ಕಾಮಿಡಿ ಜಗತ್ತಿನ ದಂತಕಥೆ ನಟ ಚಾರ್ಲಿ ಚಾಪ್ಲಿನ್ (Charlie Chaplin) ಪುತ್ರಿ ಜೋಸೆಫೀನ್ ನಿಧನರಾಗಿದ್ದಾರೆ. ಜುಲೈ 13ರಂದೇ ಜೋಸೆಫೀನ್ ಇಹಲೋಕ ತ್ಯಜಿಸಿದ್ದಾರೆ ಎಂದು ಯುಎಸ್ ಮೂಲದ ಮಾಧ್ಯಮಗಳು ವರದಿ ಮಾಡಿವೆ. ಪ್ಯಾರಿಸ್ (Paris) ನಲ್ಲಿ ನೆಲೆಸಿದ್ದ ಅವರಿಗೆ 74 ವರ್ಷ ವಯಸ್ಸಾಗಿದೆ. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.
ಜೋಸೆಫೀನ್ (Josephine) ಕೂಡ ನಟಿಯಾಗಿದ್ದು, ತನ್ನ ತಂದೆಯ ಜೊತೆಯೇ ಚಿಕ್ಕ ವಯಸ್ಸಿನಲ್ಲೇ ಬಣ್ಣ ಹಚ್ಚಿದ್ದರು. 1952ರಲ್ಲೇ ಸಿನಿಮಾ ರಂಗ ಪ್ರವೇಶ ಮಾಡಿದ್ದ ಜೋಸೆಫೀನ್, ತಂದೆ ಚಾರ್ಲಿ ಚಾಪ್ಲಿನ್ ಜೊತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ದಿ ಕ್ಯಾಂಟರ್ಬರಿ, ಎಸ್ಕೇಪ್ ಟು ದಿ ಸನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಅಲ್ಲದೇ ದೂರದರ್ಶನಕ್ಕಾಗಿ ಹಲವಾರು ಸರಣಿಗಳಲ್ಲಿ ಇವರು ನಟಿಸಿದ್ದಾರೆ. ಜೋಸೆಫೀನ್ ನಿಧನಕ್ಕೆ ಹಲವರು ಕಂಬನಿ ಕೂಡ ಮಿಡಿದಿದ್ದಾರೆ. ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಜೋಸೆಫೀನ್ ಅಗಲಿದ್ದಾರೆ.
Web Stories