– ಒಕ್ಕಲಿಗರ ಕದನದಲ್ಲಿ ಬಿಜೆಪಿ ನಾಯಕರ ಎಚ್ಚರಿಕೆ ನಡೆ!
– ಚನ್ನಪಟ್ಟಣ ಬಗ್ಗೆ ಹೆಚ್‌ಡಿಕೆ ತೀರ್ಮಾನ ಮುಖ್ಯ ಎಂದ ಅಶೋಕ್
ಬೆಂಗಳೂರು: ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಣ್ಣಟ ಅಖಾಡದ ಉಪಚುನಾವಣೆ ಘೋಷಣೆಗೆ ಮುನ್ನವೇ ರಣರಂಗವಾಗುತ್ತಿದೆ. ಇನ್ನೊಂದು ವಾರದಲ್ಲಿ ಉಪಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ ಇದ್ದು, ಡಿಕೆಶಿ- ಹೆಚ್ಡಿಕೆ ಮಧ್ಯೆ ಜಟಾಪಟಿ ತಾರಕಕ್ಕೇರಿದೆ.
ಚನ್ನಪಟ್ಟಣದಲ್ಲಿ ನನ್ನ ಕುಟುಂಬದವರು ನಿಲ್ಲಲ್ಲ. ನಾನೇ ಚನ್ನಪಟ್ಟಣ ಅಭ್ಯರ್ಥಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ನಾನೇ ಎನ್‌ಡಿಎ ಅಭ್ಯರ್ಥಿ ಎಂದು ಹೆಚ್‌ಡಿಕೆ ದಾವಣಗೆರೆಯಲ್ಲಿ ಸ್ವಯಂ ಘೋಷಿಸಿಕೊಂಡಿದ್ದಾರೆ. ಆದರೆ, ಬಿಜೆಪಿಯ ಯೋಗೇಶ್ವರ್ ಕಥೆ ಏನು ಎಂಬ ಪ್ರಶ್ನೆ ಉದ್ಭವಿಸಿದೆ.
ವಿಪಕ್ಷ ನಾಯಕ ಆರ್.ಅಶೋಕ್ ಮಾತಾಡಿ, ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ 2 ಬಾರಿ ಗೆದ್ದಿದ್ದಾರೆ. ಹೀಗಾಗಿ, ಚನ್ನಪಟ್ಟಣ ಬಗ್ಗೆ ಕುಮಾರಸ್ವಾಮಿ ತೀರ್ಮಾನ ಬಹಳ ಮುಖ್ಯ. ನಾವಂತೂ ಯೋಗೇಶ್ವರ್‌ಗೆ ಟಿಕೆಟ್ ಕೊಡ್ಬೇಕು ಅಂತಾ ಕೇಂದ್ರದವರಿಗೆ ಮನವಿ ಮಾಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.