ದಾವಣಗೆರೆ: ನನ್ನ ಚುನಾವಣೆಯಲ್ಲಿ ದುಡಿಯದವನು ನನ್ನ ಮನೆಗೆ ಬಂದರೆ ಅವನು ಮೂರು ಬಿಟ್ಟವನು. ಅವರನ್ನು ದೇವರು ನೋಡಿಕೊಳ್ಳುತ್ತಾನೆ ಎಂದು ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ (Congress MLA) ಶಿವಗಂಗಾ ಬಸವರಾಜ್ (Shivaganga Basavaraj) ಹೇಳಿದ್ದಾರೆ.
ಚನ್ನಗಿರಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನಗೆ ಮತ ಹಾಕದವರ ಹಾಗೂ ಜೊತೆಗೆ ಇದ್ದು ಮೋಸ ಮಾಡಿದರ ವಿರುದ್ದ ಹರಿಹಾಯ್ದರು. ಇದನ್ನೂ ಓದಿ: ವೀಡಿಯೋ ಮಾಡದಂತೆ ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆಗೆ ಯತ್ನಿಸಿದ ಪುಂಡ
Advertisement
ನಾನು ಗೆದ್ದ ನಂತರ ನನಗೆ ಗೊತ್ತಿಲ್ಲದೆ ನನ್ನ ಮನೆಗೆ ಬಂದು ನನಗೆ ಹಾರ ಹಾಕಿ ಹೋಗಿರಬಹುದು. ಅವರು ಮೂರು ಬಿಟ್ಟವರು. ನಾನು ದೇವರನ್ನು ಬಹಳ ನಂಬುತ್ತೇನೆ. ಈ ವಿಚಾರದಲ್ಲಿ ಯಾವುದೇ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಅಧಿಕಾರ ಇಲ್ಲದೇ ನಾಲ್ಕು ವರ್ಷ ನಿಮ್ಮ ಜೊತೆಯಲ್ಲಿ ಇದ್ದು ಪಂಚಾಯತಿ ಚುನಾವಣೆ ಮಾಡಿದ್ದೇನೆ. ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದ್ದೇನೆ ಎಂದು ತಮಗೆ ಮತ ಹಾಕದವರ ವಿರುದ್ದ ಶಾಸಕ ಶಿವಗಂಗಾ ಬಸವರಾಜ್ ಹರಿಹಾಯ್ದರು.
Advertisement
ಶಿವಗಂಗಾ ಬಸವರಾಜ್ ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಸುದ್ದಿಯಾಗಿದ್ದರು. ಈಗ ಅಭಿನಂದನಾ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಭಾಷಣ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.