ಶ್ರೀನಗರ: ಸಂವಿಧಾನದ ಆರ್ಟಿಕಲ್ 370 (Articles 370) ಮರುಸ್ಥಾಪನೆ ವಿಚಾರವಾಗಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ (Jammu Kashmir Assembly) ಆಡಳಿತಾರೂಢ ನ್ಯಾಷನಲ್ ಕಾನ್ಪರೆನ್ಸ್ ಹಾಗೂ ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ 3ನೇ ದಿನವೂ ಗದ್ದಲ ಮುಂದುವರಿದಿದೆ.
ಮೂರನೇ ದಿನವಾದ ಶುಕ್ರವಾರವೂ ಗದ್ದಲ ಮುಂದುವರಿದಿದ್ದು, ಬಿಜೆಪಿ ಶಾಸಕರು (BJP MLAs) ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಭಟನೆ ಆರಂಭಿಸಿದರು. ಇದನ್ನೂ ಓದಿ: 370ನೇ ವಿಧಿ ಜಾರಿ ನಿರ್ಣಯ ಬೆಂಬಲಿಸಿ ಬ್ಯಾನರ್ ಪ್ರದರ್ಶನ- ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ತಾರಕಕ್ಕೇರಿದ ಗದ್ದಲ
Advertisement
Advertisement
ಕಣಿವೆಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ಪುನರ್ ಸ್ಥಾಪಿಸುವಂತೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರಗೊಂಡಿದ್ದ ನಿರ್ಣಯ ಹಿಂದಕ್ಕೆ ಪಡೆಯಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ವೇಳೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರನ್ನು ಸದನದದಿಂದ ಹೊರ ಹಾಕುವಂತೆ ಸ್ಪೀಕರ್ ಅಬ್ದುಲ್ ರಹೀಂ ರಾಥರ್ ಆದೇಶ ನೀಡುತ್ತಿದ್ದತೆ ವಿಧಾನಸಭೆ ರಣರಂಗವಾಯಿತು. ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ
Advertisement
Advertisement
ಸದನದಿಂದ ಹೊರಹಾಕಲು ಯತ್ನಿಸಿದ ಮಾರ್ಷಲ್ಗಳ ಜೊತೆ ಶಾಸಕರು ಸಂಘರ್ಷಕ್ಕಿಳಿದರು. ಈ ವೇಳೆ ತಳ್ಳಾಟ, ನೂಕಾಟವೂ ಉಂಟಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ಮುಂದೂಡಿದರು.
ಇದಕ್ಕೂ ಮುನ್ನ ಗುರುವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ 370ನೇ ವಿಧಿ ಕುರಿತು ಚರ್ಚೆ ಆರಂಭವಾಯಿತು. ನಿರ್ಣಯದ ಮೇಲೆ ಬಿಜೆಪಿ ಶಾಸಕ ಹಾಗೂ ಪ್ರತಿಪಕ್ಷ ನಾಯಕ ಸುನಿಲ್ ಶರ್ಮಾ ಮಾತನಾಡುತ್ತಿದ್ದ ವೇಳೆ ಅವಾಮಿ ಇತ್ತೆಹಾದ್ ಪಕ್ಷದ ಶಾಸಕ ಲಂಗೈಟ್ ಶೇಖ್ ಖುರ್ಷೀದ್, ಸಂವಿಧಾನದ 370ನೇ ವಿಧಿ ಹಾಗೂ 35ಎ ಕಲಂ ಮರು ಸ್ಥಾಪಿಸುವಂತೆ ಆಗ್ರಹಿಸಿ ಬ್ಯಾನರ್ ಪ್ರದರ್ಶಿಸಿದರು.
ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದರಲ್ಲದೆ, ಶಾಸಕ ಪ್ರದರ್ಶಿಸಿದ ಬ್ಯಾನರ್ ಕಸಿಯಲು ಮುಂದಾದರು. ಈ ವೇಳೆ ಕೋಲಾಹಲ ಉಂಟಾಯಿತು. ಪರಿಸ್ಥಿತಿ ನಿಭಾಯಿಸಲು ಕಲಾಪವನ್ನು ಸ್ಪೀಕರ್ 15 ನಿಮಿಷ ಮುಂದೂಡಿದರು. ಕಲಾಪ ಪುನಾರಂಭಗೊಂಡ ಬಳಿಕ ತಮ್ಮ ಸ್ಥಾನಗಳಿಗೆ ತೆರಳುವಂತೆ ಸದಸ್ಯರಿಗೆ ಸ್ಪೀಕರ್ ಸೂಚನೆ ನೀಡಿದರು. ಸಭಾಧ್ಯಕ್ಷರ ಮಾತು ಆಲಿಸದ ಬಿಜೆಪಿ ಸದಸ್ಯರು ಹೋರಾಟ ಮುಂದುವರಿಸಿದರು. ʻನೀವು ಸದನದ ನಿಯಮಗಳನ್ನು ಮೀರುತ್ತಿದ್ದೀರಿ, ಕೆಲ ಸದಸ್ಯರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಹೀಗೆ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆʼ ಎಂದು ಎಚ್ಚರಿಸಿದ ಸ್ಪೀಕರ್ ಅಬ್ದುಲ್ ರಹೀಂ ರಾಥರ್, ಶುಕ್ರವಾರಕ್ಕೆ ಕಲಾಪ ಮುಂದೂಡಿದ್ದರು.