ಲಂಡನ್: ರಾಣಿ 2ನೇ ಎಲಿಜಬೆತ್(Elizabeth II) ಸುದೀರ್ಘ 70 ವರ್ಷಗಳ ಆಳ್ವಿಕೆಯನ್ನು ಪೂರೈಸಿ ಗುರುವಾರ ನಿಧನ ಹೊಂದಿದರು. ಇದೀಗ ಎಲಿಜಬೆತ್ ಅವರ ಹಿರಿಯ ಪುತ್ರ 3ನೇ ಚಾರ್ಲ್ಸ್‌ನನ್ನು(Charles III) ಅಧಿಕೃತವಾಗಿ ಬ್ರಿಟನ್(Britain)ನ ರಾಜ ಎಂದು ಶನಿವಾರ ಘೋಷಿಸಲಾಗಿದೆ.
ಲಂಡನ್‌ನ(London) ಸೇಂಟ್ ಜೇಮ್ಸ್ ಅರಮನೆಯಲ್ಲಿ ಇಂದು ಕಿಂಗ್ ಚಾರ್ಲ್ಸ್ ಅವರನ್ನು ಅಧಿಕೃತವಾಗಿ ಬ್ರಿಟನ್‌ನ ರಾಜ ಎಂದು ಘೋಷಿಸಲಾಗಿದೆ.
Advertisement
Advertisement
ಶುಕ್ರವಾರ ಹಿರಿಯ ರಾಜನಾಗಿ ಮೊದಲ ಬಾರಿ ಮಾಡಿದ ಭಾಷಣದಲ್ಲಿ, ಕಿಂಗ್ ಚಾರ್ಲ್ಸ್ ರಾಣಿ 2ನೇ ಎಲಿಜಬೆತ್ ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡರು. ಅವರು ನಿಷ್ಠೆ, ಗೌರವ ಮತ್ತು ಪ್ರೀತಿಯಿಂದ ತಮ್ಮ ಜೀವನಪರ್ಯಂತ ರಾಷ್ಟ್ರದ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದರು. ಇದನ್ನೂ ಓದಿ: ಏಕದಿನ ಕ್ರಿಕೆಟ್‌ಗೆ ಆರನ್ ಫಿಂಚ್ ವಿದಾಯ
Advertisement
Advertisement
ಮುಂದೆ ಏನೆಲ್ಲಾ ಬದಲಾವಣೆ?
ರಾಣಿ ಎಲಿಜಬೆತ್ ನಿಧನದ ಬಳಿಕ ಇದೀಗ ಚಾಲ್ಸ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಬದಲಾವಣೆಯೊಂದಿಗೆ ದೇಶಾದ್ಯಂತ ಹಲವು ಬದಲಾವಣೆಯಾಗಲಿದೆ. ಅವುಗಳಲ್ಲಿ ಮುಖ್ಯವಾದವುಗಳು ಇಲ್ಲಿವೆ.
* ಬ್ರಿಟನ್ ಕರೆನ್ಸಿಯಲ್ಲಿ ಚಾರ್ಲ್ಸ್ ಚಿತ್ರ ಮುದ್ರಿಸಲಾಗುತ್ತದೆ.
* ರಾಷ್ಟ್ರಗೀತೆಯಲ್ಲಿ `ಗಾಡ್ ಸೇವ್ಸ್ ದಿ ಕ್ವೀನ್’ ಬದಲಿಗೆ `ಗಾಡ್ ಸೇವ್ ಅವರ್ ಪ್ರೀಷಿಯಸ್ ಕಿಂಗ್’ ಎಂದು ಬದಲಾಗಲಿದೆ.
* ಬ್ರಿಟನ್ ಜೊತೆಗೆ ಆಸ್ಟ್ರೇಲಿಯಾ, ಕೆನಡಾದ ರಾಷ್ಟ್ರಗೀತೆ ಬದಲಾಗುತ್ತದೆ.
* ಬ್ರಿಟಿಷ್ ಪಾಸ್‌ಪೋರ್ಟ್‌ನಲ್ಲಿ ರಾಣಿ ಸ್ಥಾನದಲ್ಲಿ ರಾಜನ ಚಿತ್ರ ಮುದ್ರಣವಾಗಲಿದೆ. ಇದನ್ನೂ ಓದಿ: ಎಎಪಿ ಅಧಿಕಾರಕ್ಕೇರಿದ ರಾಜ್ಯಗಳಲ್ಲಿ ಗುತ್ತಿಗೆ ನೌಕರರ ಹುದ್ದೆ ಖಾಯಂ: ಕೇಜ್ರಿವಾಲ್
* ಬ್ರಿಟನ್ ಅಂಚೆ ಚೀಟಿ, ಪೊಲೀಸ್ ಟೋಪಿಯಲ್ಲಿ ರಾಣಿ ಬದಲು ರಾಜನ ಚಿನ್ಹೆ ಇರಲಿದೆ.
* ಬಂಕಿಂಗ್‌ಹ್ಯಾಮ್ ಅರಮನೆ ಭದ್ರತಾ ಸಿಬ್ಬಂದಿಗೆ ಕ್ವೀನ್ ಗಾರ್ಡ್ಸ್ ಬದಲಾಗಿ ಕಿಂಗ್ ಗಾರ್ಡ್ಸ್ ಹೆಸರಿಸಲಾಗುತ್ತದೆ.
* ಎಲಿಜಬೆತ್ ಬಳಿಯಿದ್ದ ಕೋಹಿನೂರು ವಜ್ರವಿರುವ ಕಿರೀಟ ಕೆಮಿಲ್ಲಾ ಪಾರ್ಕರ್‌ಗೆ ಹಸ್ತಾಂತರವಾಗಲಿದೆ.
* ಬ್ರಿಟನ್ ರಾಜರಾದವರಿಗೆ ಪಾಸ್‌ಪೋರ್ಟ್ ಅಗತ್ಯವಿರುವುದಿಲ್ಲ.
* ಅವರ ಹುಟ್ಟುಹಬ್ಬವನ್ನು 2 ದಿನ ಆಚರಿಸಲಾಗುತ್ತದೆ.
* ಬ್ರಿಟನ್ ರಾಜ ಮತದಾನದಲ್ಲಿಯೂ ಪಾಲ್ಗೊಳ್ಳಲಾಗುವುದಿಲ್ಲ.