Connect with us

ಅಭಿಮಾನಿಗಳೆದುರು ತಲೈವಾ ರಾಜಕೀಯ ಪ್ರವೇಶ ಘೋಷಣೆ- ಬಾಬಾ ಮುದ್ರೆ ಪ್ರದರ್ಶಿಸಿ ಭಗವದ್ಗೀತೆ ಪಠಣ

ಅಭಿಮಾನಿಗಳೆದುರು ತಲೈವಾ ರಾಜಕೀಯ ಪ್ರವೇಶ ಘೋಷಣೆ- ಬಾಬಾ ಮುದ್ರೆ ಪ್ರದರ್ಶಿಸಿ ಭಗವದ್ಗೀತೆ ಪಠಣ

ಚೆನ್ನೈ: ತಮಿಳುನಾಡಿನಲ್ಲಿ ರಜಿನಿ ಯುಗಾರಂಭವಾಗಿದೆ. ರಾಜಕೀಯ ಪ್ರವೇಶದ ಬಗ್ಗೆ ತಲೈವಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಚೆನ್ನೈನ ರಾಘವೇಂದ್ರ ಹಾಲ್‍ನಲ್ಲಿ ನಡೆದ ಅಭಿಮಾನಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಜನಿಕಾಂತ್, ಸ್ವಂತ ಪಕ್ಷ ಸ್ಥಾಪಿಸುತ್ತಿರುವುದಾಗಿ ಘೋಷಿಸಿದ್ರು. ಬಾಬಾನ ಮುದ್ರೆ ಪ್ರದರ್ಶಿಸಿ, ಭಗವದ್ಗೀತೆಯ ಶ್ಲೋಕ ಪಠಿಸಿದ್ರು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಾಗಿರುವ ಕಾರಣ, ತಮಿಳರಿಗಾಗಿ ನನ್ನ ಹೋರಾಟ ಮುಂದುವರೆಸುವುದಾಗಿ ಹೇಳಿದ್ರು.

ಪಕ್ಷದ ಹೆಸರನ್ನ ಲೋಕಸಭಾ ಚುನಾವಣೆ ಹೊತ್ತಲ್ಲಿ ಬಹಿರಂಗಗೊಳಿಸುತ್ತೇನೆ. ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದಾಗಿ ತಿಳಿಸಿರುವ ರಜನಿ, ನಿಮ್ಮೆಲ್ಲರ ಸಹಕಾರ ನನಗೆ ಅಗತ್ಯವಾಗಿ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ನಮ್ಮ ಜನರೇ ನಮ್ಮ ಶಕ್ತಿ. ಸರ್ಕಾರ ರಚನೆ ಅಷ್ಟು ಸುಲಭವಲ್ಲ. ಕಳೆದ ಒಂದು ವರ್ಷದಿಂದ ತಮಿಳುನಾಡು ಜನ ರೋಸಿ ಹೋಗಿದ್ದಾರೆ. ನಿಮ್ಮೆಲ್ಲರ ಆಶಿರ್ವಾದ ಇದ್ದರೆ ಉತ್ತಮ ಆಡಳಿತ ನಡೆಸುತ್ತೇನೆ ಅಂದ್ರು.

ತಲೈವಾ ರಾಜಕೀಯ ಪ್ರವೇಶ ಘೋಷಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಈ ಸಂಭ್ರಮಾಚರಣೆ ವೇಳೆ ರಜಿನಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದ ಘಟನೆಯೂ ನಡೆದಿದೆ.

https://www.youtube.com/watch?v=0PzGj6rn8yc

https://www.youtube.com/watch?v=8PQP7EkcPPk

Advertisement
Advertisement