ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ (Channapatna By Election) ರಾಜಕೀಯದಲ್ಲಿ ಎಲ್ಲವೂ ನಿರೀಕ್ಷೆಯಂತೆ ನಡೆದಿದೆ. ಸಾಕಷ್ಟು ಹೈಡ್ರಾಮಾ, ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಡುವೆ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಅಲ್ಲಿಗೆ ಚನ್ನಪಟ್ಟಣದಲ್ಲಿ ಯೋಗೇಶ್ವರ್-ನಿಖಿಲ್ ಕುಮಾರಸ್ವಾಮಿ ನಡ್ವೆ ನೇರಾನೇರ ಸ್ಟಾರ್‌ವಾರ್ ನಡೆಯಲಿದೆ.
ಬೆಂಗಳೂರಿನ ಜೆ.ಪಿ ಭವನದಲ್ಲಿ ನಡೆದ ಸರಣಿ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನೇ ಅಭ್ಯರ್ಥಿ ಮಾಡುವಂತೆ ಒತ್ತಾಯ ಕೇಳಿಬಂತು. ಈ ಬೆನ್ನಲ್ಲೇ ಎನ್‌ಡಿಎ ಟಿಕೆಟ್ ಪಾಲಿಟಿಕ್ಸ್ ಯಡಿಯೂರಪ್ಪ ನಿವಾಸಕ್ಕೆ ಶಿಫ್ಟ್ ಆಯ್ತು. ಧವಳಗಿರಿಯಲ್ಲಿ ನಿಖಿಲ್ ಕುಮಾರಸ್ವಾಮಿ, ಯಡಿಯೂರಪ್ಪನವರ ಕಾಲಿಗೆರಗಿ ಆಶೀರ್ವಾದ ಬೇಡಿದ್ರು. ಯಡಿಯೂರಪ್ಪ ಅವರು ಹೂಗುಚ್ಚ ನೀಡಿ, ವಿಕ್ಟರಿ ಸಿಂಬಲ್ ತೊರಿಸುವ ಮೂಲಕ ತಥಾಸ್ತು ಅಂದ್ರು. ನಿಖಿಲ್ ಕುಮಾರಸ್ವಾಮಿ ಹೆಸ್ರನ್ನು ಖುದ್ದು ಯಡಿಯೂರಪ್ಪ ಪ್ರಕಟಿಸಿದ್ರು. ನಿಖಿಲ್ ಗೆಲುವಿಗಾಗಿ ಹೋರಾಡುವ ಭರವಸೆ ಕೊಟ್ರು. ಕಾರ್ಯಕರ್ತರ ಒತ್ತಡ, ಬದಲಾದ ಸನ್ನಿವೇಶದಲ್ಲಿ ನಿಖಿಲ್ ಹೆಸರು ಘೋಷಿಸಿದ್ದೇವೆ ಅಂತಾ ಹೆಚ್‌ಡಿ ದೇವೇಗೌಡರು ಮತ್ತು ಕುಮಾರಸ್ವಾಮಿ ಹೇಳಿದ್ರು. ಇದನ್ನೂ ಓದಿ: Congress MLA; ಬೇಲೆಕೇರಿ ಅದಿರು ನಾಪತ್ತೆ ಕೇಸ್‌ನಲ್ಲಿ ಸತೀಶ್ ಸೈಲ್ ದೋಷಿ – ಏನಿದು ಪ್ರಕರಣ?
ಕಾಂಗ್ರೆಸ್, ಯೋಗೇಶ್ವರ್ ವಿರುದ್ಧ ಹರಿಹಾಯ್ದರು. ಇನ್ನು, ಇದೇ ಹುಮ್ಮಸ್ಸಿನಲ್ಲಿ 3ನೇ ಪ್ರಯತ್ನದಲ್ಲಿ ಚುನಾವಣಾ ಚಕ್ರವ್ಯೂಹ ಬೇಧಿಸುವ ಮಾತುಗಳನ್ನು ನಿಖಿಲ್ ಕುಮಾರಸ್ವಾಮಿ ಆಡಿದ್ರು. ಆದ್ರೆ, ನಿಖಿಲ್ ಸ್ಪರ್ಧೆ ನಮಗೆ ಮೊದಲೇ ಗೊತ್ತಿತ್ತು ಎಂದು ಸಿಎಂ ಹೇಳಿದ್ದಾರೆ. ನಾಳೆ ಬಿಜೆಪಿ-ಜೆಡಿಎಸ್ ನಾಯಕರ ಜೊತೆಗೂಡಿ ನಿಖಿಲ್ ಕುಮಾರಸ್ವಾಮಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಬಿಹಾರ, ಆಂಧ್ರಕ್ಕೆ ಬಂಪರ್ ಗಿಫ್ಟ್ – 6,798 ಕೋಟಿ ಮೊತ್ತದ 2 ರೈಲ್ವೇ ಯೋಜನೆಗಳಿಗೆ ಕೇಂದ್ರ ಕ್ಯಾಬಿನೆಟ್ ಅಸ್ತು
ಚನ್ನಪಟ್ಟಣದಲ್ಲಿ ಸಿಪಿವೈ ವರ್ಸಸ್ ಹೆಚ್‌ಡಿಕೆ ಕುಟುಂಬ
* 2013 – ಅನಿತಾ ಕುಮಾರಸ್ವಾಮಿ ಸೋಲಿಸಿದ್ದ ಯೋಗೇಶ್ವರ್
* 2018 – ಯೋಗೇಶ್ವರ್ ಸೋಲಿಸಿದ್ದ ಹೆಚ್.ಡಿ ಕುಮಾರಸ್ವಾಮಿ
* 2023 – ಯೋಗೇಶ್ವರ್ ಸೋಲಿಸಿದ್ದ ಹೆಚ್.ಡಿ ಕುಮಾರಸ್ವಾಮಿ
* ಮೂರು ಚುನಾವಣೆಗಳಲ್ಲಿ 3ನೇ ಸ್ಥಾನದಲ್ಲಿದ್ದ ಕಾಂಗ್ರೆಸ್
* 2024 – ಯೋಗೇಶ್ವರ್-ನಿಖಿಲ್ ಕುಮಾರಸ್ವಾಮಿ ಫೈಟ್
ನಿಖಿಲ್ ಕುಮಾರಸ್ವಾಮಿಗೆ 3ನೇ ಎಲೆಕ್ಷನ್
* 2019 – ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋಲು (1.28 ಲಕ್ಷ ಮತಗಳ ಅಂತರ)
* 2023 – ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಸೋಲು (11,000 ಮತಗಳ ಅಂತರ)
* 2024 – ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ