ಮೈಸೂರು: ಸೂರ್ಯಯಾನ (Sun Mission) ಯಶಸ್ಸಿಗಾಗಿ ಆದಿತ್ಯ ಹೃದಯ ಸ್ತೋತ್ರ ಪಠಿಸಿ ಪ್ರಾರ್ಥಿಸಲು ಪೇಜಾವರ ಶ್ರೀ (Pejawara Sri) ಕರೆ ನೀಡಿದ್ದಾರೆ.
ಈಗಾಗಲೇ ನಮ್ಮ ಇಸ್ರೋ ಸಂಸ್ಥೆ ಚಂದ್ರಯಾನ-3 (Chandrayaan-3) ತಲುಪುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ಇಸ್ರೋ ಸೂರ್ಯನೆಡೆಗೆ ತಮ್ಮ ಪ್ರಥಮ ಯಾನವನ್ನು ನಡೆಸುತ್ತಿದೆ. ಚಂದ್ರಯಾನದಂತೆ ಇದೂ ಯಶಸ್ವಿಯಾಗಲಿ ಎಂದು ಹೇಳಿದ್ದಾರೆ.
Advertisement
Advertisement
ಆ ನಿಮಿತ್ತ ಶುಕ್ರವಾರದಂದು ಎಲ್ಲರೂ ಅಗಸ್ತಮುನಿ ವಿರಚಿತ ಆದಿತ್ಯ ಹೃದಯ ಸ್ತೋತ್ರ ಪಠಿಸಿ ಪ್ರಾರ್ಥಿಸಿ ಎಂದು ಮೈಸೂರಿನಲ್ಲಿ ಶ್ರೀ ಪೇಜಾವರ ಶ್ರೀಗಳು ಜನರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಈಗ ಇಸ್ರೋದಿಂದ ಸೂರ್ಯನ ಅಧ್ಯಯನ – ಆದಿತ್ಯ ಉಡಾವಣೆಗೆ ಮುಹೂರ್ತ ಫಿಕ್ಸ್
Advertisement
Advertisement
ಯಶಸ್ವಿ ಚಂದ್ರಯಾನದ (Chandrayana-3) ಬಳಿಕ ಸೂರ್ಯನ (Sun) ಅಧ್ಯಯನಕ್ಕೆ ಇಸ್ರೋ ಮುಂದಾಗಿದ್ದು, ಸೆಪ್ಟೆಂಬರ್ 2 ರಂದು ಬೆಳಗ್ಗೆ11:50 ಕ್ಕೆ ಆದಿತ್ಯ L1 (Aditya L1) ಅನ್ನು ಉಡಾವಣೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ISRO) ಮಾಹಿತಿ ಹಂಚಿಕೊಂಡಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆಯಾಗಲಿದೆ ಎಂದು ಹೇಳಿದೆ.
Web Stories