ನವದೆಹಲಿ: ಭಾರತದ ಪ್ರತಿಯೊಬ್ಬ ನಾಗರೀಕನಿಗೆ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರವಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಮಾಹಿತಿಯನ್ನು ನೀಡಲು ಸರ್ಕಾರ ನಿರಾಕರಿಸುವಂತಿಲ್ಲವೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಗೆ ಸರ್ಕಾರ ತರಲು ಬಯಸಿರುವ ತಿದ್ದುಪಡಿಯನ್ನು ವಿರೋಧಿಸಿರುವ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಜನರಿಂದ ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
Advertisement
ಪ್ರತಿಯೊಬ್ಬ ಭಾರತೀಯನೂ ಸತ್ಯವನ್ನು ತಿಳಿದುಕೊಳ್ಳಲು ಅರ್ಹನಾಗಿರುತ್ತಾನೆ. ಆದರೆ ಬಿಜೆಪಿ ಸತ್ಯವನ್ನು ಮರೆಮಾಡಲು ಮಾಹಿತಿ ಹಕ್ಕು ಕಾಯ್ದೆಗೆ ಬದಲಾವಣೆಯನ್ನು ತರಲು ಹೊರಟಿದ್ದಾರೆ. ಸರ್ಕಾರದ ಯೋಜನೆಗಳನ್ನು ಶ್ರೀಸಾಮಾನ್ಯರು ಪ್ರಶ್ನಿಸಬಾರದು ಎಂಬ ಯೋಚನೆಯಿಂದ ಬಿಜೆಪಿ ಈ ಯೋಜನೆಗೆ ಕೈ ಹಾಕಿದೆ. ಒಂದು ವೇಳೆ ಮಾಹಿತಿ ಹಕ್ಕು ಕಾಯ್ದೆಗೆ ಬದಲಾವಣೆ ತಂದರೆ ಅದು ಉಪಯೋಗಕ್ಕೆ ಬಾರದ ಕಾಯ್ದೆಯಾಗುತ್ತದೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ.
Advertisement
Every Indian has the right to know the truth. The BJP believes the truth must be hidden from the people and they must not question people in power. The changes proposed to the RTI will make it a useless Act. They must be opposed by every Indian. #SaveRTI pic.twitter.com/4mjBTwQnYK
— Rahul Gandhi (@RahulGandhi) July 19, 2018
Advertisement
ಪಾರದರ್ಶಕತೆ ಮತ್ತು ಮಾಹಿತಿಗಾಗಿರುವ ಈ ಮಾಹಿತಿ ಹಕ್ಕು ಕಾಯ್ದೆ ಶ್ರೀಸಾಮಾನ್ಯರಿಗೆ ಅತ್ಯಂತ ಅವಶ್ಯಕ ಈ ಕಾಯ್ದೆಗೆ ಯಾವುದೇ ಬದಲಾವಣೆಯನ್ನು ಮಾಡಬಾರದೆಂದು ಆಗ್ರಹಿಸಿದ್ದಾರೆ.
Advertisement
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ವಿಚಾರವನ್ನು ಹೊಂದಿದ್ದು, ಸಂಸತ್ತಿನಲ್ಲಿ ಸರ್ಕಾರ ವಿಷಯ ಮಂಡಿಸುವ ಮೊದಲೇ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿಗೆ ತಮ್ಮ ವಿರೋಧವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ.