ಬೆಂಗಳೂರು: ಚನ್ನಪಟ್ಟಣದಲ್ಲಿ (Channapatna) ಎದುರಾಳಿಗಳು ಅಷ್ಟೊಂದು ವೀಕ್ ಆಗ್ತಾರೆ ಎಂದು ನಾನು ತಿಳಿದುಕೊಂಡಿರಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣದ ಕಾಂಗ್ರೆಸ್ (Congress) ಕಾರ್ಯಕರ್ತರು ಮುಖಂಡರ ಜೊತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ನನ್ನ ಜನರನ್ನು ಭೇಟಿ ಮಾಡಿದ್ದೇನೆ. ನಾನೇ ಅಭ್ಯರ್ಥಿ ಎಂದು ಕೆಲಸ ಮಾಡುವಂತೆ ಹೇಳಿದ್ದೇನೆ. ವಿರೋಧ ಪಕ್ಷಗಳು ರಾತ್ರಿ ಎಲ್ಲಾ ಸಭೆ ನಡೆಸಿದ್ದಾರೆ. ಜೆಡಿಎಸ್‌ನವರು ಸೀಟು ಬಿಟ್ಟು ಕೊಡುತ್ತಾರೆ ಎಂದು ಯಾರೋ ಫೋನ್ ಮಾಡಿದ್ದರು. ಎದುರಾಳಿಗಳು ಅಷ್ಟೊಂದು ವೀಕ್ ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
Advertisement
ಏನೋ ಬಿಟ್ಟು ಕೊಡ್ತಾ ಇದ್ದಾರೆ ಕ್ಷೇತ್ರ ನಾ ಎಂಬ ಮಾಹಿತಿ ಬಂತು. ಫೈಟ್ ಮಾಡ್ತಾರೆ ಎಂದುಕೊಂಡಿದ್ದೆ. ನಾನು ನಮ್ಮ ಕಾರ್ಯಕರ್ತರ ಮುಖಂಡರ ಅಭಿಪ್ರಾಯವನ್ನು ಕೇಳಿದ್ದೇನೆ. ಯಾರೇ ಅಭ್ಯರ್ಥಿಯಾದರು, ಡಿ.ಕೆ ಶಿವಕುಮಾರ್ ಅಭ್ಯರ್ಥಿ ಎಂದು ಕೆಲಸ ಮಾಡಬೇಕು ಎಂದು ಹೇಳಿದ್ದೇವೆ. ನಮ್ಮ ಕಾರ್ಯಕರ್ತರ ಜೊತೆಗೆ ನಾನು ಮಾತನಾಡುತ್ತಿದ್ದೇನೆ. ನಾನು ಕ್ಷೇತ್ರಕ್ಕೆ ಹೋಗಲೇಬೇಕು, ಸೇವೆ ಮಾಡುವ ಸಲುವಾಗಿ ಹೋಗ್ತಿದ್ದೆ ಎಂದಿದ್ದಾರೆ.
Advertisement
Advertisement
ಯುದ್ಧಕ್ಕೂ ಮುನ್ನ ಶಸ್ತ್ರ ತ್ಯಾಗನಾ ಎಂಬ ಪತ್ರಕರ್ತರ ಪ್ರಶ್ನೆಗೆ, ಇದನ್ನು ನೀವು ಅವರನ್ನೇ ಕೇಳಬೇಕು. ಕಾರ್ಯಕರ್ತರು ಎಲ್ಲರ ಜೊತೆಗೂ ಮಾತನಾಡಿದ್ದೇನೆ. ರಾಜಕಾರಣದಲ್ಲಿ ಹಲವು ಸಾಧ್ಯತೆಗಳು ಇರುತ್ತವೆ. ಯಾರು ಬೇಕಾದರೂ ಅಭ್ಯರ್ಥಿ ಆಗಬಹುದು. ಕಾರ್ಯಕರ್ತರನ್ನು ನಿಲ್ಲಿಸಿದರೂ ಕೂಡ ತಯಾರಿರಬೇಕು. ಡಿ.ಕೆ ಸುರೇಶ್ ಅವರ ಹೆಸರು ಕೂಡ ಹೇಳಿದ್ದಾರೆ. ಅವರಿಗೂ ಜವಾಬ್ದಾರಿ ಇದೆ ಎಂದಿದ್ದಾರೆ.
Advertisement
ಯಾರಿಗೂ ನಾವು ಮನವೊಲಿಸುವುದಿಲ್ಲ, ಇಂಥವರು ಅಭ್ಯರ್ಥಿ ಎಂದು ಹೇಳುತ್ತೇವೆ. ಸುರೇಶ್ ಹೇಳಲಿ ನಾನು ಹೇಳಲಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಸುರೇಶ್ ಅವರು ಚುನಾವಣೆ ನಿಲ್ಲುವ ಮನಸ್ಥಿತಿಯಲ್ಲಿದ್ದಾರಾ ಎಂಬ ಪ್ರಶ್ನೆಗೆ, ಇಲ್ಲ ಅವರದ್ದು ಏನೋ ಲೆಕ್ಕಾಚಾರ ಇರುತ್ತೆ ಎಂದಿದ್ದಾರೆ.