ಮಂಡ್ಯ: ಚನ್ನಪಟ್ಟಣ ಉಪಚುನಾವಣೆಯ (Channapatna By Election) ಬಳಿಕ ಜಮೀರ್ ಅಹಮದ್(Zameer Ahmed) ವಿರುದ್ಧ ಕಾಂಗ್ರೆಸ್ (Congress) ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ.
ಸಿ.ಪಿ.ಯೋಗೇಶ್ವರ್ ಹೇಳಿಕೆಯ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಕಾರ್ಯಕರ್ತರು ಚನ್ನಪಟ್ಟಣದಲ್ಲಿ ಸೋಲುವ ಆತಂಕದಲ್ಲಿದ್ದು, ಇದಕ್ಕೆ ಸಚಿವ ಜಮೀರ್ ಅಹಮದ್ ಹೇಳಿಕೆಯೇ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
- Advertisement 2-
- Advertisement 3-
ಗುರುವಾರ ಸಿ.ಪಿ.ಯೋಗೇಶ್ವರ್ (CP Yogeshwar) ಸುದ್ದಿಗೋಷ್ಠಿ ನಡೆಸಿ ಉಪಚುನಾವಣೆಯ ಫಲಿತಾಂಶದ ಬಗ್ಗೆ ನಿರುತ್ಸಾಹದ ಹೇಳಿಕೆ ನೀಡಿದ್ದರು. ಈಗ ಫೇಸ್‌ಬುಕ್‌ನ ನಾಗಮಂಗಲ ಯುವ ಕಾಂಗ್ರೆಸ್ ಟೀಮ್ ಎಂಬ ಪೇಜ್‌ನಲ್ಲಿ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಪೋಸ್ಟ್ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ವ್ಯತಿರಿಕ್ತವಾಗಿ ತೀರ್ಪು ಬಂದರೆ ಸಚಿವ ಜಮೀರ್ ಅಹಮದ್ ಹೇಳಿಕೆಯೇ ಕಾರಣ ಎಂದು ಬಿಂಬಿತವಾಗುವಂತೆ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಗಂಡಸರಿಗೂ ಫ್ರೀ ಬಸ್ ಪ್ರಯಾಣ ಭಾಗ್ಯ? – ಸುಳಿವು ಕೊಟ್ಟ ಡಿಕೆಶಿ
- Advertisement 4-
ಕುಮಾರಸ್ವಾಮಿ ಹಾಗೂ ಜಮೀರ್ ಫೋಟೋ ಹಾಕಿ ನಿಖಿಲ್ ನನ್ನ ಮಗನ ರೀತಿ ಎಂದು ಹೇಳಿದಾಗಲೇ ಅರ್ಥ ಮಾಡಿಕೊಳ್ಳಬೇಕಾಗಿತ್ತು. ಹೀಗಿದ್ದರೂ ಪ್ರಚಾರಕ್ಕೆ ಕರೆಸಿ ತಪ್ಪು ಮಾಡಲಾಗಿದೆ ಎನ್ನುವ ಮೂಲಕ ಜಮೀರ್ ಅಹಮದ್ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ.
ಸಿ.ಪಿ.ಯೋಗೇಶ್ವರ್ ಅವರು ಜಮೀರ್ ಹೇಳಿಕೆಯಿಂದ ನಷ್ಟವಾಗಿ ನನಗೆ ಸೋಲು ಕೂಡ ಆಗಬಹುದು ಎಂದಿದ್ದರು.