ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿ (Charmadi Ghat) ಸುತ್ತಮುತ್ತ ಮಳೆ ಮುಂದುವರಿದಿದ್ದು, ಭಾರೀ ಗಾಳಿ-ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ರಸ್ತೆ (Road) ಬದಿಯ ಮಣ್ಣು ಕುಸಿದು ಬಿದ್ದಿದೆ.
Advertisement
ಕೊಟ್ಟಿಗೆಹಾರ ಸಮೀಪದ ಬಿದಿರುತಳ ಎಂಬ ಗ್ರಾಮದಲ್ಲಿ ರಸ್ತೆ ಬದಿಯ ಒಂದು ಭಾಗದ ಮಣ್ಣು ಕುಸಿದು ಬಿದ್ದಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದೆ. ಚಾರ್ಮಾಡಿ ಘಾಟಿಯ ರಸ್ತೆಯ ಒಂದು ಬದಿ ಬೆಟ್ಟ-ಗುಡ್ಡಗಳಿಂದ ಕೂಡಿದ್ದರೆ, ಮತ್ತೊಂದು ಬದಿಯಲ್ಲಿ ಆಳವಾದ ಪ್ರಪಾತವಿದೆ. ಪ್ರಪಾತದ ಬಳಿ ರಸ್ತೆಯ ಮಣ್ಣು ಕುಸಿತಕಂಡು ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿದೆ. ಆದರೆ, ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಈ ಭಾಗದಲ್ಲಿ ಭಾರೀ ವಾಹನಗಳು ಸಂಚಾರ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗಿದೆ. ಆದರೆ, ಸ್ಥಳಕ್ಕೆ ಭೇಟಿ ನೀಡಿರುವ ಬಣಕಲ್ ಪೊಲೀಸರು (Police) ರಸ್ತೆ ಕುಸಿದಿರುವ ಜಾಗಕ್ಕೆ ಟೇಪ್ ಹಾಕಿ ಕಲ್ಲುಗಳನ್ನು ಅಡ್ಡವಿಟ್ಟು ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬ್ಯಾನರ್‌ನಲ್ಲಿ ಸಿದ್ದು ಫೋಟೋ ಮಾಯ- ಸಿದ್ದರಾಮಯ್ಯ ಇಲ್ಲಿಗೆ ಬಂದಾಗ ಫೋಟೋ ಹಾಕ್ತಾರೆ: ಡಿಕೆಶಿ
Advertisement
Advertisement
ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸುಮಾರು ಗಂಟೆಗೂ ಹೆಚ್ಚು ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಗೆ ಮರ ಬಿದ್ದ ಪರಿಣಾಮ ಸುಮಾರು ಒಂದು ಕಿ.ಮೀ. ಹೆಚ್ಚು ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು. ಬಳಿಕ ಸ್ಥಳೀಯರು ಮರವನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ, ಸ್ಥಳೀಯರು ಸರ್ಕಾರ ಮಳೆಗಾಲ ಮುಗಿಯುವವರೆಗೆ ಈ ಭಾಗದಲ್ಲಿ ಭಾರೀ ವಾಹನಗಳಿಗೆ ಸಂಚಾರವನ್ನು ಸಂಪೂರ್ಣ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪಾರ್ಸೆಲ್ ಮಾಡಿರೋ 10 ದೋಸೆ ನನಗೆ ಬಂದಿಲ್ಲ, ಇದರಲ್ಲೂ ಮೋಸ: ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ