ವಾಷಿಂಗ್ಟನ್: ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಫ್ಲಿಪ್ ಫ್ಲಾಪ್ ಚಪ್ಪಲಿಗಳನ್ನು ಹಾಕುತ್ತಿದ್ದ ಮುನಿಸಿಪಲ್ ಸಿಬ್ಬಂದಿ ಎಡವಿ ಬೀಳುತ್ತಿದ್ದರು. ಹೀಗಾಗಿ ಈ ತರಹದ ಚಪ್ಪಲಿಗಳನ್ನು ಅಮೆರಿಕಾದ ಕನಿಕ್ಟಿಕುಟ್ ನಗರದಲ್ಲಿ ಸಿಬ್ಬಂದಿ ಹಾಕುವಂತಿಲ್ಲ ಎಂದು ಮುನಿಸಿಪಲ್ ನಿಷೇಧ ಹೇರಿದೆ.
ಹೌದು, ವಿಚಿತ್ರ ಏನಿಸಿದರು ಇದು ಸತ್ಯ. ಪದೇ ಪದೇ ಕೆಲಸದ ವೇಳೆ ಸಿಬ್ಬಂದಿ ಎಡವಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಕನಿಕ್ಟಿಕುಟ್ ಮುನಿಸಿಪಲ್ ಆಡಳಿತ ಮಂಡಳಿ ಸಿಬ್ಬಂದಿಗಳ ಹಿತದೃಷ್ಟಿಯಿಂದ ಫ್ಲಿಪ್ ಫ್ಲಾಪ್ ಚಪ್ಪಲಿಗಳನ್ನು ನಿಷೇಧಿಸಿದೆ. ಆದ್ದರಿಂದ ಜೂನ್‍ನಿಂದ ಈ ನಿಯಮ ಜಾರಿಗೆ ಬಂದಿದ್ದು, ಇನ್ನು ಮುಂದೆ ಸಿಬ್ಬಂದಿ ಈ ತರಹದ ಚಪ್ಪಲಿ ಹಾಕುವಂತಿಲ್ಲ ಎಂದು ಆದೇಶಿಸಿದೆ.
Advertisement
Advertisement
ಆದರೆ ಈ ನಿಯಮದಲ್ಲೂ ಕೆಲ ಸಿಬ್ಬಂದಿಗೆ ವಿನಾಯಿತಿ ನೀಡಲಾಗಿದ್ದು, ಪ್ರಮುಖವಾಗಿ ಈಜುಕೊಳದಲ್ಲಿ ಅಥವಾ ಅದರ ಬಳಿ ಕೆಲಸ ಮಾಡುವ ಸಿಬ್ಬಂದಿ ಫ್ಲಿಪ್ ಫ್ಲಾಪ್ ಚಪ್ಪಲಿಗಳನ್ನು ಧರಿಸಬಹುದಾಗಿದೆ. ಮುನಿಸಿಪಲ್‍ನ ಈ ಹೊಸ ನಿಯಮವನ್ನು ಅನೇಕ ಸಿಬ್ಬಂದಿ ಸ್ವಾಗತಿಸಿದ್ದಾರೆ. ನಮಗಾಗಿ ಆಡಳಿಯ ಮಂಡಳಿ ಯೋಚಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ಹಿಂದೆ ಜಪಾನ್‍ನ ಕಂಪನಿಯೊಂದರಲ್ಲಿ ಸಿಬ್ಬಂದಿ ಹೈ ಹೀಲ್ಸ್ ಧರಿಸುವಂತಿಲ್ಲ ಎಂದು ನಿಯಮ ತರಲಾಗಿತ್ತು. ಇದಕ್ಕೆ ಕುಟೂ ಅಭಿಯಾನ ಎಂದು ಹೆಸರಿಟ್ಟು ನಿಯಮವನ್ನು ಕಾರ್ಯರೂಪಕ್ಕೆ ತರಲಾಗಿತ್ತು.