ಬೆಳಗಾವಿ: ನಮ್ಮ ಅಕ್ಕ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಪಾರ್ಟ್ ಟೈಮ್ ಪ್ಲೇಯರ್ ಅಲ್ಲ, ಫುಲ್ ಟೈಮ್ ಪ್ಲೇಯರ್ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ (Ramesh Jarkiholi) ಎಂಎಲ್‍ಸಿ ಚನ್ನರಾಜ ಹಟ್ಟಿಹೊಳಿ (Channaraj Hattiholi) ಟಾಂಗ್ ನೀಡಿದ್ದಾರೆ.
Advertisement
ಬೆಳಗಾವಿ (Belagavi) ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಚುನಾವಣೆ ತಯಾರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಅಕ್ಕ ಹೋರಾಟದಿಂದ ರಾಜಕೀಯಕ್ಕೆ ಬಂದವರು. ನಿತ್ಯ ಜನರ ಕಷ್ಟಗಳಿಗೆ ಸ್ಪಂದನೆ ಮಾಡುವ ಕೆಲಸಗಾರರು. ರಾಜಕೀಯದಲ್ಲಿ ಪಾರ್ಟ್ ಟೈಮ್ ಪ್ಲೇಯರ್ಸ್ ಇರುತ್ತಾರೆ. ಫುಲ್ ಟೈಮ್ ಪ್ಲೇಯರ್ಸ್ ಸಹ ಇರುತ್ತಾರೆ. ಇವರು ಫುಲ್ ಟೈಮ್ ಪ್ಲೇಯರ್, ದಿನವೂ ಜನರಿಗೆ ಸಿಗ್ತಾರೆ, ಭೇಟಿಯಾಗ್ತಾರೆ, ಕೆಲಸ ಮಾಡ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅಂತಾ ಅಷ್ಟೇ ಅಲ್ಲ ರಾಜ್ಯದಲ್ಲಿ ಕೆಲಸಗಾರರಿಗೆ ಯಾವತ್ತೂ ಸೋಲಿಲ್ಲ. ಅವರ ಜೊತೆ ಜನ ಯಾವತ್ತೂ ಇರುತ್ತಾರೆ. ಈಗ ಪಾರ್ಟ್ ಟೈಮ್ ಪ್ಲೇಯರ್ಸ್‍ದ್ದೆ ಪ್ರಾಬ್ಲಮ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈದಾನ ಖಾಲಿ ಇದೆ, ನಾವೂ ತಯಾರಿದ್ದೇವೆ ನೀವು ಅಖಾಡಕ್ಕೆ ಧುಮುಕಿ – ಪರೋಕ್ಷವಾಗಿ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಆಹ್ವಾನ
Advertisement
Advertisement
ಗ್ರಾಮೀಣ ಕ್ಷೇತ್ರಕ್ಕೆ ಪಾರ್ಟ್ ಟೈಮ್ ಪ್ಲೇಯರ್ಸ್ ಬಂದು ಹೋಗೋದು ಎಫೆಕ್ಟ್ ಆಗುತ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನಾವು ಈ ಸಂದರ್ಭದಲ್ಲಿ ಏನೂ ಹೇಳಲ್ಲ. ಒಂದು ಪಕ್ಷದ ಕೆಲಸ ಮಾಡೋದು ಬೇರೆ. ನಮ್ಮ ಪಕ್ಷದ ಕೆಲಸ ನಾವು ಮಾಡ್ತಿದ್ದೇವೆ. ಅವರು ಅವರ ಪಕ್ಷದ ಕೆಲಸ ಮಾಡ್ತಿದ್ದಾರೆ. ಅದಕ್ಕೆ ಅವರ ಪಕ್ಷದ ನಾಯಕರು ಚಿಂತನೆ ಮಾಡಬೇಕು. ನಾವು ನಮ್ಮ ಪಕ್ಷದ ಕೆಲಸ ಮಾಡ್ತಿದ್ದೇವೆ. ರಾಜಕೀಯದಲ್ಲಿ ಯಾವತ್ತೂ ಶಿಸ್ತಿನಿಂದ ರಾಜಕೀಯ ಮಾಡಬೇಕು. ಅವರ ಶಿಸ್ತಿನಿಂದ ಅವರು ರಾಜಕೀಯ ಮಾಡಲಿ, ನಮ್ಮ ಶಿಸ್ತಿನಿಂದ ನಾವು ರಾಜಕೀಯ ಮಾಡುತ್ತೇವೆ. ಆ ಶಿಸ್ತು ಏಲ್ಲಾದರೂ ಏನಾದರೂ ಆದಾಗ ನಾವು ಉತ್ತರ ಕೊಡುತ್ತೇವೆ. ಇವತ್ತಿನವರೆಗೂ ಆ ಸಂದರ್ಭ ಏನೂ ಇಲ್ಲ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಚನ್ನರಾಜ ಹಟ್ಟಿಹೊಳಿ ಠಕ್ಕರ್ ನೀಡಿದ್ದಾರೆ. ಇದನ್ನೂ ಓದಿ: ಚಪ್ಪಲಿ ಹಾಕಿಕೊಂಡು ದೈವದ ದೀವಟಿಗೆ ನಿಂತ ತೇಜಸ್ವಿ ಸೂರ್ಯ- ಜನ ಆಕ್ರೋಶ