ಬದಲಾಗುತ್ತಾ ನಮ್ಮ ಮೆಟ್ರೋ ಹೆಸರು?

Public TV
1 Min Read
Namma Metro

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯ ಹೆಮ್ಮೆ ನಮ್ಮ ಮೆಟ್ರೋ ಹೆಸರು ಬದಲಾವಣೆಯ ಚರ್ಚೆ ಜೋರಾಗಿದೆ. ಸಚಿವ ಎಂಬಿ ಪಾಟೀಲ್ (MB Patil) ಅವರು ನಮ್ಮ ಮೆಟ್ರೋ ಬದಲು ಬಸವಣ್ಣ ಅಂತಾ ಹೆಸರಿಡಲು ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಅಂತಿದ್ದಾರೆ. ಸಚಿವರ ನಡೆಗೆ ಬೆಂಗಳೂರಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಹೌದು, ಕಳೆದ ವಾರದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಭಾರೀ ಸುದ್ದಿಯಲ್ಲಿದ್ದಾರೆ. ಕಾರಣ ಕರ್ನಾಟಕದ ಹೆಸರು ಮತ್ತು ನಮ್ಮ ಮೆಟ್ರೋ ಹೆಸರು ಬದಲಾವಣೆ (Namma Metro Name Change) ವಿಚಾರದಲ್ಲಿ. ಕರ್ನಾಟಕವನ್ನ ಬಸವೇಶ್ವರರ ನಾಡು ಅಂತಾ ಹೆಸರಿಡಬೇಕು ಅಂತಿದ್ದಾರೆ. ಜೊತೆಗೆ ನಮ್ಮ ಮೆಟ್ರೋಗೆ ಬಸವೇಶ್ವರ ಮೆಟ್ರೋ ಅಂತಾ ಹೆಸರಿಡಬೇಕೆಂದು ಎಂಬಿ ಪಾಟೀಲ್‍ಗೆ ಮನವಿ ಬಂದಿದೆಯಂತೆ. ಈ ಬಗ್ಗೆ ಸಿಎಂ ಜೊತೆ ಚರ್ಚೆಗೂ ಸಚಿವರು ಮುಂದಾಗಿದ್ದಾರಂತೆ. ಇದಕ್ಕೆ ನಮ್ಮ ಮೆಟ್ರೋ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಇದನ್ನೂ ಓದಿ: ಭೀಕರ ರೈಲು ದುರಂತ ಪ್ರಕರಣ- ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ

ನಮ್ಮ ಮೆಟ್ರೋ ಎಂಬುದು ಬೆಂಗಳೂರಿಗರ ಹೆಮ್ಮೆ. ಹೆಸರು ಖ್ಯಾತಿ ಆಗಿದೆ ಹೆಸರು ಬದಲಾವಣೆ ಮಾಡೋದು ಸಮಂಜಸ ಅಲ್ಲ. ಬಸವೇಶ್ವರರ ಹೆಸರಿನ ಬಗ್ಗೆ ನಮಗೆ ತಕರಾರು ಇಲ್ಲ. ಅವರು ವಿಶ್ವ ವಿಖ್ಯಾತರು. ವಿಶ್ವ ಮಟ್ಟದಲ್ಲಿ ಖ್ಯಾತಿ ಆಗುವಂತಹ ಯೋಜನೆಗೆ ಅವರ ಹೆಸರಿಡಲಿ ಅಂತ ಎಎಬಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಸಮಾಧಾನ ಹೊರಹಾಕಿದ್ದಾರೆ.

ಒಟ್ಟಾರೆ ವಿರೋಧದ ಮಧ್ಯೆ ನಮ್ಮ ಮೆಟ್ರೋ ಹೆಸರು ಬದಲಾವಣೆಗೆ ಮುನ್ನೆಲೆಗೆ ಬರುತ್ತಾ ಅಥವಾ ಸ್ಥಬ್ಧ ಆಗುತ್ತಾ ಕಾದು ನೋಡಬೇಕಿದೆ.

Web Stories

Share This Article