಾನು ಕೊಟ್ಟ ಮಾತಿನಂತೆ ಇನ್ನುಳಿದ ಭಾರತ ತಂಡ ಆಡುವ ಪಂದ್ಯಗಳಿಗೆ ಟಿಕೆಟ್ ನೀಡುತ್ತೇನೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Advertisement
Find out who she is & I promise I will reimburse her ticket costs for the rest of the India matches!???? https://t.co/dvRHLwtX2b
— anand mahindra (@anandmahindra) July 2, 2019
ಯಾರು ಈ ಅಜ್ಜಿ?
ನಾನು ಭಾರತದಲ್ಲಿ ಹುಟ್ಟಿಲ್ಲ. ತಾಂಜಾನೀಯಾದಲ್ಲಿ ಜನಿಸಿದರೂ ನನ್ನ ಪೋಷಕರು ಭಾರತದಲ್ಲಿದ್ದರು. ಹೀಗಾಗಿ ನಾನು ನನ್ನ ದೇಶದ ಬಗ್ಗೆ ಹೆಮ್ಮೆಯಿದೆ. ಅಲ್ಲದೆ ನಾನು ದಶಕಗಳಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದೇನೆ. ನಾನು ಆಫ್ರಿಕಾದಲ್ಲಿ ಇದ್ದಾಗ ನಾನು ಪಂದ್ಯ ವೀಕ್ಷಿಸುತ್ತಿದೆ. ಬಳಿಕ 1975ರಲ್ಲಿ ನಾನು ಇಲ್ಲಿಗೆ ಬಂದೆ. ನನಗೆ ಕೆಲಸಗಳಿದ್ದ ಕಾರಣ ಪಂದ್ಯ ವೀಕ್ಷಿಸಲು ಸಮಯ ಇರುತ್ತಿರಲಿಲ್ಲ. ನಾನು ಟಿವಿಯಲ್ಲೇ ಪಂದ್ಯ ವೀಕ್ಷಿಸುತ್ತಿದೆ. ಕಳೆದ 20 ವರ್ಷದ ಹಿಂದೆ ನಾನು ವೃತ್ತಿಯಿಂದ ನಿವೃತ್ತಿ ಪಡೆದೆ. ಈ ನಡುವೆ ನನಗೆ ಕೆಲಸ ಇಲ್ಲ. ಹಾಗಾಗಿ ನನಗೆ ಕ್ರಿಕೆಟ್‍ನಲ್ಲಿ ಆಸಕ್ತಿ ಇದೆ. ಕ್ರಿಕೆಟ್ ವೀಕ್ಷಿಸಲು ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಲಕ್ಕಿ ಎಂದು ಚಾರುಲತಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
How amazing is this?!
India's top-order superstars @imVkohli and @ImRo45 each shared a special moment with one of the India fans at Edgbaston.#CWC19 | #BANvIND pic.twitter.com/3EjpQBdXnX
— ICC Cricket World Cup (@cricketworldcup) July 2, 2019
ನಾನು ತುಂಬಾ ಧಾರ್ಮಿಕ ವ್ಯಕ್ತಿ ಹಾಗೂ ನಾನು ದೇವರನ್ನು ತುಂಬಾ ನಂಬುತ್ತೇನೆ. ಗಣೇಶನನ್ನು ನಾನು ಪ್ರಾರ್ಥನೆ ಮಾಡಿದರೆ ಅದು ನಿಜವಾಗುತ್ತದೆ. ಭಾರತ ತಂಡ ಈ ಬಾರಿ ಪಕ್ಕಾ ವಿಶ್ವಕಪ್ ಗೆಲ್ಲುತ್ತದೆ. ಮಾಜಿ ಕ್ರಿಕೆಟಿಗ ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ ನಾನು ಮೈದಾನದಲ್ಲೇ ಇದ್ದೆ. ಅವರು ವಿಶ್ವಕಪ್ ಗೆದ್ದಾಗ ನನಗೆ ತುಂಬಾ ಹೆಮ್ಮೆ ಆಯಿತು. ಅಲ್ಲದೆ ನಾನು ಖುಷಿಯಿಂದ ಡ್ಯಾನ್ಸ್ ಮಾಡಿದ್ದೆ. ಇಂದು ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿದರೆ, ಡ್ಯಾನ್ಸ್ ಮಾಡುವುದಾಗಿ ನಾನು ನನ್ನ ಮೊಮ್ಮಗಳ ಬಳಿ ಹೇಳಿದೆ ಎಂದು ಹೇಳಿದರು.
India's win today certainly brought a smile to the face of this India fan!#CWC19 | #BANvIND pic.twitter.com/JtvLden91C
— ICC Cricket World Cup (@cricketworldcup) July 2, 2019