ಕೇದಾರನಾಥ ದೇವಾಲಯವನ್ನು ಈ ಬಾರಿ 108 ಕ್ವಿಂಟಾಲ್ ವಿವಿಧ ರೀತಿಯ ಹೂಗಳಿಂದ ಅಲಂಕರಿಸಲಾಗಿದೆ. ನೇಪಾಳ, ಥೈಲ್ಯಾಂಡ್ ಮತ್ತು ಶ್ರೀಲಂಕಾದಿಂದ ತರಲಾಗಿದ್ದ ಗುಲಾಬಿ, ಮಲ್ಲಿಗೆ ಸೇರಿದಂತೆ 54 ಬಗೆಯ ಹೂಗಳಿಂದ ದೇವಾಲಯದ ಶೃಂಗರಿಸಲಾಗಿದೆ.ಇದನ್ನೂ ಓದಿ: ಹಿಂದೂ ಕಾರ್ಯಕರ್ತನ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮೂವರಿಗೆ ಚಾಕು ಇರಿತ
ಗುರುವಾರ ಸಂಜೆ ಬಾಬಾ ಕೇದಾರನಾಥನ ಪಂಚಮುಖಿ ಡೋಲಿಯು ಕೇದಾರನಾಥ ಧಾಮಕ್ಕೆ ಆಗಮಿಸಿತು. ಡೋಲಿಯ ಆಗಮನದ ಸಂದರ್ಭದಲ್ಲಿ ಭಕ್ತರು ಭಕ್ತಿಭಾವದಿಂದ ಸ್ವಾಗತಿಸಿದರು. ಬಾಗಿಲು ತೆರೆಯುವ ಸಮಾರಂಭದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಭಾಗವಹಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೊದಲ ಪೂಜೆ ಸಲ್ಲಿಸಲಾಯಿತು.
ಬಾಗಿಲು ತೆರೆಯುತ್ತಿದ್ದಂತೆ ಭಕ್ತರು ತಮ್ಮ ಶ್ರದ್ಧೆಯನ್ನು ಜಯಕಾರಗಳ ಮೂಲಕ ವ್ಯಕ್ತಪಡಿಸಿದರು. ದೇವಾಲಯದ ಸುತ್ತಲೂ ಭಕ್ತರ ದಂಡು ಜಮಾಯಿಸಿತು. ಕೇದಾರನಾಥ ಧಾಮದಲ್ಲಿ ಈ ಬಾರಿ ಭಕ್ತರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಭದ್ರತೆ, ಆರೋಗ್ಯ ಸೇವೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೇದಾರನಾಥ ಯಾತ್ರೆಗಾಗಿ ಸರ್ಕಾರವು ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿದೆ. ಈ ಬಾರಿ ಕೇದಾರನಾಥ ಮತ್ತು ಯಮುನೋತ್ರಿ ಮಾರ್ಗದಲ್ಲಿ 4,300ಕ್ಕೂ ಹೆಚ್ಚು ಕುದುರೆ-ಗಾಡಿ ಸಂಚಾಲಕರು ಸೇವೆಯನ್ನು ಒದಗಿಸಲಿದ್ದಾರೆ. ಇದರ ಜೊತೆಗೆ, ಯಾತ್ರಿಗಳ ಸುರಕ್ಷತೆಗಾಗಿ ಪ್ಯಾರಾ ಮಿಲಿಟರಿ ಫೋರ್ಸ್‌ನ ತುಕಡಿಯನ್ನು ಮೊದಲ ಬಾರಿಗೆ ನಿಯೋಜಿಸಲಾಗಿದೆ.ಇದನ್ನೂ ಓದಿ: ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಸೆಟ್ಟೇರಿತು ಶಿವಣ್ಣನ ‘A for ಆನಂದ್’ ಸಿನಿಮಾ