ಚಾರ್ಲಿ 777 (Charlie 777) ಸಿನಿಮಾದ ನಂತರ ನಿರ್ದೇಶಕ ಕಿರಣ್ ರಾಜ್ (Kiran Raj) ಮುಂದೇನು ಮಾಡುತ್ತಾರೆ ಎನ್ನುವ ಕುತೂಹಲ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಇತ್ತು. ಚಾರ್ಲಿ ನಂತರ ನಟ ರಕ್ಷಿತ್ ಶೆಟ್ಟಿ ಹಲವಾರು ಪ್ರಾಜೆಕ್ಟ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರ ನಾಯಕಿ ಕೂಡ ಬಿಗ್ ಬಾಸ್ ಸೇರಿದಂತೆ ಹಲವು ಕೆಲಸಗಳಲ್ಲಿ ತಮ್ಮನ್ನು ತಾವು ವಿನಿಯೋಗಿಸಿಕೊಂಡಿದ್ದಾರೆ. ಆದರೆ, ನಿರ್ದೇಶಕರು ಮಾತ್ರ ಸುಮ್ಮನಿದ್ದರು.
ಕೆಲ ತಿಂಗಳ ಹಿಂದೆ ಹೊಸದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವ ಬಗ್ಗೆ ಕಿರಣ್ ರಾಜ್ ಹೇಳಿಕೊಂಡಿದ್ದರು. ಅದೊಂದು ಕಾಮಿಡಿ ಹಾರರ್ ಚಿತ್ರ ಎಂದು ಮಾಹಿತಿ ಹಂಚಿಕೊಂಡಿದ್ದರು. ವಿಎಫ್ ಎಕ್ಸ್ ತುಂಬಾ ಇರುವ ಕಾರಣದಿಂದಾಗಿ ಅದನ್ನು ಕಲಿಯಲು ಹೊರಟಿದ್ದೇನೆ ಎಂದಿದ್ದರು. ವಿದೇಶಕ್ಕೂ ಹಾರಿದ್ದರು.
ಕಿರಣ್ ರಾಜ್ ಇದೀಗ ವಿದೇಶದಿಂದ ವಾಪಸ್ಸಾಗಿದ್ದರು. ಬಂದವರೇ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ಮುಂಬೈನಲ್ಲಿ ಅವರು ಬಾಲಿವುಡ್ (Bollywood) ನಟ ಜಾನ್ ಅಬ್ರಾಹಂ (John Abraham) ಅವರನ್ನು ಭೇಟಿ ಮಾಡಿದ್ದು, ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಅತ್ಯುತ್ತಮ ಗಳಿಗೆ ಎಂದು ಬರೆದುಕೊಂಡಿದ್ದಾರೆ.
ಹಲವು ಭಾಷೆಗಳಲ್ಲಿ ತಮ್ಮ ಸಿನಿಮಾ ನಿರ್ಮಾಣವಾಗಲಿದೆ ಎಂದು ಹೇಳಿದ್ದರಿಂದ, ಮುಂದಿನ ಸಿನಿಮಾವನ್ನು ಜಾನ್ ಅಬ್ರಾಹಂಗಾಗಿ ಮಾಡಲಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅವರೇ ಉತ್ತರ ಕೊಡಬೇಕು.