ರಾಮನಗರ: ನಾನು ಸ್ಪರ್ಧೆ ಮಾಡಬೇಕು ಎಂದರೂ ಅದನ್ನು ಸಮಿತಿ ತೀರ್ಮಾನ ಮಾಡುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ (Channapatna By Clection) ಸ್ಪರ್ಧೆಯ ಬಗ್ಗೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಉಪಚುನಾವಣೆ ಸಂಬಂಧ ಸಾಕಷ್ಟು ಸಚಿವರು, ಶಾಸಕರು ಸಮಿತಿಯಲ್ಲಿದ್ದಾರೆ. ಎಲ್ಲರೂ ಸೇರಿ ಅಭ್ಯರ್ಥಿ ಆಯ್ಕೆಯನ್ನು ಮಾಡಲಾಗುತ್ತದೆ. ಸೂಕ್ತ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.
Advertisement
ಡಿಕೆಶಿಗೆ ಇಷ್ಟು ದಿನ ಚನ್ನಪಟ್ಟಣ ನೆನಪಾಗಿರಲಿಲ್ವಾ ಎಂಬ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರೇ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಅಂತ ತಿಳಿದುಕೊಂಡಿದ್ದೆ. ಆದರೆ ಅಧಿಕಾರಿಗಳ ಸಭೆ ಮಾಡಿದ ಬಳಿಕ ಸಮಸ್ಯೆ ಗೊತ್ತಾಗಿದೆ. ಇಲ್ಲಿ ಯಾವುದೇ ಕೆಲಸ ಆಗಿಲ್ಲ ಎನ್ನುವುದು ಗೊತ್ತಾಯಿತು. ಹಾಗಾಗಿ ನಮ್ಮ ಸ್ಟೈಲ್ ನಲ್ಲಿ ಜನರ ಸಮಸ್ಯೆ ಆಲಿಸುತ್ತಿದ್ದೇನೆ ಎಂದು ಹೇಳಿದರು.
Advertisement
ಅಧಿಕಾರಿಗಳನ್ನ ಹೆದರಿಸಿ ನಾವು ಕೆಲಸ ಮಾಡುತ್ತಿಲ್ಲ. ನಮ್ಮ ಕೆಲಸದ ಸ್ಟೈಲ್ ಇರುವುದು ಹೀಗೆ. ಅಧಿಕಾರಿಗಳ ಹೆದರಿಸಿದ್ರೆ ಅವರು ಹೋಗಿ ದೂರು ಕೊಡಲಿ ಎಂದು ಹೆಚ್‌ಡಿಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಸಲಿಂಗಕಾಮ ಪ್ರಕರಣ – ಸೂರಜ್ ರೇವಣ್ಣ 8 ದಿನ ಸಿಐಡಿ ಕಸ್ಟಡಿಗೆ
Advertisement
Advertisement
ಒಂದು ಸಮುದಾಯದಲ್ಲಿ ಮತ ಹೆಚ್ಚಳ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಕಳೆದ ಚುನಾವಣೆಯಲ್ಲಿ ಕೆಲ ಮುಸ್ಲಿಮರ ವೋಟ್‌ಗಳನ್ನು ತೆಗೆದುಹಾಕಲಾಗಿದೆ. ಈ ಬಗ್ಗೆ ಬಂದು ಅವರು ಅಳಲು ತೋಡಿಕೊಂಡಿದ್ದರು. ಅಂತವರನ್ನ ಮತ್ತೆ ನೋಂದಣಿ ಮಾಡ್ತಿದ್ದಾರೆ. ಹೊರಗಿನವರನ್ನ ತಂದು ಇಲ್ಲಿ ಸೇರಿಸಲು ಆಗುವುದಿಲ್ಲ. ಸುಮ್ಮನೆ ಯಾರು ಏನು ಬೇಕಾದರೂ ಹೇಳ್ತಾರೆ.ಬೇಕಿದ್ರೆ ಎಲ್ಲವನ್ನೂ ಚೆಕ್ ಮಾಡಿಕೊಳ್ಳಲಿ ಎಂದರು.