ದಾವಣಗೆರೆ: ಚನ್ನಗಿರಿ (Channagiri) ಮತ್ತು ಸಂತೆಬೆನ್ನೂರು ಪೊಲೀಸರು (Police) ಕಾರ್ಯಾಚರಣೆ ನಡೆಸಿ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚನ್ನಗಿರಿಯ ಮಹಮ್ಮದ್ ಇನಾಯತ್ (21), ಉಮ್ಮರ್ ಫಾರೂಕ್ (21) ಶಾಹಿದ್ ಖಾಜಿ (24), ಮೈಸೂರ ನಿವಾಸಿಗಳಾದ ಖುರಂ ಖಾನ್ (25), ಸೈಯದ್ ಸೈಫುಲ್ಲಾ (24), ಖಾಷಿಫ್ ಅಹಮದ್(25) ಹಾಗೂ ತುಮಕೂರು ನಿವಾಸಿ ಖುರಂ ಖಾನ್ (25) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 50ಕ್ಕೂ ಹೆಚ್ಚು ಬೇಕರಿ ಮಾಲೀಕರಿಗೆ ಬೆದರಿಕೆ – ಬೆಂಗಳೂರು ಯೂಟ್ಯೂಬರ್ ಅರೆಸ್ಟ್
ಆರೋಪಿಗಳು ಸೆ.30 ರಂದು ಚನ್ನಗಿರಿಯ ಜೋಳದಾಳ ಬಳಿ ಅಡಿಕೆ ವ್ಯಾಪಾರಿ ಅಶೋಕ್ ಎಂಬವರನ್ನು ಅಡ್ಡಗಟ್ಟಿ ಚಾಕು ತೋರಿಸಿ 17.24 ಲಕ್ಷ ರೂ. ದರೋಡೆ ಮಾಡಿದ್ದರು. ಬಳಿಕ ವಾಹನದ ಕೀ ಕಸಿದುಕೊಂಡು ಪರಾರಿಯಾಗಿದ್ದರು.
ಅಡಿಕೆ ಕೊಡಿಸುವ ಮಧ್ಯಸ್ಥಿಕೆ ವಹಿಸಿದ್ದ ಮಹಮದ್ ಇನಾಯತುಲ್ಲಾ ಎಂಬಾತನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಆರೋಪಿಗಳಿಂದ 7.37 ಲಕ್ಷ ರೂ. ನಗದು, 2 ಕಾರು, 2 ಬೈಕ್, 9 ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗಳ ಅರೆಸ್ಟ್