ಚಂಡೀಗಢ: ಪಂಜಾಬ್ 16ನೇ ಮುಖ್ಯಮಂತ್ರಿಯಾಗಿ ನೇಮಕಗೊಂಡ ಚರಣಜಿತ್ ಸಿಂಗ್ ಚನ್ನಿ ಈಗಾಗಲೇ ಜನರ ಹೃದಯ ಗೆಲ್ಲಲು ಆರಂಭಿಸಿದ್ದಾರೆ. ಸದ್ಯ ಭಾನುವಾರ ಹೊಸದಾಗಿ ಮದುವೆಯಾಗಿ ತೆರಳುತ್ತಿದ್ದ ಜೋಡಿಗೆ ಸಿಎಂ ತಮ್ಮ ವಾಹನವನ್ನು ನಿಲ್ಲಿಸಿ ವಿಶ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪಂಜಾಬ್ ಸರ್ಕಾರ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಚರಣಜಿತ್ ಸಿಂಗ್ ಚನ್ನಿಯವರು ಭಟಿಂಡಾಗೆ ಭೇಟಿ ನೀಡಿದಾಗ ಹೊಸದಾಗಿ ಮದುವೆಯಾಗಿ ತೆರಳುತ್ತಿದ್ದ ನವ ದಂಪತಿಯನ್ನು ಮಂಡಿ ಕಲಾನ್ ಹಳ್ಳಿಯಲ್ಲಿ ಕಂಡು ಇದ್ದಕ್ಕಿಂತೆ ತಮ್ಮ ವಾಹನವನ್ನು ನಿಲ್ಲಿಸಿ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಗುಲಾಬ್ ಚಂಡಮಾರುತ ಎಫೆಕ್ಟ್- ಬೀದರ್‌ನಲ್ಲಿ ಮುಂದುವರಿದ ಮಳೆಯ ಅಬ್ಬರ
ವೀಡಿಯೋದಲ್ಲಿ ಚರಣಜಿತ್ ಸಿಂಗ್ ಚನ್ನಿ ವರನನ್ನು ತಬ್ಬಿ, ವಧುವಿಗೆ ಕಾಣಿಕೆ ಅರ್ಪಿಸಿ ವಿಶ್ ಮಾಡುವುದನ್ನು ಕಾಣಬಹುದಾಗಿದೆ. ಈ ವೇಳೆ ಸಿಎಂ ಸುತ್ತ ಪೊಲೀಸರು ಸುತ್ತುವರೆದಿರುತ್ತಾರೆ ಮತ್ತು ಇದೇ ವೇಳೆ ಚರಣಜಿತ್ ಸಿಂಗ್ ಚನ್ನಿ ಜೋಡಿಯ ಕುಟುಂಬದವರು ತಟ್ಟೆಯಲ್ಲಿಟ್ಟುಕೊಂಡಿದ್ದ ಸಿಹಿ ಖಾದ್ಯವನ್ನು ಸವಿದಿದ್ದಾರೆ.
During his visit to Bathinda today, Chief Minister @CHARANJITCHANNI spotted a newly married couple at village Mandi Kalan and suddenly stopped his vehicle to convey his best wishes. pic.twitter.com/kws6XBAZGf
— Government of Punjab (@PunjabGovtIndia) September 26, 2021
ಕೆಲವು ದಿನಗಳ ಹಿಂದೆ ಚರಣಜಿತ್ ಸಿಂಗ್ ಚನ್ನಿಯವರು ಪಂಜಾಬ್‍ನ ಜಾನಪದ ನೃತ್ಯ ಭಾಂಗ್ರಾವನ್ನು ಕಪುರ್ತಲಾದಲ್ಲಿ ನಡೆದ ಕಾರ್ಯಕ್ರದಲ್ಲಿ ಪ್ರದರ್ಶಿಸಿದ್ದರು. ಇದನ್ನೂ ಓದಿ: ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ