ನವದೆಹಲಿ: ರೈಲ್ವೆ ಇಲಾಖೆ ಮೇ ತಿಂಗಳಲ್ಲಿ ಚಾರ್ ಧಾಮ್ ಯಾತ್ರೆಗೆ ವಿಶೇಷ ರಿಯಾಯ್ತಿ ಘೋಷಿಸಿದೆ. ಐಆರ್ಸಿಟಿಸಿ ವಿಶೇಷ ರಿಯಾಯ್ತಿ ಘೋಷಿಸಿದ್ದು, ಹಲವು ಅಗತ್ಯ ಸೌಲಭ್ಯಗಳಿರುವ ಟೂರ್ ಪ್ಯಾಕೇಜ್ ಇದಾಗಿದೆ.
ಯಾವ ಸ್ಥಳಗಳಿಗೆ: ಹರಿದ್ವಾರ, ಬಾರ್ಕೊಟ್, ಜಾನಕಿಚಟ್ಟಿ, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ಗುಪ್ತಕಾಶಿ, ಸನ್ಪ್ರಯಾಗ, ಕೇದಾರನಾಥ, ಬದರಿನಾಥ ಕ್ಷೇತ್ರಗಳನ್ನು ಸಂದರ್ಶಿಸಲಾಗುತ್ತದೆ. ನಾಗಪುರ ಮತ್ತು ದೆಹಲಿ ಮಾರ್ಗವಾಗಿ ವಾಯುಯಾನ ಟಿಕೆಟ್ಗಳನ್ನೂ ಈ ಪ್ಯಾಕೇಜ್ ಒಳಗೊಂಡಿರುತ್ತದೆ.
Advertisement
Visit the most revered pilgrim places for Hindus in #India with #IRCTCTourism‘s all-incl. 12D/11N Char Dham Yatra air tour package. From temple visits to holy ceremonies, experience it all on this divine pilgrimage. For #details, visit https://t.co/rmhSHk2pW9.@AmritMahotsav
— IRCTC (@IRCTCofficial) March 25, 2022
ಭಾರತ ಸರ್ಕಾರದ ಆಜಾದಿ ಕ ಅಮೃತ್ ಮಹೋತ್ಸವ್ ಮತ್ತು ದೇಖೋ ಆಪ್ನಾ ದೇಶ್ ಉಪಕ್ರಮಗಳ ಭಾಗವಾಗಿ ಐಆರ್ಸಿಟಿಸಿ ಈ ಯೋಜನೆಯನ್ನು ಪರಚಯಿಸಿದೆ. ಈ ವರ್ಷ ಕೊರೊನಾ ಪ್ರಕರಣಗಳು ಕಡಿಮೆಯಾಗಿರುವುದರಿಂದ ಸಾಕಷ್ಟು ಜನರು ಈ ಸೌಲಭ್ಯ ಪಡೆದುಕೊಳ್ಳಬಹುದು. ಮೇ 14ರಿಂದ ಆರಂಭವಾಗಿ ಮೇ 25ಕ್ಕೆ ಮುಕ್ತಾಯವಾಗಲಿರುವ ಈ ಯಾತ್ರೆಯು 12 ಹಗಲು ಮತ್ತು 11 ರಾತ್ರಿಗಳ ಪ್ರವಾಸ ಪ್ಯಾಕೇಜ್ ಹೊಂದಿರುತ್ತದೆ. ಇದನ್ನೂ ಓದಿ: ಕ್ರಿಶ್ಚಿಯನ್ ವರ, ಮುಸ್ಲಿಂ ವಧು ಹಿಂದೂ ಸಂಪ್ರದಾಯದಂತೆ ಮದುವೆ
Advertisement
ಪ್ರಯಾಣ ದರ: ಒಬ್ಬರಿಗೆ 77,600 ಮತ್ತು ಇಬ್ಬರಿಗೆ 61,400 ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವು ಪ್ರಯಾಣದರದೊಂದಿಗೆ ವಸತಿ, ಊಟೋಪಚಾರ ವೆಚ್ಚಗಳನ್ನೂ ಒಳಗೊಂದಿದೆ. ಹೆಚ್ಚಿನ ಮಾಹಿತಿಗೆ www.irctctourism.com ಜಾಲತಾಣ ನೋಡಿ.
Advertisement