ಬೆಂಗಳೂರು: ರಾಜಧಾನಿಯಲ್ಲೇ ಅತಿ ದೊಡ್ಡ ಜಾತ್ರೆಯೆಂದು ಪ್ರಸಿದ್ಧಿ ಪಡೆದಿದ್ದ ಹುಸ್ಕೂರು ಮದ್ದೂರಮ್ಮ ಜಾತ್ರೆಯ (Huskur Madduramma Fair) ಕುರ್ಜು(ತೇರು) ನೆಲಕ್ಕೆ ಉರುಳಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿತ್ತು. ಘಟನೆಯ ಒಂದು ವಾರದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಕೆಳಹಂತದ 4 ಅಧಿಕಾರಿಗಳನ್ನು ಅಮಾನತು ಮಾಡಿದೆ.
ಬೆಂಗಳೂರು ಹೊರವಲಯದ (Bengaluru Rural) ಆನೇಕಲ್ (Anekal) ತಾಲೂಕಿನ ಹುಸ್ಕೂರು ಜಾತ್ರೆ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಜಾತ್ರೆಯಾಗಿದೆ. ಸುತ್ತಮುತ್ತಲ ಊರುಗಳಿಂದ ಸುಮಾರು ಹತ್ತಕ್ಕೂ ಹೆಚ್ಚು ತೇರುಗಳನ್ನು ಎಳೆದು ತಂದು ಜಾತ್ರೆ ನಡೆಸುತ್ತಿದ್ದರು. ಮಾ. 22ರ ಶನಿವಾರದಂದು ರಾಯಸಂದ್ರ ಹಾಗೂ ದೊಡ್ಡ ನಾಗಮಂಗಲ ಕುರ್ಜುಗಳು ನೆಲಕ್ಕೆ ಉರುಳಿದ್ದವು. ಇದೇ ಸಮಯದಲ್ಲಿ ರಾಯಸಂದ್ರ ಕುರ್ಜಿನ ಕೆಳಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದು, 8ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದರು. ಇದನ್ನೂ ಓದಿ: ಧರೆಗುರುಳಿದ ಮದ್ದೂರಮ್ಮ ಜಾತ್ರೆಯ ತೇರು – ಕುರ್ಜು ಕೆಳಗೆ ಸಿಲುಕಿ ಓರ್ವ ಸಾವು
ಈ ವಿಚಾರವಾಗಿ ಆನೇಕಲ್‌ನ ತಾಲೂಕು ಆಡಳಿತ ಸಹ ಕಣ್ಣು ಮುಚ್ಚಿಕೊಂಡು ಕುಳಿತಿತ್ತು. ಇದೀಗ ಎಚ್ಚೆತ್ತುಕೊಂಡ ಜಿಲ್ಲಾಡಳಿತ 4 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಕೂಡಲೇ ಸಂಬಂಧಪಟ್ಟ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಅವರಿಗೆ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಧರೆಗುರುಳಿದ ಮದ್ದೂರಮ್ಮ ಜಾತ್ರೆಯ ತೇರು – ಗಾಯಗೊಂಡಿದ್ದ ಯುವತಿ ಸಾವು
ತೇರು 80 ಅಡಿಗೂ ಮೀರಿ ಕಟ್ಟಬಾರದು ಎಂದು ಆದೇಶವಿದ್ದರೂ ಸಹ 150 ಅಡಿಗೂ ಎತ್ತರದ ತೇರು ನಿರ್ಮಿಸಿ ಎಳೆದು ತರಲಾಗಿತ್ತು. ಈ ಅವಘಡದಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದ ಜಿಲ್ಲಾಧಿಕಾರಿಗಳು ಕಂದಾಯ ಅಧಿಕಾರಿಗಳಾದ ಆರ್.ಐ.ಪ್ರಶಾಂತ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಕಾರ್ತಿಕ್‌ರನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕೆನಡಾ ಚುನಾವಣೆ| ಮೋದಿಯನ್ನು ಭೇಟಿಯಾಗಿದ್ದಕ್ಕೆ ಚಂದ್ರ ಆರ್ಯಗೆ ಟಿಕೆಟ್ ಮಿಸ್
ಆನೇಕಲ್ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸ್ಥಳೀಯರ ಒಳ ಪ್ರತಿಷ್ಠೆಯಿಂದ ಇದೀಗ ಎರಡು ಜೀವಗಳು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.