ಚನ್ನಪಟ್ಟಣ ಮೈತ್ರಿ ಕಗ್ಗಂಟು- ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಸುಳಿವು ನೀಡಿದ ಸಿಪಿವೈ

Public TV
1 Min Read
CP Yogeshwar
ರಾಮನಗರ: ಚನ್ನಪಟ್ಟಣ (Channapatna) ಚುನಾವಣಾ ಅಖಾಡ ರಂಗೇರಿದ್ದು, ಮೈತ್ರಿ ಪಕ್ಷದಲ್ಲೀಗ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಉಪಚುನಾವಣೆಯ (By Election) ಟಿಕೆಟ್ ಬಿಜೆಪಿಗೋ ಅಥವಾ ಜೆಡಿಎಸ್‌ಗೋ ಎನ್ನುವ ಗೊಂದಲ ಸೃಷ್ಠಿಯಾಗಿದ್ದು, ಇದರ ನಡುವೆಯೇ ಮೈತ್ರಿ ನಾಯಕರಿಗೆ ಸೆಡ್ಡು ಹೊಡೆಯಲು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ಮುಂದಾಗಿದ್ದಾರೆ.
ಮೈತ್ರಿ ಅಭ್ಯರ್ಥಿಯಾಗಿ ತನಗೇ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿರೋ ಸಿಪಿವೈ, ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ಟಿಕೆಟ್‌ಗಾಗಿ ಕೇಂದ್ರ ಸಚಿವ ಹೆಚ್‌ಡಿಕೆ (HD Kumaraswamy) ಹಾಗೂ ಬಿಜೆಪಿ ವರಿಷ್ಠರ ಬಳಿ ಮನವಿ ಮಾಡಿರೋ ಸಿಪಿವೈ ಸ್ಪರ್ಧೆಗೆ ಅವಕಾಶ ಕೋರಿದ್ದಾರೆ. ಆದರೆ ಸಿಪಿವೈಗೆ ಟಿಕೆಟ್ ಕೊಡಲು ಕೇಂದ್ರ ಸಚಿವ ಹೆಚ್‌ಡಿಕೆ ಹಿಂದೇಟು ಹಾಕುತ್ತಿದ್ದು, ಪುತ್ರನ ನಿಲ್ಲಿಸಿ ಗೆಲ್ಲಿಸುವ ಲೆಕ್ಕಾಚಾರ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ (JDS) ಅಸ್ತಿತ್ವ ಉಳಿಸಿಕೊಳ್ಳುವ ತಂತ್ರಗಾರಿಕೆ ನಡೆಸಿದ್ದಾರೆ ಎಂಬ ಚರ್ಚೆ ಜೆಡಿಎಸ್ ವಲಯದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: NEET-UG ಕೌನ್ಸೆಲಿಂಗ್ ಮುಂದೂಡಿಕೆ
ಇನ್ನೂ ಕುಮಾರಸ್ವಾಮಿ ಅವರ ಈ ತಂತ್ರ ಅರಿತ ಸಿಪಿ ಯೋಗೇಶ್ವರ್, ಪಕ್ಷದ ವರಿಷ್ಠರು ಘೋಷಿಸುವ ಮುನ್ನವೇ ನಾನೇ ಮೈತ್ರಿ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಹೆಚ್‌ಡಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿ ಟಿಕೆಟ್ ಪಡೆಯುವ ಜಾಣ ನಡೆ ಅನುಸರಿಸಿದ್ದಾರೆ. ಇಷ್ಟಾದರೂ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿ ಸ್ಪರ್ಧೆಗೆ ಸಿಪಿವೈ ತಯಾರಿ ನಡೆಸಿದ್ದು, ಸೋಮವಾರದಿಂದ ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲು ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಕಾಲ್ತುಳಿತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಬಾರದು: ಬೋಲೇನಾಥ ಬಾಬಾ

Share This Article