ಚಂಡೀಗಢ: ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾದ ದಿಢೀರ್ ನಾಯಕತ್ವ ಬದಲಾವಣೆ ಬಳಿಕ ಇದೀಗ ನೂತನ ಸಿಎಂ ಆಗಿ ಚರಣ್‍ಜಿತ್ ಸಿಂಗ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ.
Advertisement
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಶಾಸಕರಾಗಿದ್ದ ಸುಖ್‍ಜಿಂದರ್ ಸಿಂಗ್ ರಾಂಧವಾ ನವಜೋತ್ ಸಿಂಗ್ ಸಿಧು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದ ಕಾರಣ ಕೊನೇ ಕ್ಷಣದ ವರೆಗೂ ಅವರೆ ಸಿಎಂ ಎಂದು ಸುದ್ದಿ ಹರಿದಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ರಾಂಧಾವಾಗೆ ಶಾಕ್ ನೀಡಿ ಚರಣ್‍ಜಿತ್ ಸಿಂಗ್ ಸಿಎಂ ಎಂದು ಹೈಕಮಾಂಡ್ ತಿಳಿಸಿದೆ. ಇದನ್ನೂ ಓದಿ: ಆಗಾಗ ‘ಸಿಕ್ಸರ್’ ಹೇಳಿಕೆ ನೀಡಿ ಕೊನೆಗೂ ಕ್ಯಾಪ್ಟನನ್ನು ಕೆಳಗೆ ಇಳಿಸಿದ ಸಿಧು
Advertisement
"Congress leader Charanjit Singh Channi to be new Punjab Chief Minister," tweets senior Congress leader Harish Rawat pic.twitter.com/tupj6XUzUu
— ANI (@ANI) September 19, 2021
Advertisement
ಪಂಜಾಬ್ ಕಾಂಗ್ರೆಸ್‍ನಲ್ಲಿ ಆಂತರಿಕ ಸಂಘರ್ಷ ಮುಗಿಲುಮುಟ್ಟಿತ್ತು. ನಿನ್ನೆ ಕಡೆಗೂ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದರು. ಬಳಿಕ ಸಿಎಂ ರೇಸ್‍ನಲ್ಲಿ ಪ್ರಬಲ ಅಭ್ಯರ್ಥಿಯಾಗಿ ನವಜೋತ್ ಸಿಂಗ್ ಸಿಧು ಹೆಸರು ಕೇಳಿಬಂದಿದೆ. ಈ ನಡುವೆ ಅಚ್ಚರಿಯ ಹೆಸರೆಂಬಂತೆ ಸುನಿಲ್ ಜಾಖರ್ ಅವರ ಹೆಸರು ಹರಿದಾಡುತ್ತಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಸುಖ್‍ಜಿಂದರ್ ಸಿಂಗ್ ಕಡೆಗೆ ಒಲವು ವ್ಯಕ್ತಪಡಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅಮರೀಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ದಲಿತ ನಾಯಕ ಚರಣ್‍ಜಿತ್ ಸಿಂಗ್ ಛನ್ನಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ. ಇದನ್ನೂ ಓದಿ: ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ
Advertisement