ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಕದನ ಕುತೂಹಲಕ್ಕೆ ಇಂದು (ಶನಿವಾರ) ಅಂತಿಮ ತೆರೆ ಬೀಳಲಿದೆ. ಕಳೆದ ಒಂದು ತಿಂಗಳಿನಿಂದ ಭಾರೀ ಸದ್ದು ಮಾಡಿದ್ದ.. ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ.. ಮಾತಿನ ತಾಪು.. ವಿವಾದಾತ್ಮಕ ಹೇಳಿಕೆಗಳಿಗೆ ಸಾಕ್ಷಿಯಾಗಿದ್ದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.
ಬೆಳಗ್ಗೆ 11 ಗಂಟೆಗೆಲ್ಲಾ ಗೆಲ್ಲೋದು ಯಾರು ಅನ್ನೋ ಬಗ್ಗೆ ಒಂದು ಪಿಚ್ಚರ್ ಸಿಗಲಿದೆ. ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚನ್ನಪಟ್ಟಣ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಹಾವೇರಿಯ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.
Advertisement
ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂಡೂರು ಕ್ಷೇತ್ರದ ಮತ ಎಣಿಕೆಗೆ ತಯಾರಿಗಳು ನಡೆದಿವೆ. ಮುಂಜಾಗ್ರತಾ ಕ್ರಮವಾಗಿ ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿಭದ್ರತೆ ಕಲ್ಪಿಸಲಾಗಿದೆ. ಮತಗಟ್ಟೆ ಸಮೀಕ್ಷೆಗಳು ಅವರದ್ದು ಅವ್ರಿಗೆ ಎಂದು ಹೇಳ್ತಿದ್ದರೂ, ಇದನ್ನು ನಂಬೋಕೆ ಕಾಂಗ್ರೆಸ್ ಸಿದ್ದವಿಲ್ಲ. ನಮಗೆ ಎಕ್ಸಿಟ್ ಪೋಲ್‌ಗಳ ಬಗ್ಗೆಯೇ ನಂಬಿಕೆ ಇಲ್ಲ. ಮೂರು ಕಡೆಯೂ ನಮ್ದೇ ಗೆಲುವು ಅಂತಿದೆ. ಡಿಸಿಎಂ ಅವ್ರರಂತೂ, ಚನ್ನಪಟ್ಟಣದಲ್ಲಿ ಸೋತ್ರೆ ನಾನೇ ಸೋತಂಗೆ ಅಂತಾ ಹೇಳಿಬಿಟ್ಟಿದ್ದಾರೆ. ಇದೇ ವೇಳೆ, ಕುಮಾರಸ್ವಾಮಿ ಸಹ ಪುತ್ರನ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯೇ 3 ಕ್ಷೇತ್ರ ಗೆಲ್ಲುತ್ತೆ ಎಂದು ಬೊಮ್ಮಾಯಿ ಹೇಳಿದ್ದಾರೆ.
Advertisement
ಚನ್ನಪಟ್ಟಣ ಬೈಎಲೆಕ್ಷನ್ ಪ್ರಮುಖಾಂಶ
* ಉಪಸಮರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ ಗೌಡರ ಕುಟುಂಬ, ಡಿಕೆ ಬ್ರದರ್ಸ್
* ಎನ್‌ಡಿಎ ಟಿಕೆಟ್ ಸಿಗದೇ ಕಡೆ ಕ್ಷಣದಲ್ಲಿ ಕಾಂಗ್ರೆಸ್‌ನಿಂದ ಯೋಗೇಶ್ವರ್ ಸ್ಪರ್ಧೆ
* ಮೂರನೇ ಬಾರಿ ನಿಖಿಲ್ ರಾಜಕೀಯ ಪಣಕ್ಕೆ ಒಡ್ಡಿದ ಜೆಡಿಎಸ್ ಪಕ್ಷ
* ಮೊಮ್ಮಗನ ಪರವಾಗಿ 10 ದಿನ ಕ್ಷೇತ್ರದಲ್ಲಿ ದೇವೇಗೌಡರ ನಿರಂತರ ಪ್ರಚಾರ
* ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಾಗಿ ಪ್ರಚಾರ ಮಾಡಿರೋದು ಫ್ಲಸ್.
* ಯೋಗೇಶ್ವರ್- ನಿಖಿಲ್ ಕುಮಾರಸ್ವಾಮಿ ನಡುವೆ ನೆಕ್ ಟು ನೆಕ್ ಫೈಟ್
* ಜಮೀರ್ ವಿವಾದಾತ್ಮಕ ಮಾತು.. ಫಲಿತಾಂಶದ ಮೇಲೆ ಪರಿಣಾಮ ಸಾಧ್ಯತೆ
ಮಾಹಿತಿ – 2023ರಲ್ಲಿ 85.27% ಮತದಾನ.. ಈಗ 88.80% ಮತದಾನ
Advertisement
ಶಿಗ್ಗಾಂವಿ ಬೈಎಲೆಕ್ಷನ್ ಪ್ರಮುಖಾಂಶ
* ಸಂಸದ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಹೈಕಮಾಂಡ್ ಮಣೆ
* ಸತತ ಆರನೇ ಬಾರಿ ಮುಸ್ಲಿಮ್ ಅಭ್ಯರ್ಥಿ ಕಣಕ್ಕೆ ಇಳಿಸಿದ ಕಾಂಗ್ರೆಸ್
* ಆರಂಭದಲ್ಲಿ ಅಜ್ಜಂಪೀರ್ ಬಂಡಾಯ… ನಂತರ ಯಾಸಿರ್ ಪರ ಪ್ರಚಾರ
* ಮತ ಕಣದಲ್ಲಿ ವಕ್ಫ್ ಅಸ್ತ್ರ ಪ್ರಯೋಗ ಮಾಡಿದ ವಿಪಕ್ಷ ಬಿಜೆಪಿ
* ಉಪ ಸಮರದಲ್ಲಿ ಮತ ಧ್ರುವೀಕರಣಗೊಂಡಿರುವ ಸಾಧ್ಯತೆ
* ಶಿಗ್ಗಾಂವಿಯಲ್ಲಿ ಫೋಟೋ ಫಿನಿಷ್ ಫಲಿತಾಂಶ ಸಾಧ್ಯತೆ
ಮಾಹಿತಿ – 2023ರಲ್ಲಿ 79.65% ಮತದಾನ.. ಈಗ 80.45% ಮತದಾನ
Advertisement
ಸಂಡೂರು ಬೈಎಲೆಕ್ಷನ್ ಪ್ರಮುಖಾಂಶ
* ಸಂಸದ ತುಕಾರಾಂಗೆ ಕೊಟ್ಟ ಮಾತಿನಂತೆ ಪತ್ನಿಗೆ ಕಾಂಗ್ರೆಸ್ ಟಿಕೆಟ್
* ಹೊಸ ಮುಖ ಬಂಗಾರು ಹನುಮಂತುಗೆ ಟಿಕೆಟ್ ಕೊಟ್ಟಿರುವ ಬಿಜೆಪಿ
* ಮೊದಲ ಬಾರಿಗೆ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿ ಕಮಲ
* ಮಾಜಿ ಮಂತ್ರಿ ಜನಾರ್ದನ ರೆಡ್ಡಿಗೆ ಚುನಾವಣೆ ಪ್ರಚಾರದ ಹೊಣೆಗಾರಿಕೆ
* ಆರಂಭದಲ್ಲಿ ಶ್ರೀರಾಮುಲು ಅಸಹಕಾರ ಆರೋಪ.. ನಂತರ ಒಗ್ಗಟ್ಟು
* ಕ್ಷೇತ್ರದಲ್ಲಿ ಮೂರು ದಿನ ಪ್ರಚಾರ ನಡೆಸಿದ್ದ ಸಿಎಂ ಸಿದ್ದರಾಮಯ್ಯ
* ಅನ್ನಪೂರ್ಣ, ಬಂಗಾರು.. ಯಾರೇ ಗೆದ್ರೂ.. ಕಡಿಮೆ ಅಂತರದ ಗೆಲುವು
ಮಾಹಿತಿ – 2023ರಲ್ಲಿ 77.34% ಮತದಾನ.. ಈಗ 76.02% ಮತದಾನ