ಚಂಡಿಗಢ: ನವಜೋತ್ ಸಿಂಗ್ ಸಿಧು ಪರವಾಗಿ ಮಗಳು ರಬಿಯಾ ಪ್ರಚಾರ ಮಾಡುತ್ತಿದ್ದಾರೆ. ತಂದೆ ಚುನಾವಣೆಯಲ್ಲಿ ಗೆಲ್ಲುವವರೆಗೂ ಮದುವೆ ಆಗಲ್ಲ ಎಂದ ನವಜೋತ್ ಸಿಂಗ್ ಸಿಧು ಮಗಳು ರುಬಿಯಾ ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಪ್ರಚಾರ ಸಮಯದಲ್ಲಿ ಮಾತನಾಡಿದ ರುಬಿಯಾ, ತಂದೆ ಹಣದ ಕೊರತೆಯಿಂದ ಮಗಳ ಮದುವೆ ಆಗುವುದಿಲ್ಲ ಎಂದು ಭಾವನಾತ್ಮಕವಾಗಿ ಹೇಳಿದ್ದರು. ನಾನು ಕೂಡ ತಂದೆಯ ಗೆಲುವಿನ ಬಳಿಕವೇ ಮದುವೆಯಾಗುತ್ತೇನೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿರುವ ಚರಂಜಿತ್ ಸಿಂಗ್ ಚನ್ನಿ ನಿಜವಾಗಿಯೂ ಬಡವರ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಒಂದು ವೇಳೆ ಆ ರೀತಿ ಮಾಡಿದರೆ ಅವರ ಖಾತೆಯಲ್ಲಿ 133 ಕೋಟಿಗೂ ಅಧಿಕ ಹಣ ಇರುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
Advertisement
#WATCH | Punjab PCC chief Navjot S Sidhu’s daughter, Rabia Kaur Sidhu speaks on Charanjit Channi being made CM face for #PunjabElections2022
“Maybe they (high command) had some compulsion. But you can’t stop an honest man for long. Dishonest man has to eventually stop,” she says pic.twitter.com/DzzsauNMJB
— ANI (@ANI) February 11, 2022
Advertisement
ಪಕ್ಷ ಕೆಲವೊಮ್ಮೆ ಕಟ್ಟುಪಾಡಿಗೆ ಒಳಗಾಗಿ ಬಿಡುತ್ತದೆ. ಪ್ರಾಮಾಣಿಕ ವ್ಯಕ್ತಿಯನ್ನು ದೀರ್ಘಕಾಲದವರೆಗೆ ದೂರವಿಡಲು ಸಾಧ್ಯವಿಲ್ಲ. ಕಳೆದ 14 ವರ್ಷಗಳಿಂದ ಪಂಜಾಬ್‍ಗಾಗಿ ತನ್ನ ತಂಧೆ ಕೆಲಸ ಮಾಡುತ್ತಿದ್ದಾರೆ, ಅವರು ರಾಜ್ಯಕ್ಕೆ ಹೊಸ ಮಾದರಿಯನ್ನು ರಚಿಸುತ್ತಿದ್ದು, ಅವರನ್ನು ಗೌರವಿಸಬೇಕು. ತಮ್ಮ ತಂದೆಯನ್ನು ಇತರ ರಾಜಕೀಯ ಪಕ್ಷದ ನಾಯಕರ ಜೊತೆ ಹೋಲಿಸಲು ಸಾಧ್ಯವೇ ಇಲ್ಲ ಎನ್ನುವ ಮೂಲಕ ಚನ್ನಿ ಅವರ ವಿರುದ್ಧವೂ ಪರೋಕ್ಷವಾಗಿ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?
Advertisement
Advertisement
ಪಂಜಾಬ್ ಕೆಟ್ಟ ಪರಿಸ್ಥಿತಿಯಲ್ಲಿದ್ದು, ರಾಜ್ಯವನ್ನು ಉಳಿಸುವ ಏಕೈಕ ವ್ಯಕ್ತಿಯೆಂದರೆ ಅದು ನನ್ನ ತಂದೆ ನವಜೋತ್ ಸಿಂಗ್ ಸಿಧು ಆಗಿದ್ದಾರೆ. ನನ್ನ ತಂದೆಯನ್ನ ಹಿಂದಕ್ಕೆ ತಳ್ಳಲು ರಾಜಕೀಯ ವಿರೋಧಿಗಳು ಮತ್ತು ಇತರರು ಪ್ರಯತ್ನಿಸುತ್ತಿದ್ದಾರೆ. ಅವರು ಇಲ್ಲಿನ ಡ್ರಗ್ ಮಾಫಿಯಾ ಮತ್ತು ಮರಳು ಮಾಫಿಯಾ ಕೊನೆಗಣಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿನ ಇಂದಿನ ಪರಿಸ್ಥಿತಿಯಿಂದ ಸಿಧುಗೆ ನೋವಾಗಿದೆ. ತಮ್ಮ ತಂದೆ ಈ ಚುನಾವಣೆಯಲ್ಲಿ ಗೆಲ್ಲುವವರೆಗೂ ತಾನು ಮದುವೆ ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಬೇಕು, ಹಿಜಬ್ ಅಲ್ಲ : ಬಿಸ್ವಾ ಶರ್ಮಾ
ತಂದೆಗೆ ಪ್ರತಿಸ್ಪರ್ಧಿಯಾಗಿರುವ ಅಮೃತಸರದಿಂದ ಸ್ಪರ್ಧಿಸುತ್ತಿರುವ ಎಸ್‍ಎಡಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧವೂ ವಾಗ್ದಾಳಿ ನಡೆಸಿದ ರಬಿಯಾ ಕ್ಷೇತ್ರದ ಜನರು ಈಗ ನಿರ್ಧಾರ ನಡೆಸಬೇಕು. ಒಂದು ಕಡೆ ಡ್ರಗ್ಸ್ ಮತ್ತು ಇನ್ನೊಂದು ಬದಿಯಲ್ಲಿ ಅಭಿವೃದ್ಧಿ, ಉದ್ಯೋಗಗಳು ಮತ್ತು ಶಿಕ್ಷಣವಿದೆ. ಅವರಿಗೆ ಬೇಕಾದನ್ನು ಆಯ್ಕೆ ಮಾಡುವ ಹಕ್ಕು ಅವರಿಗೆ ಇದೆ ಎಂದು ಕಿಡಿಕಾರಿದ್ದಾರೆ.