ಬೆಂಗಳೂರು: ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ. ಅವರಿಗೆ ಯಾರು ಬೇಕೋ ಅವರ ಹೆಸರು ಘೋಷಣೆ ಮಾಡ್ತಾರೆ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಧವಳಗಿರಿ ನಿವಾಸದ ಬಳಿ ಮಾತನಾಡಿದ ಬಿಎಸ್ವೈ, ಚನ್ನಪಟ್ಟಣದಲ್ಲಿ ಜೆಡಿಎಸ್ನವರು ಯಾರಿಗೆ ಬೇಕೋ ಘೋಷಣೆ ಮಾಡಿಕೊಳ್ತಾರೆ. ಈಗಾಗಲೇ ಅಮಿತ್ ಶಾ ಅವರೂ ಚನ್ನಪಟ್ಟಣದಲ್ಲಿ ಜೆಡಿಎಸ್ನವ್ರು ಘೋಷಣೆ ಮಾಡ್ತಾರೆ ಅಂದಿದ್ದಾರೆ. ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ, ಅವರಿಗೆ ಯಾರು ಬೇಕೋ ಅವರ ಹೆಸರು ಘೋಷಣೆ ಮಾಡ್ತಾರೆ ಎಂದು ಹೇಳಿದರು.
Advertisement
ಬಿಜೆಪಿಯಿಂದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಲಾಗಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ನವ್ರು ಅನೌನ್ಸ್ ಮಾಡಿಕೊಳ್ಳಬಹುದು ಅಂತಾ ಅಮಿತ್ ಶಾ ಹೇಳಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲಿ ಜೆಡಿಎಸ್ನವರೇ ಘೋಷಣೆ ಮಾಡ್ತಾರೆ. ಎರಡೂ ಪಕ್ಷಗಳೂ ಸೇರಿ ಮೂರೂ ಕ್ಷೇತ್ರ ಗೆಲ್ಲೋದಿಕ್ಕೆ ನಿರ್ಧಾರ ಆಗಿದೆ ಎಂದು ಸ್ಪಷ್ಟಪಡಿಸಿದರು.
Advertisement
ಸಿ.ಪಿ.ಯೋಗೇಶ್ವರ್ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡ್ತಾರೆ. ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತೋ ಅದರಂತೆ ಆಗಲಿದೆ. ಜೆಡಿಎಸ್ ಚಿನ್ಹೆಯಡಿ ಬಿಜೆಪಿಯವರು ನಿಲ್ಲುವ ಯೋಚನೆ ಇಲ್ಲ ಎಂದರು.