ಬೆಂಗಳೂರು: ಚನ್ನಪಟ್ಟಣ ಉಪಸಮರದ (Channapatna BY Election) ಕಾವು ಜೋರಾಗಿದೆ. ಟಿಕೆಟ್ ಯಾವ ಪಕ್ಷದ ಪಾಲಾಗಬೇಕು ಎಂಬ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮತ್ತು ಕುಮಾರಸ್ವಾಮಿಯಲ್ಲಿ ಒಮ್ಮತ ಮೂಡದ ಕಾರಣ ನಿರೀಕ್ಷಿತ ಎನ್ನುವಂತಹ ಬೆಳವಣಿಗೆಗಳು ನಡೀತಿವೆ. ಬಿಜೆಪಿ-ಜೆಡಿಎಸ್ ಹಗ್ಗಜಗ್ಗಾಟದಲ್ಲಿ ಯೋಗೇಶ್ವರ್ (CP Yogeshwara) ಪಕ್ಷೇತರರಾಗಿ ಸ್ಪರ್ಧೆ ಮಾಡೋದಾಗಿ ಘೋಷಿಸಿದ್ದಾರೆ.
ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೋಮವಾರ ಹುಬ್ಬಳ್ಳಿಗೆ ತೆರಳಿ ಸಭಾಪತಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದ್ರೆ, ಬಿಜೆಪಿಯನ್ನು ತೊರೆದಿಲ್ಲ. ಬಿಜೆಪಿ ಟಿಕೆಟ್‌ಗಾಗಿಯೇ (BJP Ticket) ಕೊನೆ ಕ್ಷಣದ ಪ್ರಯತ್ನ ನಡೆಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನು ಫೋನ್ ಮೂಲಕ ಸಂಪರ್ಕಿಸಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಕೊಡಿ ಎಂದು ಈಗಲೂ ಕೇಳ್ತಿದ್ದೇನೆ. ಕಾಂಗ್ರೆಸ್‌ಗೆ ಹೋಗಿ ಅಲ್ಲಿಂದ ಸ್ಪರ್ಧೆ ಮಾಡೋ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ನಾಳೆವರೆಗೂ ಕಾಯ್ತೇನೆ ಎಂದು ಯೋಗೇಶ್ವರ್ ಹೇಳಿದ್ದಾರೆ. ಇದನ್ನೂ ಓದಿ: By Election | ಚನ್ನಪಟ್ಟಣದಲ್ಲಿ ಡಿ.ಕೆ ಸುರೇಶ್ ಸ್ಪರ್ಧೆಗೆ ಒತ್ತಡ ಇದೆ – ಡಿ.ಕೆ ಶಿವಕುಮಾರ್
ಕುಮಾರಸ್ವಾಮಿ ಹೇಳಿದಂತೆ ನಾನು ಕಾಂಗ್ರೆಸ್ಸಿನ ಯಾರನ್ನು ಸಂಪರ್ಕ ಮಾಡಿಲ್ಲ. ಆದ್ರೆ ಮಂಗಳವಾರ ಏನಾಗುತ್ತೆ ಗೊತ್ತಿಲ್ಲ ಅಂತಾನೂ ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಎಲ್ಲಾ ಆಯ್ಕೆಗಳನ್ನು ಮಕ್ತವಾಗಿರಿಸಿಕೊಂಡಿದ್ದಾರೆ. ಅತ್ತ, ಸಿಎಂ, ಡಿಸಿಎಂ ಸೇರಿ ಕಾಂಗ್ರೆಸ್‌ನ ಹಲವು ನಾಯಕರು ಕೂಡ ಯೋಗೇಶ್ವರ್ ಜೊತೆ ಮಾತಾಡಿಲ್ಲ ಎಂದಿದ್ದಾರೆ. ಡಿಕೆ ಶಿವಕುಮಾರ್ ಅವ್ರಂತೂ, ಸಿಪಿವೈ ರಾಜೀನಾಮೆ ವಿಚಾರ ಗೊತ್ತೇ ಇಲ್ಲ ಎಂಬಂತೆ ವರ್ತಿಸಿದ್ದಾರೆ. ಆದರೆ, ಯಾವುದಕ್ಕೂ ಇರಲಿ ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ದಪಡಿಸಿ ಎಂದು ಕೆಪಿಸಿಸಿ ಕಚೇರಿ ಸಿಬ್ಬಂದಿಗೆ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ, ಯೋಗೇಶ್ವರ್ ದುಡುಕಲ್ಲ ಎಂಬ ವಿಶ್ವಾಸವನ್ನು ಅಶೋಕ್ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೊಲೀಸರು ಮುಕ್ತ, ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ: ಸಿಎಂ
ಯೋಗೇಶ್ವರ್ ರೆಬೆಲ್ ನಡೆಗೆ ಕಾರಣವೇನು?
* ಯೋಗೇಶ್ವರ್ ವಿಚಾರದಲ್ಲಿ ಆರಂಭದಲ್ಲಿ ಹೆಚ್‌ಡಿಕೆ ಅಂತರ
* ಜೆಡಿಎಸ್ ಚಿನ್ಹೆಯಿಂದ ಯೋಗೇಶ್ವರ್ ಸ್ಪರ್ಧಿಸಬೇಕು ಎಂಬ ಷರತ್ತು
* ಜೆಡಿಎಸ್ ಚಿನ್ಹೆಯಿಂದ ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಜೆಡಿಎಸ್ ಘಟಕದಿಂದ ವಿರೋಧ
* ಜೆಡಿಎಸ್ ಚಿನ್ಹೆಯಡಿ ಸ್ಪರ್ಧಿಸಲು ಯೋಗೇಶ್ವರ್ ಹಿಂದೇಟು
* ಎನ್‌ಡಿಎ ಟಿಕೆಟ್ ಖಚಿತವಾಗದ ಕಾರಣ ರೆಬೆಲ್ ಆದ ಯೋಗೇಶ್ವರ್
ಯೋಗೇಶ್ವರ್ ನಡೆ ದೋಸ್ತಿಗಳಿಗೆ ತಲೆ ಬಿಸಿ ತಂದಿದೆ. ಟಿಕೆಟ್ ಗೊಂದಲಕ್ಕೆ ರಾಜ್ಯ ಬಿಜೆಪಿಯ ಕೆಲ ನಾಯಕರು ಕಾರಣ ಎಂದು ಕೇಂದ್ರ ಮಂತ್ರಿ ಕುಮಾರಸ್ವಾಮಿ ಕಳೆದ ರಾತ್ರಿಯೇ ಅಸಮಾಧಾನ ವ್ಯಕ್ತಪಡಿಸಿದ್ರು. ಯೋಗೇಶ್ವರ್ ಸ್ಪರ್ಧೆ ವಿಚಾರವಾಗಿ ರಾಜ್ಯ ಬಿಜೆಪಿ ನಾಯಕರಲ್ಲೂ ಭಿನ್ನ ಅಭಿಪ್ರಾಯಗಳು ಇರೋದು ಗೋಚರವಾಗಿತ್ತು. ಕೆಲವರು ಯೋಗೇಶ್ವರ್‌ಗೆ ಟಿಕೆಟ್ ಸಿಗ್ಬೇಕು ಎಂದು ಆಗ್ರಹಿಸಿದ್ರೆ, ಬಿಎಸ್ ಯಡಿಯೂರಪ್ಪ ಸೇರಿ ಇನ್ನೂ ಕೆಲವರು ಇದು ಜೆಡಿಎಸ್ ಕ್ಷೇತ್ರ ಎಂಬರ್ಥದ ಹೇಳಿಕೆ ನೀಡಿದ್ರು. ಇದು ಯೋಗೇಶ್ವರ್ ಅಸಮಾಧಾನಕ್ಕೂ ಕಾರಣವಾಗಿತ್ತು. ಇದನ್ನು ಅಶೋಕ್ ಆಕ್ಷೇಪಿಸಿದ್ರು. ಅಂತಿಮವಾಗಿ ಯೋಗೇಶ್ವರ್ ರೆಬೆಲ್ ಹಾದಿ ತುಳಿದಿರೋದ್ರಿಂದ ಜೆಡಿಎಸ್ ನಡೆ ಕುತೂಹಲ ಕೆರಳಿಸಿದೆ.